News Kannada
Friday, December 02 2022

ಮೈಸೂರು

ಡೆತ್ ನೋಟ್ ಬರೆದಿಟ್ಟು ನವ ವಿವಾಹಿತೆ ಸಾವಿಗೆ ಶರಣು

Photo Credit :

ಡೆತ್ ನೋಟ್ ಬರೆದಿಟ್ಟು ನವ ವಿವಾಹಿತೆ ಸಾವಿಗೆ ಶರಣು

ಮಾಗಡಿ: ನವವಿವಾಹಿತೆಯೊಬ್ಬಳು ನನ್ನ ಸಾವಿಗೆ ಪತಿ ಮತ್ತು ಅತ್ತೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಟವಾಳ್ ಗ್ರಾಮದಲ್ಲಿ ನಡೆದಿದೆ.

ತಟವಾಳ್ ಗ್ರಾಮದ ರೈತ ಗಂಗನರಸಿಂಹಯ್ಯ ಹಾಗೂ ಪುಷ್ಪ ದಂಪತಿ ಪುತ್ರಿ ರಮ್ಯ(24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆಯನ್ನು ಕಳೆದ ಎಂಟು ತಿಂಗಳ ಹಿಂದೆ ಬೆಂಗಳೂರಿನ ಮೂಡಲಪಾಳ್ಯದ ನಿವಾಸಿ ಚಾಲಕ ಮಂಜುನಾಥ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ವರದಕ್ಷಿಣೆಯಾಗಿ 4 ಲಕ್ಷ ನಗದು ಹಾಗೂ 100 ಗ್ರಾಂ ಚಿನ್ನದ ಅಭರಣಗಳನ್ನು ನೀಡಿದ್ದಲ್ಲದೆ, ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.

ಮದುವೆಯಾದ ಕೆಲವು ದಿನಗಳ ಕಾಲ ಚೆನ್ನಾಗಿ ನೋಡಿಕೊಂಡರಾದರೂ ಬಳಿಕ ಗಂಡ ಮಂಜುನಾಥ ಸೇರಿದಂತೆ ಅತ್ತೆ ಜಯಮ್ಮ ಇನ್ನಿತರರು ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗಿದೆ.

ಅಲ್ಲದೆ ರಥಸಪ್ತಮಿಯಂದು ಅವಳನ್ನು ಗಂಡ ಮಂಜುನಾಥ ತವರಿಗೆ ತಂದು ಬಿಟ್ಟಿದ್ದಲ್ಲದೆ, ವರದಕ್ಷಿಣೆ ತಂದರೆ ಮಾತ್ರ ತನ್ನೊಂದಿಗೆ ಬರುವಂತೆ ಹೇಳಿದ್ದನು. ತವರಿನಲ್ಲಿದ್ದ ರಮ್ಯ ಹೆತ್ತವರೊಂದಿಗೆ ಅತ್ತೆ ಮನೆಯವರು ನೀಡುತ್ತಿದ್ದ ಕಿರುಕುಳವನ್ನು ಹೇಳಿಕೊಂಡಿದ್ದಳು. ಈ ಸಂದರ್ಭ ಅವರು ಸಮಾಧಾನಿಸಿ, ಧೈರ್ಯ ತುಂಬಿದ್ದರು.

ಈ ನಡುವೆ ಮದುವೆಯ ಸಮಯದಲ್ಲಿ ನೀಡಿದ್ದ 4 ಲಕ್ಷ ನಗದು ಹಾಗೂ 100 ಗ್ರಾಂ ಚಿನ್ನದ ಅಭರಣಗಳನ್ನು ವಾಪಸ್ಸು ಪಡೆಯುವಂತೆ ತನ್ನ ಪೋಷಕರಿಗೆ ಸೂಚಿಸಿ, ತನ್ನ ಅತ್ತೆ ಜಯಮ್ಮ, ಮಾಲ, ಪುಟ್ಟಿ ಹಾಗೂ ಪತಿ ಮಂಜುನಾಥ ತನಗೆ ಹಿಂಸೆ ನೀಡುತ್ತಿದ್ದ ಕಾರಣ ತಾನು ಆತ್ಮಹತ್ಯೆಗೆ ಶರಣಾಗುತ್ತಿದ್ದು, ಅವರಿಗೆ ಕಾನೂನು ರೀತಿ ಶಿಕ್ಷೆ ಆಗಬೇಕೆಂದು ಡೆತ್ ನೋಟ್ ಬರೆದಿಟ್ಟು ಮನೆಯವರಿಗೆ ಗೊತ್ತಾಗದಂತೆ ದನದ ಕೊಟ್ಟಿಗೆಗೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮನೆಯಲ್ಲಿ ರಮ್ಯ ಕಾಣಿಸದೆ ಇದ್ದಾಗ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ. ಕೊನೆಗೆ ದನದ ಕೊಟ್ಟಿಗೆಗೆ ಹೋಗಿ ನೋಡಿದಾಗ ಅಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.

ವಿಷಯ ತಿಳಿದು ಮಾಗಡಿ ಪೊಲೀಸ್ ಠಾಣೆಯ ಪಿಎಸ್ಐ ರವಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಮಧ್ಯೆ ರಮ್ಯಳ ಸಾವಿನ ಸುದ್ದಿ ತಿಳಿದು ಬಂದಿದ್ದ ಪತಿ ಮಂಜುನಾಥ್ ಹಾಗೂ ಅತ್ತೆ ಜಯಮ್ಮಳಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಇದರಿಂದ ಹೆದರಿದ ಮಂಜುನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ್ದು, ಆತನನ್ನು ಮತ್ತು ಅತ್ತೆ ಜಯಮ್ಮಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

See also  ಕೆ.ಆರ್.ನಗರದಲ್ಲಿ ನಡೆಯಿತಾ ಫ್ಲೆಕ್ಸ್ ರಾಜಕೀಯ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು