News Kannada
Wednesday, November 30 2022

ಮೈಸೂರು

ಟ್ರಿಣ್ ಟ್ರಿಣ್ ಸೈಕಲ್ ಗೂ ಡಿಜಿಟಲ್ ಸ್ಪರ್ಶ - 1 min read

Photo Credit :

ಟ್ರಿಣ್ ಟ್ರಿಣ್ ಸೈಕಲ್ ಗೂ ಡಿಜಿಟಲ್ ಸ್ಪರ್ಶ

ಮೈಸೂರು: ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಾರಿಗೊಂಡು ಯಶಸ್ವಿಯಾಗಿರುವ ಟ್ರಿನ್ ಟ್ರಿನ್ ಯೋಜನೆಯ ಸೈಕಲ್ ಗಳಿಗೆ ಡಿಜಿಟಲ್ ಮಾದರಿಯ ಬೀಗ ಅಳವಡಿಸಲು ಚಿಂತನೆ ನಡೆದಿದ್ದು, ಶೀಘ್ರದಲ್ಲೇ ಸೈಕಲ್ ಗಳಿಗೆ ಹೈಟೆಕ್ ಸ್ಪರ್ಶ ಸಿಗಲಿದೆ.

ದೇಶದಲ್ಲೇ ಪ್ರಥಮ ಬಾರಿಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಾರಿಗೊಂಡ ಟ್ರಿನ್ ಟ್ರಿನ್ ಬೈಸಿಕಲ್ ಯೋಜನೆಗೆ ಬೇಡಿಕೆ ಹೆಚ್ಚಾಗಿದ್ದು, ಹಾಲಿ ನಗರದಲ್ಲಿ 500 ಸೈಕಲ್ ಗಳನ್ನು ಸಾರ್ವಜನಿಕರು ಬಳಸುತ್ತಿದ್ದಾರೆ. ಆದರೆ ಈ ಸೈಕಲ್ ಗಳಿಗೆ ಯಾವುದಕ್ಕೂ ಬೀಗದ ಸೌಲಭ್ಯವಿಲ್ಲ. ಸೈಕಲ್ ಗಳ ಬಳಕೆದಾರರಿಂದ ಬೇಡಿಕೆ ಹೆಚ್ಚಾದ ಕಾರಣ ಬೀಗದ ರಕ್ಷಣೆ ನೀಡಲು ಟ್ರಿಣ್ ಟ್ರಿಣ್ ಮುಂದಾಗಿದ್ದು, ಡಿಜಿಟಲ್ ಮಾದರಿಯ ಅತ್ಯಾಧುನಿಕ ಕೃತಕ ಉಪಗ್ರಹ ಬೆಂಬಲಿತ ಗ್ಲೋಬಲ್ ಪೊಸಿಷನಿಂಗ್ ವ್ಯವಸ್ಥೆ (ಜಿಪಿಎಸ್) ಅಳವಡಿಸಿಕೊಳ್ಳಲಾಗಿದೆ.

ಡಿಜಿಟಲ್ ಬೀಗ
ಟ್ರಿಣ್ ಟ್ರಿಣ್ ಸೈಕಲ್ ಗಳಿಗೆ ಅಳವಡಿಸಲು ಉದ್ದೇಶಿಸಿರುವ ಬೀಗ ಡಿಜಿಟಲ್ ಸ್ವರೂಪದ್ದಾಗಿರುವುದು ವಿಶೇಷವಾಗಿದೆ. ಬೀಗ ಹಾಕುವಾಗ ಮಾತ್ರ ಕೈಬಳಕೆಯಾಗುತ್ತದೆ. ಬೀಗ ತೆಗೆಯುವಾಗ ಬಳಕೆದಾರರು ಮೊಬೈಲ್ ಫೋನಿನಲ್ಲಿ ಟ್ರಿಣ್ ಟ್ರಿಣ್ ಅಪ್ಲಿಕೇಷನ್ ಅನ್ನು ತೆರೆದು ಬೀಗದ ಮೇಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ ಬೀಗ ತೆರೆಯಿರಿ ಎಂಬ ಒಂದು ಬಾಕ್ಸ್ ತರೆದುಕೊಳ್ಳುತ್ತದೆ. ಅದನ್ನು ಕ್ಲಿಕ್ ಮಾಡಿದಾಕ್ಷಣ ಬೈಸಿಕಲ್ ಬೀಗ ತನಗೆ ತಾನೇ ತೆರೆದುಕೊಳ್ಳತ್ತದೆ.

ಬೀಗಕ್ಕೆ ಜಿಪಿಎಸ್ ಅಳವಡಿಕೆ
ಟ್ರಿಣ್ ಟ್ರಿಣ್ ಸೈಕಲ್ ಗಳ ಬೀಗಗಳಿಗೆ ಜಿಪಿಎಸ್ ಇರುವ ಕಾರಣ ಸೈಕಲ್ ನ ಚಲನವಲನ ಗುರುತಿಸಬಹುದು. ಅಲ್ಲದೆ, ಒಬ್ಬರು ಒಂದು ಸೈಕಲ್ ಬಳಸುವಾಗ ಮತ್ತೊಬ್ಬರು ಯಾವುದೇ ಕಾರಣಕ್ಕೂ ಮೊಬೈಲ್ ಫೋನ್ ಅಪ್ಲಿಕೇಷನ್ ಬಳಸಿ ಬೀಗ ತೆರೆಯದಂತೆ ಇದು ನೋಡಿಕೊಳ್ಳುತ್ತದೆ. ಮತ್ತೆ ಬೈಸಿಕಲ್ ಅನ್ನು ಡಾಕಿಂಗ್ ಕೇಂದ್ರಕ್ಕೆ ತಲುಪಿಸಿದ ಬಳಿಕ, ಮತ್ತೊಬ್ಬ ಗ್ರಾಹಕ ಸೈಕಲ್ ಕೊಂಡೊಯ್ದರೆ ಅವರ ಮೊಬೈಲ್ ಮೂಲಕ ಬೀಗವನ್ನು ಬಳಸಬಹುದು.

ಮೊದಲ 30 ನಿಮಿಷ ಉಚಿತ
ದೇಶದ ಮೊದಲ ಸಾರ್ವಜನಿಕ ಬೈಸಿಕಲ್ ಹಂಚಿಕೆ ಸೇವೆ ಆರಂಭವಾದ ಮೊದಲ 30 ನಿಮಿಷ ಉಚಿತವೇ ಇತ್ತು. ಆದರೆ, 2017ರ ಡಿ.1ರಿಂದ ಅದನ್ನು 5ಕ್ಕೆ ಏರಿಸಲಾಗಿತ್ತು. ಇದರಿಂದಾಗಿ ಬಳಕೆದಾರರ ಸಂಖ್ಯೆ ಶೇ 50ರಷ್ಟು ಕುಸಿದಿದ್ದು, ಮತ್ತೆ ಮೊದಲ 30 ನಿಮಿಷವನ್ನು ಉಚಿತವಾಗಿ ನೀಡಲಾಗುತ್ತಿದೆ. ಫೆ. 1ರಿಂದ ಹೊಸ ದರ ಅನ್ವಯವಾಗುತ್ತದೆ. ಜತೆಗೆ, ಹೊಸದಾಗಿ ದೀರ್ಘಾವಧಿ ಯೋಜನೆಗಳನ್ನು ಪರಿಚಯಿಸಲಾಗುತ್ತಿದ್ದು, ಇದರಂತೆ 1 ತಿಂಗಳು 60, 3 ತಿಂಗಳು 180, 6 ತಿಂಗಳಿಗೆ 300, ವಾರ್ಷಿಕ 600 ಚಂದಾದಾರರಾಗಲು ಅವಕಾಶ ಕಲ್ಪಿಸಲಾಗಿದೆ.

ಟ್ರಿಣ್ ಟ್ರಿಣ್ ಸೈಕಲ್ ಗಳನ್ನು ಬಾಡಿಗೆ ತೆಗೆದುಕೊಂಡಲ್ಲಿ ಅವುಗಳ ಸುರಕ್ಷೆ ಗ್ರಾಹಕರದ್ದೇ ಆಗಿತ್ತು. ಇದರಿಂದ ಗ್ರಾಹಕರು ಸೈಕಲ್ ತೆಗೆದುಕೊಳ್ಳುವ ಸಂದರ್ಭದಲ್ಲಿ ಒಂದು ಬೀಗ ಕೊಂಡೊಯ್ಯಬೇಕಿತ್ತು. ಇದರಿಂದ ಗ್ರಾಹಕರಿಗೆ ಸಾಕಷ್ಟು ಕಿರಿಕಿರಿಯಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ನೀಡಲು ಸಂಸ್ಥೆಯು ಎಲ್ಲ ಸೈಕಲ್ ಗಳಿಗೂ ಡಿಜಿಟಲ್ ಮಾದರಿಯ ಅತ್ಯಾಧುನಿಕ ಕೃತಕ ಉಪಗ್ರಹ ಬೆಂಬಲಿತ ಗ್ಲೋಬಲ್ ಪೊಸಿಷನಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದೆ. ಸೈಕಲ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಈಗಿರುವ ಸೈಕಲ್ ಗಳು ಸಾಲುತ್ತಿಲ್ಲ. ಹಾಗಾಗಿ ಶೀಘ್ರವೇ ಹೊಸ ಸೈಕಲ್ ಗಳನ್ನು ಸೇರಿಸಿ ಹೊಸ ತಂತ್ರಜ್ಞಾನವನ್ನು ಆಗಿಂದಾಗ್ಗೆ ಸೇರಿಸಿ ಮೇಲ್ದರ್ಜೆಗೆ ಏರಿಸುವುದು ನಮ್ಮ ಮೂಲ ಉದ್ದೇಶಗಳಲ್ಲಿ ಒಂದು ಎಂದು ಟ್ರಿಣ್ ಟ್ರಿಣ್ ಸಂಸ್ಥೆಯ ಮುಖ್ಯಸ್ಥ ಎಸ್.ಎಸ್ ಮಹೇಶ್ ತಿಳಿಸಿದರು.

See also  ವಿಕಲತೆಯುಳ್ಳವರ ಹಕ್ಕುಗಳ ಮಸೂದೆ ಬಗ್ಗೆ ಅರಿವು ಕಾರ್ಯಕ್ರಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು