News Kannada
Thursday, October 06 2022

ಮೈಸೂರು

ಇನ್ಮುಂದೆ ಡಿಎಲ್-ಹೆಲ್ಮೆಟ್ ಇಲ್ಲದೆ ಕಾಲೇಜು ಪ್ರವೇಶಿಸುವಂತಿಲ್ಲ! - 1 min read

Photo Credit :

ಇನ್ಮುಂದೆ ಡಿಎಲ್-ಹೆಲ್ಮೆಟ್ ಇಲ್ಲದೆ ಕಾಲೇಜು ಪ್ರವೇಶಿಸುವಂತಿಲ್ಲ!

ಮೈಸೂರು: ಹೆಲ್ಮೆಟ್ ಕಡ್ಡಾಯಗೊಳಿಸಿದರೂ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸದೆ ಅಫಘಾತಗಳು ಹೆಚ್ಚಾಗುತ್ತಿರುವುದರಿಂದ, ನಗರ ಸಂಚಾರ ಪೊಲೀಸರು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಚಾಲನಾ ಪರವಾನಗಿ ಹೊಂದಿರದ ಹಾಗೂ ಹೆಲ್ಮೆಟ್ ಧರಿಸದೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ವಾಹನಗಳನ್ನು ಕ್ಯಾಂಪಸ್ ಒಳಗಡೆ ಪ್ರವೇಶಿದಂತೆ ಸೂಚನೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಇದಕ್ಕೆಲ್ಲಾ ವಿದ್ಯಾರ್ಥಿಗಳು ವೇಗವಾಗಿ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿರುವುದು ಕಾರಣವಾಗಿದೆ. ಹೀಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ಚಾಲನಾ ಪರವಾನಗಿಯನ್ನು ಸಹ ಪಡೆದಿರುವುದಿಲ್ಲ. ಇದಕ್ಕೆ ಬ್ರೇಕ್ ಹಾಕಲು ನಗರ ಸಂಚಾರಿ ಪೊಲೀಸರು ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಚಾಲನಾ ಪರವಾನಗಿ ಹೊಂದಿರದ ಹಾಗೂ ಹೆಲ್ಮೆಟ್ ಧರಸದೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ವಾಹನಗಳನ್ನು ಕ್ಯಾಂಪಸ್ ಒಳಗಡೆ ಪ್ರವೇಶಿದಂತೆ ಸೂಚನೆ ನೀಡಲು ಮುಂದಾಗಿದ್ದು, ಸಭೆ ನಡೆಸಿ ತಿಳುವಳಿಕೆ ನೀಡಲು ಮುಂದಾಗಿದ್ದಾರೆ.

2017 ಜನವರಿಯಿಂದ ಇಲ್ಲಿಯವರೇ ವಿದ್ಯಾರ್ಥಿಗಳ ಅಜಾಗರೂಕತೆಯಿಂದ 42 ಅಪಘಾತಗಳು ಸಂಭವಿಸಿದ್ದು, 7 ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. 12 ಅಪಘಾತದಲ್ಲಿ ಚಾಲನಾ ಪರವಾನಗಿ ಹೊಂದಿರದಿರುವುದು ಪತ್ತೆಯಾಗಿದೆ. 19 ಅಪಘಾತದಲ್ಲಿ ಹೆಲ್ಮೆಟ್ ಧರಿಸದೆ ಇರುವುದು ಗೊತ್ತಾಗಿದೆ.

ಈಗಾಗಲೇ ವಿದ್ಯಾವರ್ಧಕ ಎಂಜಿನಿಯಂರಿಂಗ್ ಕಾಲೇಜು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಹಾಗೂ ಎಟಿಎಂಇ ಕಾಲೇಜುಗಳಲ್ಲಿ ಹೆಲ್ಮೆಟ್ ಧರಿಸದ ವಿದ್ಯಾರ್ಥಿಗಳಿಗೆ ಕಾಲೇಜಿನೊಳಗೆ ಪ್ರವೇಶ ನೀಡುತ್ತಿಲ್ಲ. ಈ ವ್ಯವಸ್ಥೆಯನ್ನು ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೂ ಜಾರಿಗೆ ತರುವಂತೆ ಪೊಲೀಸರು ಸೂಚನೆ ನೀಡುತ್ತಾರೆ. ಕ್ಯಾಂಪಸ್ ಪ್ರವೇಶಿಸುವ ಹಾಗೂ ಹೊರಹೋಗುವ ವಾಹನಗಳ ವಿವರ ದಾಖಲಿಸುವಂತೆ ಹೇಳಿದ್ದಾರೆ.
ಅಪಘಾತ ಸಂಭವಿಸಿದಾಗ ವಾಹನದ ವಾರಸುದಾರರ ಪತ್ತೆ ವಿಳಂಬವಾಗುತ್ತಿದೆ. ಶಿಕ್ಷಣ ಸಂಸ್ಥೆಗಳು ವಾಹನ ದಾಖಲಾತಿ ಕ್ರೋಢೀಕರಿಸಿದರೆ ತನಿಖೆಗೆ ನೆರವಾಗಲಿದೆ ಎನ್ನುತ್ತಾರೆ ಸಂಚಾರಿ ಪೊಲೀಸರು.

ವಿದ್ಯಾರ್ಥಿಗಳ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು ಹೆಚ್ಚಾಗುತ್ತಿದ್ದು, ಇವರ ಮೇಲೆ ನಿಗಾ ಇಡಲು ನಿರ್ಧರಿಸಲಾಗಿದೆ. ಶಿಕ್ಷಣ ಸಂಸ್ಥೆಗಳು ಕೂಡ ಪೊಲೀಸರಿಗೆ ಅಗತ್ಯ ಸಹಕಾರ ನೀಡಬೇಕು ಎಂದು ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಮನವಿ ಮಾಡಿದ್ದಾರೆ.

See also  ಬಿಜೆಪಿಯಿಂದ ಶಾಂತಿ ಕದಡುವ ಯತ್ನ: ಮಾಜಿ ಸಂಸದ ಟೀಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು