News Kannada
Tuesday, December 06 2022

ಮೈಸೂರು

ಬೇರೆ ಪುರುಷರ ಜತೆ ಸಲುಗೆಯಿಂದ ಮಾತಾಡಿ ಹಣ ತರುವಂತೆ ಪೀಡಿಸುತ್ತಿದ್ದ ಪತಿ ವಿರುದ್ಧ ಪತ್ನಿ ದೂರು

Photo Credit :

ಬೇರೆ ಪುರುಷರ ಜತೆ ಸಲುಗೆಯಿಂದ ಮಾತಾಡಿ ಹಣ ತರುವಂತೆ ಪೀಡಿಸುತ್ತಿದ್ದ ಪತಿ ವಿರುದ್ಧ ಪತ್ನಿ ದೂರು

ಮೈಸೂರು: ಅಪರಿಚಿತ ಗಂಡಸರನ್ನು ಮನೆಗೆ ಕರೆತಂದು ಸಲುಗೆಯಿಂದ ಮಾತನಾಡಿ ಹಣ ವಸೂಲಿ ಮಾಡುವಂತೆ ಒತ್ತಾಯಿಸುತ್ತಿರುವುದಾಗಿ ಮಹಿಳೆಯೊಬ್ಬಳು ತನ್ನ ಪತಿ ವಿರುದ್ಧವೇ ದೂರು ನೀಡಿರುವ ಘಟನೆ ನಂಜನಗೂಡು ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ಎಚಗುಡ್ಲ ಗ್ರಾಮದ ಗೃಹಿಣಿ ರತ್ನಮ್ಮ ಎಂಬಾಕೆಯೇ ಗಂಡನ ವಿರುದ್ಧ ದೂರು ನೀಡಿದ ಮಹಿಳೆ. ಈಕೆ ಮೈಸೂರು ತಾಲೂಕಿನ ಉದ್ಭೂರು ಗ್ರಾಮದ ನಿವಾಸಿಯಾಗಿದ್ದು ಕಳೆದ ಆರು ವರ್ಷಗಳ ಹಿಂದೆ ಎಚಗುಂಡ್ಲ ಗ್ರಾಮದ ಅಯ್ಯಪ್ಪ ಎಂಬಾತನನ್ನು ಮದುವೆಯಾಗಿದ್ದಳು.

ಕುಡಿತ ದಾಸನಾಗಿದ್ದ ಅಯ್ಯಪ್ಪ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಲ್ಲದೆ, ಹೆಂಡತಿಯ ಒಡವೆಯನ್ನು ಮಾರಾಟ ಮಾಡಿ ಹೆಂಡ ಸೇವಿಸುತ್ತಿದ್ದನು ಎನ್ನಲಾಗಿದೆ. ಹಣವನ್ನೆಲ್ಲ ಕಳೆದುಕೊಂಡಿದ್ದ ಈತ ಹೆಂಡತಿಗೆ ಪರಪುರುಷರೊಂದಿಗೆ ಸಂಬಂಧ ಬೆಳೆಸಿ ಹಣ ತೆಗೆದುಕೊಂಡು ಬಾ ಎಂದು ಕಾಟ ನೀಡುತ್ತಿದ್ದನು. ಇದಕ್ಕೆ ಒಪ್ಪದಿದ್ದಾಗ ಆಕೆಯ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಲ್ಲದೆ ಬೆಂಕಿ ಹಚ್ಚಿ ಕೊಲೆಗೈಯ್ಯುವುದಾಗಿ ಬೆದರಿಕೆ ಹಾಕಿದ್ದಾನೆ.

ಆತನ ಹಿಂಸೆಯಿಂದ ಬೇಸತ್ತಿದ್ದ ರತ್ನಮ್ಮ ತವರು ಮನೆ ಸೇರಿಕೊಂಡಿದ್ದಳಲ್ಲದೆ, ಗ್ರಾಮದ ಮುಖಂಡರಿಂದ ಪಂಚಾಯಿತಿ ಮಾಡಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ನ್ಯಾಯ ಸಿಗದ ಕಾರಣ ರತ್ನಮ್ಮ ಪೊಲೀಸ್ ಮೊರೆ ಹೋಗಿದ್ದು, ಕುಡುಕ ಪತಿರಾಯನಿಂದ ರಕ್ಷಣೆ ನೀಡಿ ತನ್ನ ಮಗುವನ್ನ ಕೊಡಿಸುವಂತೆ ಮನವಿ ಮಾಡಿದ್ದಾ

See also  ಕಾಂಗ್ರೆಸ್ ನವರ ಐಟಿ ದಾಳಿ ಮರೆ ಮಾಚಲು ಬಿಜೆಪಿಯವರ ಮೇಲೆ ಐಟಿ ದಾಳಿ: ಸಿಎಂ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು