News Kannada
Tuesday, September 27 2022

ಮೈಸೂರು

ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಸಮಾಧಿ ನೋಡಿದ್ದೀರಾ? - 1 min read

Photo Credit :

ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಸಮಾಧಿ ನೋಡಿದ್ದೀರಾ?

ಚಾಮರಾಜನಗರ: ರಾಜ್ಯದ ಮೊದಲ ಮಹಿಳಾ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಜಿಲ್ಲೆಯ ದಿವಂಗತ ಕೆ. ಎಸ್. ನಾಗರತ್ನಮ್ಮ ಅವರನ್ನು ಜನ ಸೇರಿದಂತೆ ಸರ್ಕಾರ ಮರೆತಂತಿದೆ. ಇದಕ್ಕೆ ಶಿಥಿಲಾವಸ್ಥೆಯಲ್ಲಿ ಅವರ ಸಮಾಧಿ ಸಾಕ್ಷಿಯಾಗಿದೆ.

ಗುಂಡ್ಲುಪೇಟೆ ತಾಲೂಕಿನ ಕಬ್ಬಳ್ಳಿ ಗ್ರಾಮದವರಾದ ನಾಗರತ್ನಮ್ಮನವರು ರಾಜಕೀಯವಾಗಿ ಗುರುತಿಸಿಕೊಂಡು ಉಕ್ಕಿನ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದವರು. ಮನೆಯಿಂದ ಹೊರ ಬರಲು ಹಿಂಜರಿಯುತ್ತಿದ್ದ ಕಾಲದಲ್ಲಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನಾಗರತ್ನಮ್ಮನವರು ಸಚಿವೆಯಾಗಿ, ಸ್ಪೀಕರ್ ಆಗಿ ಜನಸೇವೆ ಮಾಡಿದವರು.

ಇವರ ರಾಜಕೀಯ ಹಿನ್ನೆಲೆಯನ್ನು ಕೆದಕಿ ನೋಡಿದರೆ ಅವರ ರಾಜಕೀಯ ಸಾಧನೆ ಅಚ್ಚರಿ ಮೂಡಿಸುತ್ತದೆ. ಜತೆಗೆ ತಾಲೂಕಿನ ಅಭಿವೃದ್ಧಿಗಾಗಿ ಮಾಡಿದ ಕಾರ್ಯಗಳು ಕಣ್ಮುಂದೆ ನಿಲ್ಲುತ್ತದೆ.

1957, 1962, 1967, 1972, 1979, 1983, 1989ರಲ್ಲಿ ನಡೆದ ಚುನಾವಣೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದಿಂದ ಸ್ಪರ್ಧಿಸಿ 7 ಬಾರಿ ಶಾಸಕರಾಗಿ 2 ದಶಕಗಳ ಕಾಲ ರಾಜಕಾರಣ ಮಾಡಿದ ಸಾಧಕಿ ಮಹಿಳೆಯಾಗಿದ್ದಾರೆ. 1972ರಿಂದ 1978ರವರೆಗೆ ಕರ್ನಾಟಕದ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯದ ಮೊಟ್ಟ ಮೊದಲ ಮಹಿಳಾ ಸ್ಪೀಕರ್ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. 1985ರಲ್ಲಿ ಪ್ರತಿಪಕ್ಷದ ನಾಯಕಿಯಾಗಿ, 1989ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪರವರ ಸಚಿವ ಸಂಪುಟದಲ್ಲಿ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆಯಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಅಧಿಕಾರವಧಿಯಲ್ಲಿ ಗುಂಡ್ಲುಪೇಟೆ ಹಲವು ರೀತಿಯ ಅಭಿವೃದ್ಧಿಯನ್ನು ಕಂಡಿದ್ದಾಗಿ ಹೇಳುವ ಜನ ನಲ್ಲೂರು ಜಲಾಶಯ ನಿರ್ಮಾಣ ಹಾಗೂ ಶಿವಪುರ ಗ್ರಾಮದಲ್ಲಿ ಕಲ್ಕಟ್ಟಕೆರೆ ನಿರ್ಮಿಸಿದನ್ನು ನೆನಪಿಸಿಕೊಳ್ಳುತ್ತಾರೆ. ಕೆ.ಎಸ್.ನಾಗರತ್ನಮ್ಮ ಅಭಿಮಾನದಿಂದಾಗಿ ಕಬ್ಬಳ್ಳಿ ಸಾಹುಕಾರ್ ಕೆ.ಸಿ.ಸುಬ್ಬಣ್ಣ ಹೆಸರಿನಲ್ಲಿ ಪಟ್ಟಣದಲ್ಲಿ ಸಾರ್ವಜನಕರ ಆಸ್ಪತ್ರೆಯನ್ನು ತೆರೆಯಲಾಯಿತು. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದಾಗಿ ಕೆ.ಎಸ್.ನಾಗರತ್ನಮ್ಮ ಬಾಲಕಿಯರ ಪ್ರೌಢಶಾಲೆ ಹಾಗೂ ಪದವಿ ಪೂರ್ವಕಾಲೇಜನ್ನು ಸ್ಥಾಪಿಸಲಾಗಿದೆ.

ಇವರು ಕಾಂಗ್ರೆಸ್ ನ್ನು ಪ್ರತಿನಿಧಿಸುತ್ತಿದ್ದರಲ್ಲದೆ, ಕ್ಷೇತ್ರವು ಕಾಂಗ್ರೆಸ್ ನ ಹಿಡಿತದಲ್ಲೇ ಇತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಜತೆಗೆ ಜನ ಅಮ್ಮಾ ಎಂದೇ ಕರೆಯುತ್ತಿದ್ದರು. ಅವರು ನಿಧನರಾದ ಬಳಿಕ ನೆನಪಿಗಾಗಿ ಕಬ್ಬಳ್ಳಿಯಲ್ಲಿ ಸಮಾಧಿಯನ್ನು ನಿರ್ಮಿಸಲಾಗಿದೆ. ಆದರೆ ಈ ಸಮಾಧಿ ಇಂದು ದುಸ್ಥಿತಿಗೆ ತಲುಪಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿದ್ದರೂ ಇವರ ಸಮಾಧಿಯತ್ತ ಯಾರೂ ಕೂಡ ಗಮನಹರಿಸಿದಂತೆ ಕಾಣುತ್ತಿಲ್ಲ ಪರಿಣಾಮ ಸಮಾಧಿ ಸುತ್ತಲೂ ಗಿಡಗಂಟಿಗಳು ಬೆಳೆದು ಕೊಂಡೆಯಾಗಿದೆ. ರಾತ್ರಿಯಾಯಿತೆಂದರೆ ಪುಂಡ ಪೋಕರಿಗಳಿಗೆ ಅನೈತಿಕ ಚಟುವಟಿಕೆಗೆ ತಾಣವಾಗಿಯೂ ಮಾರ್ಪಾಡಾಗಿದೆ.

ಇನ್ನಾದರೂ ಸಂಬಂಧಿಸಿದವರು ಇತ್ತಗಮನಹರಿಸಿ ದುಸ್ಥಿತಿಗೊಳಗಾಗಿರುವ ಸಮಾಧಿಯನ್ನು ರಕ್ಷಿಸುವ ಕೆಲಸವನ್ನು ಮಾಡಬೇಕಾಗಿದೆ.

See also  ಮೈಸೂರಿನಲ್ಲಿ ಕುಡಿಯುವ ನೀರಿನ ಹಾಹಾಕಾರ: ದನದ ತೊಟ್ಟಿಯ ನೀರನ್ನು ಕುಡಿಯುತ್ತಿರುವ ಜನತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು