News Kannada
Friday, September 30 2022

ಮೈಸೂರು

ಅನೈರ್ಮಲ್ಯದ ತಾಣವಾದ ಮಗುವಿನಹಳ್ಳಿ ಶಾಲೆ - 1 min read

Photo Credit :

ಅನೈರ್ಮಲ್ಯದ ತಾಣವಾದ ಮಗುವಿನಹಳ್ಳಿ ಶಾಲೆ

ಚಾಮರಾಜನಗರ: ಸಾಮಾನ್ಯವಾಗಿ ಶಾಲೆಗಳು ಎಂದರೆ ಅಲ್ಲಿ ಸ್ವಚ್ಛತೆ ಎದ್ದು ಕಾಣುತ್ತಿರಬೇಕು. ಜತೆಗೆ ಅಚ್ಚುಕಟ್ಟುತನ, ಶಿಸ್ತು ಎಲ್ಲವೂ ಮೇಳೈಸುತ್ತಿರಬೇಕು. ಆದರೆ ಇದಕೆಲ್ಲ ಅಪವಾದ ಎಂಬಂತೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿಯೋಜನೆಯ ಕಾಡಂಚಿನ ಮಗುವಿನಹಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಥೆಯಾಗಿದೆ.

ಈ ಶಾಲೆಗೆ ಯಾರಾದರು ಹೋದರೆ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಈ ಶಾಲೆ ಕಾಡಂಚಿನಲ್ಲಿರುವ ಕಾರಣ ಇವತ್ತೋ, ನಾಳೆಯೋ ಕಾಡು ಸೇರುವಂತಿದೆ. ಇಲ್ಲಿ ಸ್ವಚ್ಛತೆ, ಶಿಸ್ತು ಎಲ್ಲವನ್ನೂ ಗಾಳಿಗೆ ತೂರಲಾಗಿದೆ. ಶಾಲಾ ಕೊಠಡಿಯೊಳಗೆ ಹೋದರೆ ಯಾರೇ ಆದರೂ ಬೆಚ್ಚಿ ಬೀಳುತ್ತಾರೆ. ಇಲ್ಲಿನ ಕೊಠಡಿಗಳೆಲ್ಲವೂ ಧೂಳು ಹಿಡಿದಿದ್ದು, ಪುಸ್ತಕ, ಸರಂಜಾಮುಗಳನ್ನು ಜೋಡಿಸಿಡದೆ ಎಲ್ಲೆಂದರಲ್ಲಿ ಎಸೆಯಲಾಗಿದೆ.

ಶಾಲೆಗೆ ನೀಡಲಾದ ಏಜ್ಯುಸ್ಯಾಟ್, ಟಿವಿಗಳನ್ನೆಲ್ಲ ನಿರ್ಧಿಷ್ಟ ಸ್ಥಳದಲ್ಲಿಡದೆ ಎಲ್ಲೆಂದರಲ್ಲಿ ಎಸೆಯಲಾಗಿದೆ. ನಿರುಪಯುಕ್ತ ವಸ್ತುಗಳನ್ನು ರಾಶಿ ಹಾಕಲಾಗಿದೆ. ಎಲ್ಲವನ್ನು ಸ್ವಚ್ಛವಾಗಿಡಬೇಕಾದ ಮುಖ್ಯ ಶಿಕ್ಷಕರು ತಮಗೆ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮೌನಕ್ಕೆ ಶರಣಾಗಿದ್ದಾರೆ. ಅವರ ಮೌನಕ್ಕೆ ಸಾಕ್ಷಿ ಎಂಬಂತೆ ಮರಗಳ ಎಲೆಗಳೆಲ್ಲವೂ ಕೊಠಡಿಯಲ್ಲಿ ತುಂಬಿ ಹೋಗಿವೆ. ಅದನ್ನು ಸ್ವಚ್ಛ ಮಾಡುವಲ್ಲಿ ಅವರು ವಿಫಲರಾಗಿದ್ದಾರೆ. ಒಟ್ಟಾರೆ ಜ್ಞಾನದೇಗುಲವಾಗಿರುವ ಶಾಲೆ ಅನೈರ್ಮಲ್ಯದ ತಾಣವಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ಮುಂದೆಯಾದರೂ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ

See also  ಕಾಡುವ ಮಲಬದ್ಧತೆಯನ್ನು ನಿವಾರಿಸುವುದು ಹೇಗೆ?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು