News Kannada
Monday, December 05 2022

ಮೈಸೂರು

ಶುದ್ಧ ನೀರಿನ ಘಟಕವಿದ್ದರೂ ಬಾರದ ನೀರು..!

Photo Credit :

ಶುದ್ಧ ನೀರಿನ ಘಟಕವಿದ್ದರೂ ಬಾರದ ನೀರು..!

ಮೈಸೂರು: ಗ್ರಾಮೀಣ ಪ್ರದೇಶಕ್ಕೂ ಶುದ್ಧ ಕುಡಿಯುವ ನೀರನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಿದೆ. ಆದರೆ ಬಹಳಷ್ಟು ಊರುಗಳಲ್ಲಿ ಈ ಘಟಕಗಳು ಕೆಟ್ಟಿದ್ದು, ಅವುಗಳನ್ನು ಸರಿಪಡಿಸದ ಕಾರಣ ನೀರೇ ಸಿಗದಂತಾಗಿದೆ.

ಇದಕ್ಕೆ ಹುಣಸೂರು ತಾಲೂಕಿನ ಹನಗೋಡು ಗ್ರಾಮದಲ್ಲಿ ಸ್ಥಾಪಿಸಿದ ಶುದ್ಧ ನೀರಿನ ಘಟಕವೂ ಸಾಕ್ಷಿಯಾಗಿದೆ. ಇಲ್ಲಿನ ಜನರ ಅನುಕೂಲಕ್ಕಾಗಿ ಶುದ್ಧ ನೀರಿನ ಘಟಕವನ್ನು ನಿರ್ಮಿಸಲಾಗಿತ್ತು. ಮೊದ ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಗ್ರಾಮಸ್ಥರು ಬಂದು ನೀರು ಕೊಂಡೊಯ್ಯುತ್ತಿದ್ದರು.

ಆದರೆ ಕೆಲವು ತಿಂಗಳ ಸಮಯಗಳಿಂದ ಇದು ಕೆಟ್ಟಿದ್ದು, ನೀರೇ ಬಾರದಂತಾಗಿದೆ. ಇದನ್ನು ಸರಿಪಡಿಸುವ ಗೋಜಿಗೆ ಯಾರೂ ಹೋಗದ ಕಾರಣ ಸದ್ಯದ ಮಟ್ಟಿಗೆ ಇದ್ದು ಇಲ್ಲದಂತಾಗಿದೆ. ಇನ್ನು ಈ ಬಗ್ಗೆ  ಹನಗೋಡು ಗ್ರಾ.ಪಂ.ಗೆ ದೂರು ನೀಡಿದರೆ ಇದು ನಿರ್ಮಾಣ ಮಾಡಿರುವ ಸಂಸ್ಥೆ ಹಾಗೂ ಗುತ್ತಿಗೆದಾರನೇ ಇನ್ನೂ 5 ವರ್ಷಗಳ ಕಾಲಾವಧಿವರೆಗೆ ನಿರ್ವಹಣೆ ಮಾಡಬೇಕಾಗಿದೆ ಎಂದು ಸಾಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.

ಇಲ್ಲಿನ ಜನಪ್ರತಿನಿಧಿಗಳಾಗಲೀ, ಗ್ರಾಪಂ ಆಡಳಿತವಾಗಲೀ ನೀರಿನ ಘಟಕದ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ದುರಸ್ತಿ ಭಾಗ್ಯ ಇನ್ನೂ ಕಂಡಿಲ್ಲ. ಪರಿಣಾಮ ದಿನನಿತ್ಯ ಜನ ನೀರಿಗಾಗಿ ಕ್ಯಾನ್ ಹಿಡಿದುಕೊಂಡು ಬಂದು ನೀರಿಲ್ಲದೆ, ಖಾಲಿ ಕ್ಯಾನನ್ನು ಹಿಡಿ ಶಾಪ ಹಾಕಿಕೊಂಡು ಹಿಂತಿರುಗುತ್ತಿದ್ದಾರೆ.

ಇನ್ನಾದರೂ ಸಂಬಂಧಪಟ್ಟವರು ಇದರತ್ತ ಗಮನಹರಿಸಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಪಡಿಸಿ ನೀರು ಪೂರೈಸಿ ಎಂದು ಗ್ರಾಮಸ್ಥರಾದ ಸುನಿಲ್, ಪರಮೇಶ್, ಆದರ್ಶ ಮನವಿ ಮಾಡಿದ್ದಾರೆ.

See also  ಪೇ ಅಂಡ್ ಪಾರ್ಕಿಂಗ್ ವ್ಯವಸ್ಥೆಗೆ ಮುಂದಾದ ಪಾಲಿಕೆ: ಸಾರ್ವಜನಿಕರಿಂದ ಆಕ್ರೋಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು