News Kannada
Saturday, December 03 2022

ಮೈಸೂರು

ಕೇರಳದ ಐವರು ಹೆದ್ದಾರಿ ದರೋಡೆಕೋರರ ಬಂಧನ!

Photo Credit :

ಕೇರಳದ ಐವರು ಹೆದ್ದಾರಿ ದರೋಡೆಕೋರರ ಬಂಧನ!

ಗುಂಡ್ಲುಪೇಟೆ: ಹೆದ್ದಾರಿಗಳಲ್ಲಿ ವಾಹನಗಳನ್ನು ಅಡ್ಡಗಟ್ಟಿ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡುತ್ತಿದ್ದ ಐವರನ್ನು ಗುಂಡ್ಲುಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜ. 14ರಂದು ಕೇರಳದ ಅಬ್ದುಲ್ಲಾ ಎಂಬುವವರ ಕಾರನ್ನು ಸುಲ್ತಾನ್ ಬತ್ತೇರಿ ರಸ್ತೆಯ ಕಗ್ಗಳದಹುಂಡಿ ಬಳಿ ಅಡ್ಡಗಟ್ಟಿ ಅವರ ಬಳಿಯಿಂದ 38 ಸಾವಿರ ರೂಪಾಯಿಗಳನ್ನು ದರೋಡೆ ಮಾಡಲಾಗಿತ್ತು. ಈ ಸಂಬಂಧ ಅವರು ನೀಡಿದ್ದ ದೂರಿನ ಅನ್ವಯ ಕೇರಳ ಮೂಲದ ಶೈಜು, ಅಜಿನ್, ಸೈಜು, ಗೋಕುಲ್, ಸಂದೀಪ್ ಎಂಬುವರನ್ನು ಬಂಧಿಸಲಾಗಿದ್ದು, ಅವರಿಂದ 2500 ರೂಪಾಯಿ ನಗದು ಮತ್ತು ಐದು ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅವರು ಹೆದ್ದಾರಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 15 ಮಂದಿಯ ವಿರುದ್ದ ದೂರು ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಿರುವುದಾಗಿ ತಿಳಿಸಿದ್ದಾರೆ.

ಜ. 14ರಂದು ಕೇರಳದ ಅಬ್ದುಲ್ಲಾ ಅವರ ಕಾರನ್ನು ಅಡ್ಡಗಟ್ಟಿ ದರೋಡೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಎಚ್.ಸಿ.ಬಾಲಕೃಷ್ಣ ಮತ್ತು ಚಾಮರಾಜನಗರ ಸರ್ಕಲ್ಇನ್ಸ್ ಪೆಕ್ಟರ್ ರಾಜೇಂದ್ರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಲಾಗಿತ್ತು. ಕಳೆದ ಹದಿನೈದು ದಿನಗಳಿಂದ ಕೇರಳ ವಿವಿಧ ಮೂಲೆಗಳಲ್ಲಿ ಕಾರ್ಯಾಚರಣೆ ನಡೆಸಿ ಐದು ಮಂದಿ ದರೋಡೆಕೋರರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ಮುಂದುವರಿಸಿರುವುದಾಗಿ ತಿಳಿಸಿದ್ದಾರೆ.

ಎಎಸ್ಪಿ ಗೀತಾಪ್ರಸನ್ನ, ಡಿಎಸ್ಪಿ ಸಿ.ಟಿ.ಜಯಕುಮಾರ್ ಮಾರ್ಗದರ್ಶನದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ಎಚ್.ಸಿ.ಬಾಲಕೃಷ್ಣ, ರಾಜೇಂದ್ರ, ರವೀಚಂದ್ರ, ಪಿಎಸ್ಐಗಳಾದ ಶಿವರುದ್ರ, ಲೋಹಿತ್ ಕುಮಾರ್, ದಾಸಪ್ಪ, ಕಿರಣ್ ಕುಮಾರ್, ರವಿಕಿರಣ್, ಎಎಸ್ಐ ನಾಗರಾಜು, ಸಿಬ್ಬಂದಿ ಪುಟ್ಟರಾಜು, ಜಗದೀಶ್, ಮಹೇಶ, ಅಜಿತಕುಮಾರ್, ಹರೀಶ್,ನಾಗೇಶ್, ರಾಚಪ್ಪ, ಗಂಗಾಧರ್, ಬಸವರಾಜು, ದಿವಾಕರ್, ನಾಗೇಂದ್ರ, ಮಹೇಶ್ ಎಚ್.ಪಿ.ಶಿವನಂಜಪ್ಪ, ಶಂಭುಲಿಂಗಸ್ವಾಮಿ, ಸುರೇಶ್, ವೆಂಕಟೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಅವರು ಹೇಳಿದ್ದಾರೆ.

See also  ಮೈಸೂರಿನ ಸ್ಪಾ ಸೆಂಟರ್ ನಲ್ಲಿ ವೇಶ್ಯಾವಾಟಿಕೆ: ನಾಲ್ವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು