News Kannada
Monday, December 05 2022

ಮೈಸೂರು

ಕೆಆರ್ ಎಸ್ ಹಿನ್ನೀರಲ್ಲಿ ಮೀನು ಹಿಡಿಯಲು ಹೋದ ಮೀನುಗಾರ ಜಲಸಮಾಧಿ!

Photo Credit :

ಕೆಆರ್ ಎಸ್ ಹಿನ್ನೀರಲ್ಲಿ ಮೀನು ಹಿಡಿಯಲು ಹೋದ ಮೀನುಗಾರ ಜಲಸಮಾಧಿ!

ಕೆ.ಆರ್.ಪೇಟೆ: ಮೀನು ಹಿಡಿಯಲು ಕೆಆರ್ ಎಸ್ ಹಿನ್ನೀರಿನಲ್ಲಿ ನಾಡದೋಣಿ(ಹರಿಗೋಲು) ಮೂಲಕ ಹೋಗಿದ್ದ ಮೀನುಗಾರನೊಬ್ಬ ಜಲಸಮಾಧಿಯಾಗಿರುವ ಘಟನೆ ತಾಲೂಕಿನ ಹೊಸಮಾವಿನಕೆರೆ ಬಳಿ ನಡೆದಿದೆ.

ತಾಲೂಕಿ ಅಕ್ಕಿಹೆಬ್ಬಾಳು ಹೋಬಳಿಯ ಪೂವನಹಳ್ಳಿ ಗ್ರಾಮದ ಚನ್ನವೀರನಾಯಕ(60) ಮೃತ ಮೀನುಗಾರ ಎಂದು ಗುರುತಿಸಲಾಗಿದೆ.

ಜ.18ರಂದು ಗುರುವಾರ ಸಂಜೆ 5.30ಗಂಟೆ ಸಮಯದಲ್ಲಿ ಚನ್ನವೀರನಾಯಕ ಮತ್ತು ಮಂಜುನಾಯಕ ಮೀನು ಹಿಡಿಯಲು ಬಲೆ ಹಾಕುವ ಸಲುವಾಗಿ ಹರಿಗೋಲು ಮೂಲಕ ಕೆ.ಆರ್.ಎಸ್. ಹಿನ್ನೀರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹರಿಗೋಲು ಮುಳುಗಿ ಚನ್ನವೀರನಾಯಕ ಜಲಸಮಾಧಿಯಾಗಿದ್ದಾರೆ.

ಆದರೆ ಮಂಜುನಾಯಕ ಈಜಿ ದಡ ಸೇರಿದ್ದು ಪ್ರಾಣಾಪಾಯದಿಂದ ಪಾರಾಗಿ ರಾತ್ರಿ ಗ್ರಾಮಕ್ಕೆ ಬಂದು ತಮ್ಮ ಸ್ನೇಹಿತರಿಗೆ ಮಾಹಿತಿ ನೀಡಿದ್ದಾನೆ. ಆದರೆ ಮೃತ ವ್ಯಕ್ತಿಯ ಮನೆಗೆ ಮಾಹಿತಿ ನೀಡಿರಲಿಲ್ಲ. ಚನ್ನವೀರನಾಯಕನ ಪುತ್ರ ಜಗದೀಶನಾಯಕ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿ ಮಂಜುನಾಯಕನೊಂದಿಗೆ ತಂದೆ ತೆರಳಿದ್ದು ವಾಪಾಸ್ ಬಂದಿಲ್ಲ. ಆತನೇ ಏನೋ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದನು.

ಈ ಹಿನ್ನೆಲೆಯಲ್ಲಿ ಶುಕ್ರವಾರ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣಾಧಿಕಾರಿಗಳೊಂದಿಗೆ ತೆರಳಿದ ಸಬ್ಇನ್ಸ್ ಪೆಕ್ಟರ್ ಗಿರೀಶ್ ಅವರು ಮೃತ ಮೀನುಗಾರನ ಶವಕ್ಕಾಗಿ ಶೋಧ ಕಾರ್ಯ ಕೈಗೊಂಡರು. ಮಧ್ಯಾಹ್ನ ಸುಮಾರು 2ಗಂಟೆಯ ವೇಳೆಗೆ ಶವ ಮತ್ತು ನಾಡದೋಣಿ ಪತ್ತೆಯಾಗಿದೆ. ಆದರೆ ಮೃತ ವ್ಯಕ್ತಿಯ ಮೈಮೇಲೆ ಎಲ್ಲಿಯೂ ಗಾಯದ ಗುರುತುಗಳು ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ಪೊಲೀಸರು ಮದ್ಯ ಸೇವನೆ ಮಾಡಿ ಹರಿಗೋಲಲ್ಲಿ ಹೋಗಿದ್ದರಿಂದ ಆಯತಪ್ಪಿ ಬಿದ್ದಿರಬಹುದೆಂಬ ಎಂದಿದ್ದಾರೆ.

ಮೀನು ಹಿಡಿಯಲು ಜೊತೆಯಲ್ಲಿ ಹೋಗಿದ್ದ ಮಂಜುನಾಯಕನ ಮೇಲೆ ಮೃತ ವ್ಯಕ್ತಿಯ ಪುತ್ರ ಅನುಮಾನ ವ್ಯಕ್ತಪಡಿಸಿ ದೂರು ನೀಡಿರುವ ಹಿನ್ನೆಲೆಯಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ

See also  ಮನೆ ಮನೆಯಲ್ಲಿ ದಸರಾ ಬೊಂಬೆ ಪ್ರದರ್ಶನ 'ಸ್ಪರ್ಧೆ'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು