News Kannada
Sunday, November 27 2022

ಮೈಸೂರು

ನಾನು ಕತ್ತೆಯಂತೆ ದುಡಿದಿದ್ದೇನೆ, ಶ್ರೀನಿವಾಸ್ ಹೇಸರಗತ್ತೆ: ಮಹದೇವಪ್ಪ - 1 min read

Photo Credit :

ನಾನು ಕತ್ತೆಯಂತೆ ದುಡಿದಿದ್ದೇನೆ, ಶ್ರೀನಿವಾಸ್ ಹೇಸರಗತ್ತೆ: ಮಹದೇವಪ್ಪ

ಮೈಸೂರು: ನಾನು ನನ್ನ ಕಳೆದ ನಾಲ್ಕೂವರೆ ವರ್ಷದ ಅಧಿಕಾರಾವಧಿಯಲ್ಲಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸಲು ಕತ್ತೆಯಂತೆ ದುಡಿದಿದ್ದು, ಹೇಸರಗತ್ತೆಯಂತೆ ತಿಂದು ಉಂಡು ಬಿದ್ದಲ್ಲೇ ಬಿದ್ದಿಲ್ಲ. ಹೇಸರಗತ್ತೆ ಒಂದು ಕೆಲಸಕ್ಕೆ ಬಾರದ ಪ್ರಾಣಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಶ್ರೀನಿವಾಸ್ ಪ್ರಸಾದ್ ಗೆ ಟಾಂಗ್ ನೀಡಿದ್ದಾರೆ.

ನಂಜನಗೂಡಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಎಚ್.ಸಿ.ಮಹದೇವಪ್ಪ ಕೂಡ ಸಿಎಂ ರೇಸ್ ನಲ್ಲಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಗಳಾಗಲು ಮಹದೇವಪ್ಪ ರೇಸ್ ನಲ್ಲಿದ್ದಾರೆ ಅಂತಾರೆ. ಎಷ್ಟೋ ಕುದುರೆಗಳಿರುವಾಗ ಕತ್ತೆ ಹೆಸರು ಹೇಳ್ತಿಯಲ್ಲಪ್ಪ ಎಂದು ಪರೋಕ್ಷವಾಗಿ ಮಹದೇವಪ್ಪ ಅವರನ್ನು ಕತ್ತೆಗೆ ಹೋಲಿಸಿ ಟಾಂಗ್ ನೀಡಿದ್ದರು.

ಇಂದು ಟಿ.ನರಸೀಪುರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಚೇರಿ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ, ಶ್ರೀನಿವಾಸ್ ಪ್ರಸಾದ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಸಾಮಾಜಿಕ ಪ್ರಜ್ಞೆ ಹಾಗೂ ರಾಜಕಾರಣದ ಸಿದ್ಧಾಂತವೇ ಗೊತ್ತಿಲ್ಲದ ವ್ಯಕ್ತಿ, ಎರಡೂವರೆ ವರ್ಷಗಳ ಕಾಲ ಉಸ್ತುವಾರಿ ಸಚಿವರಾಗಿ, ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ನನ್ನ ಕಳೆದ ನಾಲ್ಕೂವರೆ ವರ್ಷದ ಅಧಿಕಾರಾವಧಿಯಲ್ಲಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿಪಡಿಸಲು ಕತ್ತೆಯಂತೆ ದುಡಿದಿದ್ದು, ಹೇಸರಗತ್ತೆಯಂತೇ ತಿಂದು ಉಂಡು ಬಿದ್ದಲ್ಲೇ ಬಿದ್ದಿಲ್ಲ. ಹೇಸರಗತ್ತೆ ಒಂದು ಕೆಲಸಕ್ಕೆ ಬಾರದ ಪ್ರಾಣಿ, ಅದರಿಂದ ನಾವು ಏನನ್ನು ನಿರೀಕ್ಷಿಸಲು ಸಾಧ್ಯ. ಆಡಳಿತದ ಗಂಧವೇ ಗೊತ್ತಿಲ್ಲದ, ಮೂಲಭೂತ ಸಂವಿಧಾನದ ಆಶಯ ಅರಿಯದ ರಾಜಕಾರಣಿ ಸಂವಿಧಾನವನ್ನೇ ಬದಲಾವಣೆ ಮಾಡಲು ಹೊರಟಿರುವವರ ಜೊತೆ ಕೈ ಜೋಡಿಸಲು ಮುಂದಾಗಿರುವುದು ಅವರ ಹೊಣೆಗೇಡಿತನಕ್ಕೆ ಸಾಕ್ಷಿ ಎಂದು ಶ್ರೀನಿವಾಸ್ ಪ್ರಸಾದ್ ವಿರುದ್ಧ ವಾಗ್ದಾಳಿ ನಡೆಸಿದರು.

See also  ಸರ್ಕಾರದಿಂದ ಸಾಹಸಸಿಂಹ ವಿಷ್ಣುವರ್ಧನ್ ಜಯಂತಿ ಆಚರಿಸುವಂತೆ ಆಗ್ರಹ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು