News Kannada
Sunday, December 04 2022

ಮೈಸೂರು

ನಾಗರಹೊಳೆಯಲ್ಲಿ ಹೆಣ್ಣು ಹುಲಿಯ ಮೃತದೇಹ ಪತ್ತೆ

Photo Credit :

ನಾಗರಹೊಳೆಯಲ್ಲಿ ಹೆಣ್ಣು ಹುಲಿಯ ಮೃತದೇಹ ಪತ್ತೆ

ಮೈಸೂರು: ಎಂಟು ವರ್ಷದ ಹೆಣ್ಣು ಹುಲಿಯ ಮೃತದೇಹ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಅನೇಚೌಕೂರು ವಲಯದಲ್ಲಿ ಪತ್ತೆಯಾಗಿದ್ದು ಮತ್ತೊಂದು ಹುಲಿ ಕಾದಾಟದಲ್ಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಜಿಲ್ಲೆಯ ಹುಣಸೂರು ತಾಲೂಕಿನ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಆನೇಚೌಕೂರು ವಲಯದಲ್ಲಿ 8 ವರ್ಷದ ಹೆಣ್ಣು ಹುಲಿಯ ಮೃತದೇಹ ಪತ್ತೆಯಾಗಿದೆ. ಹುಲಿಯ ಮೈಮೇಲೆ ಬೇರೆ ಹುಲಿ ಮಾಡಿರುವ ಗಾಯದ ಗುರುತುಗಳು ಕಂಡು ಬಂದಿದ್ದು, ಮತ್ತೊಂದು ಹುಲಿಯೊಂದಿಗೆ ನಡೆಸಿದ ಕಾದಾಟದಲ್ಲಿ ಮೃತಪಟ್ಟಿರಬಹುದು ಎನ್ನಲಾಗಿದೆ.

ಮೃತಪಟ್ಟಿರುವ ಹುಲಿಯನ್ನು ಅಂತರಸಂತೆ ವಲಯ ಅರಣ್ಯ ಪ್ರದೇಶದಲ್ಲಿ 2014, 2015 ಹಾಗೂ 2016ನೇ ಸಾಲಿನಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ವೇಳೆ ಗುರುತಿಸಿ, 44 ಎಂಬ ಸಂಕೇತ ಸಂಖ್ಯೆಯನ್ನು ನೀಡಲಾಗಿತ್ತು. ಹುಲಿಯ ಸಂತಾನಾಭಿವೃದ್ಧಿಯ ಕಾಲ ಇದಾಗಿದ್ದು, ಈ ಸಮಯದಲ್ಲಿ ಹೆಣ್ಣು ಹುಲಿಯೊಂದಿಗೆ ಗಂಡು ಹುಲಿಗಳು ಕೂಡುವುದಕ್ಕೆ ಸಂಘರ್ಷ ನಡೆಸುತ್ತವೆ. ಈ ಕಾದಾಟದಲ್ಲಿ ಹುಲಿ ಮೃತಪಟ್ಟಿರಬಹುದು. ಮರಣೋತ್ತ ಪರೀಕ್ಷೆಯ ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಹುಲಿ ಯೋಜನಾ ನಿರ್ದೇಶಕ ಮಣಿಕಂಠನ್ ತಿಳಿಸಿದರು.

See also  ಬ್ಯೂಟಿ ಪಾರ್ಲರ್ ಡೈರಿಗೆ ಐವರು ಪೊಲೀಸರ ಅಮಾನತು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು