News Kannada
Friday, September 30 2022

ಮೈಸೂರು

ಮೈಸೂರಲ್ಲಿ ಹಿಂದೂ ಶಾಸ್ತ್ರದ ಪ್ರಕಾರ ಸತಿ ಪತಿಗಳಾದ ಬ್ರಿಟನ್ ಪ್ರೇಮಿಗಳು - 1 min read

Photo Credit :

ಮೈಸೂರಲ್ಲಿ ಹಿಂದೂ ಶಾಸ್ತ್ರದ ಪ್ರಕಾರ ಸತಿ ಪತಿಗಳಾದ ಬ್ರಿಟನ್ ಪ್ರೇಮಿಗಳು

ಮೈಸೂರು: ವಿದೇಶಿ ಜೋಡಿಯೊಂದು ಭಾರತೀಯ ಹಿಂದೂ ಶಾಸ್ತ್ರದ ಮಂತ್ರ ಮಾಂಗಲ್ಯದ ಮೂಲಕ ಸತಿ ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆಗೆ ಸಾಂಸ್ಕೃತಿಕ ನಗರಿ ಸಾಕ್ಷಿಯಾಗಿದೆ.

ಮೈಸೂರಿನ ಜೆ.ಪಿ ನಗರದಲ್ಲಿರುವ ಒಡನಾಡಿ ಸ್ವಯಂ ಸೇವಾಸಂಸ್ಥೆಯಲ್ಲಿ ಸರಳ ವಿವಾಹದಲ್ಲಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಮೂಲಕ ವಿದೇಶಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ. ಬ್ರಿಟನ್ ದೇಶದ ಫ್ರಿತಾ ವಿನ್ಸೆಂಟ್ ಮತ್ತು ಓಲಾಫ್ ಮೇಸನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸತಿ ಪತಿಗಳು. ಕಂಪನಿಯೊಂದರ ಒಡತಿಯಾಗಿರುವ ಫ್ರಿತಾ ವಿನ್ಸೆಂಟ್ ಹಾಗೂ ಓಲಾಫ್ ಮೇಸನ್ ಕಳೆದ ಹತ್ತು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.

ದಕ್ಷಿಣ ಭಾರತದಲ್ಲಿ ಬುಡಕಟ್ಟು ಜನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ಫ್ರಿತಾ ವಿನ್ಸೆಂಟ್ ತನ್ನ ಕಂಪೆನಿಯಿಂದ ಬರುವ ಲಾಭಾಂಶವನ್ನು ಬುಡಕಟ್ಟು ಜನರ ಅಭಿವೃದ್ಧಿಗಾಗಿ ಮೀಸಲಿಡುತ್ತಿದ್ದಾರೆ. ಅವರ ವಿವಾಹ ಮಹೋತ್ಸವಕ್ಕೆ ಹಲವರು ಮಂದಿ ಸಾಕ್ಷಿಯಾದರು.

ಇಬ್ಬರು ಬ್ರಿಟನ್ ದೇಶದ ಪ್ರಜೆಗಳಾಗಿರುವ ಇವರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಗೆ ಆಗಾಗ ಭೇಟಿ ನೀಡುವ ಸಂದರ್ಭದಲ್ಲಿ ಇಬ್ಬರಿಗೂ ಪ್ರೀತಿ ಹುಟ್ಟಿದ್ದು, ಇವರು ಮದುವೆಯನ್ನ ಹಿಂದೂ ಶಾಸ್ತ್ರದ ಪ್ರಕಾರ ಆಗಲು ಇಚ್ಚೆ ಪಟ್ಟಿದ್ದು ಅದರಂತೆ ಶನಿವಾರ ಅವರ ಮದುವೆಯನ್ನ ಮಾಡಿಲಾಗಿದೆ ಎಂದು ಒಡನಾಡಿ ಸೇವಾ ಸಂಸ್ಥೆಯ ಮುಖ್ಯಸ್ಥರು ತಿಳಿಸಿದರು.

 

See also  ಏಳು ವರ್ಷಕ್ಕೆ ತೆರೆಯುತ್ತೇ ಈ ದೇವಿ ಬಾಗಿಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು