News Kannada
Thursday, December 08 2022

ಮೈಸೂರು

ಪರೀಕ್ಷೆ ಪಾಸಾದ ಖುಷಿಯಲ್ಲಿ ಬರುವಾಗ ಜವರಾಯ ಕಾದಿದ್ದ

Photo Credit :

ಪರೀಕ್ಷೆ ಪಾಸಾದ ಖುಷಿಯಲ್ಲಿ ಬರುವಾಗ ಜವರಾಯ ಕಾದಿದ್ದ

ಮೈಸೂರು: ಪರೀಕ್ಷೆಯಲ್ಲಿ ಪಾಸಾದ ಖುಷಿಯಲ್ಲಿ ಪಾರ್ಟಿ ಮುಗಿಸಿಕೊಂಡು ಬರುವಾಗ ವೇಗವಾಗಿ ಕಾರು ಚಲಾಯಿಸಿದ ಪರಿಣಾಮ ಮೂರು ಜನ ವಿದ್ಯಾರ್ಥಿಗಳು ಸಾವ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ದಟ್ಟಗಳ್ಳಿಯ ರಿಂಗ್ ರಸ್ತೆಯಲ್ಲಿ ನಡೆದಿದೆ.

ಹೀಗೆ ರಸ್ತೆ ಅಫಘಾತದಲ್ಲಿ ಸಾವನ್ನಪ್ಪಿರುವ ವಿದ್ಯಾರ್ಥಿಗಳು ಮಹಮ್ಮದ್ ಫರಾನ್, ಸಯ್ಯದ್ ಯಾಸಿನ್ ಹಾಗೂ ದಿವ್ಯ. ಗಂಭೀರವಾಗಿ ಗಾಯಗೊಂಡಿರುವ ವಿದ್ಯಾರ್ಥಿಗಳು ರೆಹಮಾನ್ ಹಾಗೂ ಸ್ಪೂರ್ತಿ. ಮೃತಪಟ್ಟ ಮಹಮ್ಮದ್ ಫರಾನ್ ಹಾಗೂ ಸಯ್ಯದ್ ಯಾಸಿನ್ ಬಿಬಿಎಂ ಪರೀಕ್ಷೆಯಲ್ಲಿ ಪಾಸಾಗಿದ್ದು, ಇವರು ತನ್ನ ಹುಣಸೂರು ಸ್ನೇಹಿತ ರೆಹಮಾನ್ ಹಾಗೂ ಇಬ್ಬರು ಸ್ನೇಹಿತೆಯರು ಸ್ಪೂರ್ತಿ ಹಾಗೂ ದಿವ್ಯಾಗೆ ಪಾರ್ಟಿ ಕೊಡಲು ರೆಹಮಾನ್ ಕಾರಿನಲ್ಲಿ ನಗರದ ಹೊರವಲಯಕ್ಕೆ ಹೋಗಿದ್ದರು. ಅಲ್ಲಿ ಪಾರ್ಟಿ ಮುಗಿಸಿಕೊಂಡು ಬರುವಾಗ ವೇಗವಾಗಿ ಕಾರು ಚಲಾಯಿಸಿದ್ದು, ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ.

ರೆಹಮಾನ್ ಹಾಗೂ ಸ್ಪೂರ್ತಿಗೆ ಗಾಯಗಳಾಗಿದೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರು ಚಲಾಯಿಸುತ್ತಿದ್ದ ರೆಹಮಾನ್ ಸ್ಪೋರ್ಟ್ ಕಾರುಗಳನ್ನು ಓಡಿಸುವುದರಲ್ಲಿ ನಿಪುಣನಾಗಿದ್ದು, ಕಳೆದ 2 ವರ್ಷಗಳಿಂದ ರೈಡಿಂಗ್ ಬಿಟ್ಟಿದ್ದ. ಇಂದು ಆತ ಪಾರ್ಟಿ ಮುಗಿಸಿಕೊಂಡು ಬರುವಾಗ ರಿಂಗ್ ರಸ್ತೆಯಲ್ಲಿ ಡ್ರೈವಿಂಗ್ ಚಾಣಾಕ್ಷಣತನ ತೋರಿಸಲು ಹೋಗಿ ಅಫಘಾತ ಸಂಭವಿಸಿರಬಹುದು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕುವೆಂಪು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

See also  ಪ್ರೇಯಸಿಯ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು