News Kannada
Monday, December 05 2022

ಮೈಸೂರು

ಅರ್ಬನ್ ಹಾತ್ ನಲ್ಲಿ ಕಣ್ಮನ ಸೆಳೆಯುವ ಕರಕುಶಲ ವಸ್ತುಪ್ರದರ್ಶನ….

Photo Credit :

ಅರ್ಬನ್ ಹಾತ್ ನಲ್ಲಿ ಕಣ್ಮನ ಸೆಳೆಯುವ ಕರಕುಶಲ ವಸ್ತುಪ್ರದರ್ಶನ….

ಮೈಸೂರು: ನಗರದ ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್ಎಸ್ ಅರ್ಬನ್ ಹಾತ್ ನಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆಯುತ್ತಿರುವ ಕರಕುಶಲ ವಸ್ತುಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ.

ಅದಲ್ಲದೆ ಬರ್ತ್ ಡೇ ಕಾರ್ಡ್ ಗಳು, ಗಿಫ್ಟ್ ಕಾರ್ಡ್ ಗಳು, ನೇಮ್ ಕಾರ್ಡ್ ಗಳನ್ನು ಕಲಾವಿದರು ರಚಿಸಿಕೊಡುತ್ತಿದ್ದು, ಚಿತ್ರ ಬಿಡಿಸಿಕೊಳ್ಳಲು ಜನ ಮುಗಿ ಬೀಳುತ್ತಿದ್ದಾರೆ.

ಇನ್ನು ಇಲ್ಲಿರುವ ಹೂವಿನ ಮಳಿಗೆಯಲ್ಲಿನ ವಿವಿಧ ಮಾದರಿಯ ಹೂಗುಚ್ಛಗಳು ಎಲ್ಲರನ್ನು ಆಕರ್ಷಿಸುತ್ತಿದೆ. ಸಣ್ಣ ಬೊಂಬೆಗಳು, ಆಟಿಕೆಗಳೂ ಬಿದಿರಿನ ವಿವಿಧ ಪೀಠೋಪಕರಣಗಳು ಇಲ್ಲಿವೆ. ಇಲ್ಲಿರುವ ಕುರ್ಚಿ, ಏಣಿ, ಬುಟ್ಟಿ ಸೇರಿದಂತೆ ಹಲವು ಉತ್ಪನ್ನಗಳು, ಬಿದಿರಿನಿಂದಲೇ ತಯಾರಿಸಲ್ಪಟ್ಟ ಬ್ಯಾಗ್ ಗಳು, ವ್ಯಾನಿಟಿ ಬ್ಯಾಗ್ ಸೇರಿದಂತೆ ಪರ್ಸ್ ಎಲ್ಲರ ಗಮನ ಸೆಳೆಯುತ್ತಿದೆ. ಅದಲ್ಲದೆ ಬೆತ್ತ, ಸೆಣಬಿನ ಚೀಲಗಳು ಕೂಡ ಮನಸೆಳೆಯುತ್ತಿವೆ.

ಎಳೆ ಬಿದಿರಿನ(ಕಣಿಲೆ) ಉಪ್ಪಿನಕಾಯಿ, ಬಿದಿರಕ್ಕಿ, ಬಿದಿರಿನಿಂದ ಮಾಡಿದ ಸೌಟುಗಳು, ಹೂದಾನಿಗಳು, ಬುಟ್ಟಿಗಳು, ಹೂಕುಂಡಗಳು ಇಲ್ಲಿವೆ. ಇವೆಲ್ಲವುಗಳಿಂತಲೂ ವಿಶಿಷ್ಟವಾದ ಬಿದಿರಿನ ಉತ್ಪನ್ನವೊಂದನ್ನು ಕೇರಳದ ಮಹಲ್ಮಾ ಬಂಬೂ ಕ್ರಾಪ್ಟ್ ನ ಶಿಬಿ ಜೋಸೆಫ್ ತಯಾರಿಸಿದ್ದಾರೆ. ಬಿದಿರಿನ ತುಂಡಿನೊಳಗೆ ಬಿದಿರಿನ ಕಡ್ಡಿಯನ್ನು ಸೇರಿಸಿ ಅದರ ಜತೆಗೆ ಕಾಳುಗಳನ್ನು ತುಂಬಿಸಿ ಬಿದಿರಿನ ಎರಡೂ ಕಡೆ ಮುಚ್ಚಳದಿಂದ ಭದ್ರಗೊಳಿಸಿದ್ದಾರೆ.

ಆ ಬಿದಿರಿನ ತುಂಡನ್ನು ಓರೆಯಾಗಿ ಹಿಡಿದುಕೊಂಡರೆ ಬಿದಿರಿನೊಳಗೆ ಇರುವ ಕಡ್ಡಿ ಹಾಗೂ ಕಾಳುಗಳು ಮೇಲಿನಿಂದ ಕೆಳಗೆ ಬೀಳುವಾಗ ಮಳೆಯ ಶಬ್ದವನ್ನು ತರಿಸುವುದು ಅಚ್ಚರಿಯನ್ನು ಮೂಡಿಸುತ್ತದೆ. ಇದಕ್ಕೆ ರೇನ್ ಸ್ಟಿಕ್ ಎಂದು ಹೆಸರಿಡಲಾಗಿದೆ. ಮಣ್ಣಿನ ಹೂಜಿಗಳು, ಮುಖವರ್ಣಿಕೆಗಳು, ಪಾತ್ರೆಗಳು ಹಾಗೂ ಮಕ್ಕಳಿಗೆ, ಹಿರಿಯರಿಗೆ, ಮಹಿಳೆಯರಿಗೊಪ್ಪುವ ವಿವಿಧ ಬಗೆಯ ಉಡುಪುಗಳ ಇಲ್ಲಿವೆ

ಆಕರ್ಷಕವಾದ ಬಗೆಬಗೆ ಬಣ್ಣದ ಗೊಂಬೆಗಳು ಮಕ್ಕಳ ಮನಸ್ಸನ್ನೂ, ಹಿರಿಯರ ಹೃದಯವನ್ನೂ ಗೆಲ್ಲುವಂತಿವೆ. ಚಳಿಯ ವಾತಾವರಣದಲ್ಲಿ ಬೆಚ್ಚನೆಯ ಅನುಭವ ನೀಡುವ ಉಡುಪುಗಳು ಇವೆ. ಶ್ರೀಕೃಷ್ಣಮೂರ್ತಿ ಫೈನ್ ಆರ್ಟ್ ಮಳಿಗೆಯಲ್ಲಿ ವಿಶಿಷ್ಟವಾದ ಮರದ ಕಲಾಕೃತಿಗಳು ಗಮನ ಸೆಳೆಯುತ್ತವೆ. ರೋಸ್ವುಡ್ ಗೋಡೆ ಗಡಿಯಾರಗಳು, ವಾಲ್ ಪ್ಯಾನ್ ಗಳು ಹಾಗೂ ಮಂಟಪಗಳು ಇಲ್ಲಿವೆ. ವಿವಿಧ ಮರಗಳ ತುಂಡುಗಳಿಂದಲೇ ರಚಿಸುವ ಕಲಾಕೃತಿಗಳು ಗಮನ ಸೆಳೆಯುತ್ತವೆ. ಕಾಟನ್ ಜೋಕಾಲಿಗಳು ಕೂಡ ಕರಕುಶಲ ಕರ್ಮಿಗಳ ಚಾಕಚಕ್ಯತೆಯನ್ನು ಅನಾವರಣಗೊಳಿಸುತ್ತಿವೆ.

ನೂಲಿನಿಂದಲೇ ವಿವಿಧ ಬಗೆಯ ಕಲಾಕೃತಿಗಳನ್ನು ರಚಿಸುವ ಕಲಾವಿದನ ಕಲೆಗಾರಿಕೆ ಗಮನಸೆಳೆಯುತ್ತದೆ. ಕಾಗದದ ಮೇಲೆ ನೂಲಿನಲ್ಲೇ ಚಿತ್ತಾರವನ್ನು ಮೂಡಿಸಿರುವ ವಿವಿಧ ಗ್ರೀಟಿಂಗ್ ಕಾರ್ಡ್ ಗಳು ಇನ್ನಷ್ಟು ವಸ್ತುಪ್ರದರ್ಶನದ ಮೆರುಗು ಹೆಚ್ಚಿಸುತ್ತಿವೆ. ಪ್ರೇಮಿಗಳ ದಿನಾಚರಣೆ, ಹುಟ್ಟುಹಬ್ಬದ ಸಂಭ್ರಮ ಹೀಗೇ ವಿಶೇಷ ಸಂದರ್ಭಗಳಲ್ಲಿ ಉಡುಗೊರೆ ನೀಡಲು ಮಾದರಿಯಾದ ಈ ಕಲಾಕೃತಿಗಳು ಆಕರ್ಷಕವಾಗಿವೆ.

ಕರ್ನಾಟಕ, ಜಮ್ಮು ಕಾಶ್ಮೀರ, ಪಶ್ವಿಮ ಬಂಗಾಳ, ಮಹಾರಾಷ್ಟ್ರ, ಉತ್ತರ ಪ್ರದೇಶ, ಕಾಶ್ಮೀರ, ದೆಹಲಿ, ಗುಜರಾತ್, ಒರಿಸ್ಸಾ, ಆಂಧ್ರ ಪ್ರದೇಶ, ತಮಿಳು ನಾಡು, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶದ ಕರಕುಶಲ ವಸ್ತುಗಳು ಇವೆ. ಮೃದುವಾದ ಶಾಲು, ಖಶೀದ ಕರಿ ಎಂಬ್ರಾಯಿಡರಿ ಡ್ರೆಸ್ ಗಳು ಮತ್ತು ಆಭರಣಗಳು ಒರಿಸ್ಸಾ ರಾಜ್ಯದ ದೊಗ್ರಾಶಿಲ್ಪ, ಪಟ್ಟ ಚಿತ್ರಕಲೆಗಳು, ಮಹಾರಾಷ್ಟ್ರ ರಾಜ್ಯದ ಟಸ್ಸರ್ ರೇಷ್ಮೆ ಸೀರೆಗಳು ಮತ್ತು ಕೊಲ್ಲಾಪುರ್ ಚಪ್ಪಲಿಗಳು, ದೆಹಲಿ ರಾಜ್ಯದ ಮಣ್ಣಿನಿಂದ ತಯಾರಿಸಿರುವ ಗೃಹಲಾಂಕಾರಿಕ ಹೂಜಿಗಳು, ಪೀಠೋಪಕರಣಗಳು, ಡ್ರೆಸ್ ಗಳು ಗುಜರಾತ್ ರಾಜ್ಯದ ಬಣ್ಣದ ಹೂಕುಂಡಗಳು, ಕುಚ್ ವೂಲ್ಲನ್ ಶಾಲು, ಪಶ್ಚಿಮ ಬಂಗಾಳದ ಸೆಣಬಿನ ವಸ್ತುಗಳು, ಬಾಟಿಕ್ ಸೀರೆಗಳು, ಜರ್ದೋಷಿ ಸೀರೆಗಳು, ಮಧ್ಯಪ್ರದೇಶದ ಚಂದೇರಿ ರೇಷ್ಮೆ ಸೀರೆಗಳು, ಕರ್ನಾಟಕದ ರೇಷ್ಮೆ, ಕೈಮಗ್ಗದ ಸೀರೆಗಳು ಇಲ್ಲಿವೆ. ಇವೆಲ್ಲವನ್ನೂ ವೀಕ್ಷಿಸಿ ಹಸಿವಾದರೆ ಬಗೆಬಗೆಯ ಖಾದ್ಯಗಳನ್ನು ಸವಿಯಲು ಬಹುದು.

See also  ಯುವತಿಯನ್ನು ಪುಸಲಾಯಿಸಿ ಅತ್ಯಾಚಾರ: ಆರೋಪಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು