News Kannada
Friday, September 30 2022

ಮೈಸೂರು

ತಾ.ಪಂ. ಕಟ್ಟಡಕ್ಕೆ ಫ್ಲೆಕ್ಸ್ ಕಟ್ಟಿ ನಿಯಮ ಉಲ್ಲಂಘನೆ - 1 min read

Photo Credit :

ತಾ.ಪಂ. ಕಟ್ಟಡಕ್ಕೆ ಫ್ಲೆಕ್ಸ್ ಕಟ್ಟಿ ನಿಯಮ ಉಲ್ಲಂಘನೆ

ಮಂಡ್ಯ: ಶಾಸಕ ಕೆ.ಎಸ್.ಪುಟ್ಟಣ್ಣಯ್ಯನವರು ತಮ್ಮ ಸಾಧನಾ ಸಮಾವೇಶ ಪಟ್ಟಣದಲ್ಲಿ ನಡೆಸುತ್ತಿದ್ದರೆ ಅದರ ಫ್ಲೆಕ್ಸ್ ಗಳನ್ನು ಪಾಂಡವಪುರ ತಾಲೂಕು ಪಂಚಾಯಿತಿಯ ಕಟ್ಟಡದಲ್ಲಿ ಹಾಕುವ ಮೂಲಕ ನಿಯಮ ಉಲ್ಲಂಘಿಸಿರುವುದು ಕಂಡು ಬಂದಿದೆ.

ತಾಲೂಕು ಪಂಚಾಯಿತಿಯ ಅಧ್ಯಕ್ಷರ ಕೊಠಡಿಯಲ್ಲಿ ಅಧ್ಯಕ್ಷರು ಸಂಸದ ಸಿ.ಎಸ್.ಪುಟ್ಟರಾಜು ಅವರ ಫೋಟೋ ಹಾಕಿಕೊಂಡಿದ್ದಾರೆ ಎಂಬ ಕಾರಣಕ್ಕೆ ರೈತಸಂಘದವರು ಶಾಸಕ ಕೆ.ಎಸ್.ಪುಟ್ಟಣ್ಣಯ್ಯನವರ ಸಾಧನಾ ಸಮಾವೇಶದ ಫ್ಲೆಕ್ಸ್ ಗಳನ್ನು ತಾಲೂಕು ಪಂಚಾಯಿತಿಯ ಕಟ್ಟಡ ಗೋಡೆಗಳಿಗೆ ಹಾಕುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ವಿಧಾನಸಭಾ ಚುನಾವಣೆಯೂ ಹತ್ತಿರವಾಗುತ್ತಿದ್ದಂತೆ ತಾಲೂಕಿನಲ್ಲಿ ರೈತಸಂಘ-ಜೆಡಿಎಸ್ ನಡುವೆ ತಿಕ್ಕಾಟ ಪ್ರಾರಂಭವಾಗುತ್ತಿದ್ದು, ಫ್ಲೆಕ್ಸ್ ಹಾಗೂ ಫೋಟೋಗಳನ್ನು ಹಾಕುವ ಮೂಲಕ ಪರಸ್ಪರ ಕೆಸರೆರಚಾಟವೂ ನಡೆಯುತ್ತಿದೆ.

ಸಿ.ಎಸ್.ಪುಟ್ಟರಾಜು ಅವರು ಜಿಲ್ಲೆಯ ಸಂಸದರು, ಜತೆಗೆ ನಮ್ಮ ನಾಯಕರು ಎನ್ನುವ ಕಾರಣಕ್ಕೆ ನಮ್ಮ ಅಧ್ಯಕ್ಷರ ಕೊಠಡಿಯಲ್ಲಿ ಅವರ ಫೋಟೋ ಹಾಕಿದ್ದೇವೆ ಅಷ್ಟೇ. ಬೇಕಿದ್ದರೆ ಅವರು ಕೂಡ ಶಾಸಕರ ಫೋಟೋ ಹಾಕಿಕೊಳ್ಳಲಿ. ಅದನ್ನು ಬಿಟ್ಟು ಒಂದು ಪಕ್ಷದ ಸಮಾವೇಶದ ಫ್ಲೆಕ್ಸ್ ಗಳನ್ನು ಸರಕಾರಿ ಕಚೇರಿಯ ಗೋಡೆಗಳ ಮೇಲೆ ಹಾಕುವುದು ತಪ್ಪು. ಇದುವರೆಗೂ ಯಾರೂ ಸಹ ಈ ರೀತಿಯಾಗಿ ಫೆಕ್ಸ್ ಗಳನ್ನು ಗೋಡೆಗಳ ಮೇಲೆ ಹಾಕಿಲ್ಲ, ಇದೇ ಮೊದಲು ಎನ್ನುವುದು ತಾ.ಪಂ. ಅಧ್ಯಕ್ಷೆ ಪೂರ್ಣಿಮಾ ಅವರ ಮಾತಾಗಿದೆ.

ತಾ.ಪಂ. ಅಧ್ಯಕ್ಷರ ಕಚೇರಿಯಲ್ಲಿ ಸಂಸದ ಸಿ.ಎಸ್.ಪುಟ್ಟರಾಜು ಅವರ ಫೋಟೋವನ್ನು ಹಾಕಿದ್ದಾರೆ. ಅವರ ನಾಯಕರ ಮೇಲಿನ ಅಭಿಮಾನದಿಂದ ಅವರು ಹೇಗೆ ಅಧ್ಯಕ್ಷರ ಕೊಠಡಿಯಲ್ಲಿ ಸಂಸದರ ಫೋಟೋ ಹಾಕಿಕೊಂಡಿದ್ದಾರೋ ಅದೇ ರೀತಿ ನಾನೂ ಸಹ ನಮ್ಮ ಶಾಸಕರ ಅಭಿಮಾನದಿಂದ ತಾ.ಪಂ. ಕಚೇರಿಯ ಗೋಡೆಗಳ ಮೇಲೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯನವರ ಸಾಧನಾ ಸಮಾವೇಶದ ಫ್ಲೆಕ್ಸ್ ಗಳನ್ನು ಹಾಕಿಸಿದ್ದೇನೆ ಎನ್ನುವುದು ರೈತಸಂಘದ ತಾ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಅವರ ಅಭಿಪ್ರಾಯವಾಗಿದೆ.

ಇಲ್ಲಿ ಜೆಡಿಎಸ್ ಮತ್ತು ರೈತ ಸಂಘ ಆಡಳಿತ ನಡೆಸುತ್ತಿದ್ದರೂ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸಂಸದ ಮತ್ತು ಶಾಸಕರ ಬೆಂಬಲಿಗರಾಗಿರುವುದರಿಂದ ಇಲ್ಲಿ ಕಚ್ಚಾಟಗಳು ನಡೆಯುತ್ತಲೇ ಇವೆ.

See also  ಬಸವನ ಕೊರಳಿನಲ್ಲಿ ಲಕ್ಞಾಂತರ ರೂಪಾಯಿ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು