News Kannada
Friday, December 09 2022

ಮೈಸೂರು

ಸಾವಿನಲ್ಲೂ ಒಂದಾದ ತಂದೆ ಮಗ: ಮೈಸೂರಿನಲ್ಲೊಂದು ಮನ ಕಲಕುವ ಘಟನೆ

Photo Credit :

ಸಾವಿನಲ್ಲೂ ಒಂದಾದ ತಂದೆ ಮಗ: ಮೈಸೂರಿನಲ್ಲೊಂದು ಮನ ಕಲಕುವ ಘಟನೆ

ಮೈಸೂರು: ಸಾವಿನಲ್ಲಿ ತಂದೆ ಮಗ ಒಂದಾದ ಮನ ಕಲಕುವ ಘಟನೆ ನಡೆದಿದೆ.  ಮೈಸೂರು ತಾಲೂಕು ಬೆಳವಾಡಿಯಲ್ಲಿನ ನಿವಾಸಿ ಪುಟ್ಟೇಗೌಡ ಪುತ್ರ ಭೈರೇಗೌಡ(33)ಮಾರಕ ರೋಗ ಕ್ಯಾನ್ಸರ್ ಗೆ ಬಲಿಯಾಗಿದ್ದ. ಮಗನ ಶವಯಾತ್ರೆಯ ವೇಳೆ ತಂದೆಗೆ ಹೃದಯಾಘಾತವಾಗಿದ್ದು, ಮಗನ ಶವಯಾತ್ರೆ ತೆರಳುವ ವೇಳೆ ತಂದೆ ಪುಟ್ಟೇಗೌಡ (65) ಸಾವನ್ನಪ್ಪಿದ್ದಾರೆ.

ಮಗನ ಶವ ಪೂಜೆ ಸಲ್ಲಿಸಿದ ಬಳಿಕ ಶವ ಸ್ಮಶಾನಕ್ಕೆ ಕೊಂಡೊಯ್ಯುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ್ದು, ಮಗನ ಶವ ಸ್ಮಶಾನದಲ್ಲಿಟ್ಟು ಪುಟ್ಟೇಗೌಡ ಅವರನ್ನು ಗ್ರಾಮಸ್ಥರು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ತೆರಳುವ ಮುನ್ನವೇ ಪುಟ್ಟೇಗೌಡ ಕನೆಯುಸಿರೆಳೆದಿದ್ದಾರೆ.

ನಂತರ ತಂದೆ- ಮಗನ ಶವಕ್ಕೆ ಒಂದೇ ಚಿತೆಯಲ್ಲಿ ಅಗ್ನಿ ಸ್ಪರ್ಶ ಮಾಡಿದ್ದಾರೆ. ಮೃತರ ಸಂಬಂಧಿಕರ ರೋದನ ಮುಗಿಲು ಮುಟ್ಟಿತ್ತು.

 

See also  ವಿಷ ಪ್ರಸಾದ ಸೇವನೆ: ಆರೋಪಿಗಳ ಪರ ವಕಾಲತ್ತು ವಹಿಸದಂತೆ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು