News Kannada
Thursday, September 29 2022

ಮೈಸೂರು

ಶ್ರವಣಬೆಳಗೊಳದಲ್ಲಿ 2018ರ ಮಹಾಮಸ್ತಕಾಭಿಷೇಕಕ್ಕೆ ತೆರೆ - 1 min read

Photo Credit :

ಶ್ರವಣಬೆಳಗೊಳದಲ್ಲಿ 2018ರ ಮಹಾಮಸ್ತಕಾಭಿಷೇಕಕ್ಕೆ ತೆರೆ

ಶ್ರವಣಬೆಳಗೊಳ: ಜೈನಕಾಶಿ ಶ್ರವಣಬೆಳಗೊಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿಯ 88 ನೇ ಮಹಾಮಸ್ತಕಾಭಿಷೇಕ ಮಹೋತ್ಸವವು ಫೆಬ್ರವರಿ 17 ರಂದು ಪ್ರಾರಂಭಗೊಂಡು ಅತ್ಯಂತ ಸೂಸುತ್ರವಾಗಿ ಜರುಗಿದ್ದು, ಅಂತಿಮ ದಿನವಾದ ಇಂದು ವಿವಿಧ ಗಣ್ಯತಿಗಣ್ಯರನ್ನು ಒಳಗೊಂಡಂತೆ ಶ್ರೀ ಕ್ಷೇತ್ರಕ್ಕೆ ಜನಸಾಗರವೇ ಹರಿದುಬಂದಿತ್ತು. 2018 ರ ಮಹಾಮಸ್ತಕಾಭಿಷೇಕ್ಕೆ ಇಂದು ಅಧಿಕೃತವಾಗಿ ತೆರೆ ಕಂಡಿತು.

ಇಂದು ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಇದ್ದ ಕಾರಣ ಜೈನಕಾಶಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಹಾಗೂ ಪ್ರವಾಸಿಗರು ಆಗಮಿಸಿ ನಿರೀಕ್ಷೆಗೂ ಮೀರಿದಂತೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮವು ಉತ್ತಮ ರೀತಿಯಲ್ಲಿ ನೆರವೇರಿತು.

ವಿಂಧ್ಯಗಿರಿ ಹಾಗೂ ಚಂದ್ರಗಿರಿ ನಡುವೆ ಕಂಗೊಳಿಸುವ ಕಲ್ಯಾಣಿಯ ಪಕ್ಕದಲ್ಲಿನ ರಸ್ತೆಯುದ್ದಕ್ಕೂ ನಿರ್ಮಿಸಿರುವ ಜಾಲರಿಯೊಳಗೆ ಭಕ್ತರು ಕಿಕ್ಕಿರಿದು ನಿಂತಿದ್ದಲ್ಲದೇ ಹಿಂದಿನ ದಿನಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಮಹಾ ಸ್ವಾಮಿಗೆ ಭಕ್ತಿ ನಮನ ಸಲ್ಲಿಸಿದರು. ಮುಖ್ಯದ್ವಾರದ ಮುಂಭಾಗ ಹಾಗೂ ಬೆಟ್ಟದ ಪಶ್ಚಿಮದ ಮೆಟ್ಟಿಲಿನ ಬಳಿಯೂ ಸಾಲುಗಟ್ಟಿ ನಿಂತಿದ್ದ ಜನರು ಸುಡು ಬಿಸಿಲಿನ ನಡುವೆಯು ಬೆಟ್ಟ ಹತ್ತಿ ಕೊನೆಯ ಮಜ್ಜನ ನೋಡವ ತವಕದಲ್ಲಿದ್ದರು.

ಶ್ರವಣಬೆಳಗೊಳದ ಹೊರ ವಲಯದಲ್ಲಿ ಒಟ್ಟು 5 ಕಡೇ ನಿರ್ಮಿಸಿರುವ ತಾತ್ಕಾಲಿಕ ಬಸ್ ನಿಲ್ದಾಣದಿಂದ ಸಾಗುತಿದ್ದ ಉಚಿತ ನಗರ ಸಾರಿಗೆ ಬಸ್ಸುಗಳಲ್ಲಿ ಆಗಮಿಸುವುದರ ಜೊತೆಗೆ ನಗರಸಾರಿಗೆ ಬಸ್ಸುಗಳು ತುಂಬಿದ್ದ ಪರಿಣಾಮ ಭಕ್ತಾಧಿಗಳು ಬಾಹುಬಲಿಯ ದರ್ಶನ ಪಡೆಯಲು ಕಾಲ್ನಡಿಗೆಯ ಮೂಲಕ ಕ್ಷೇತ್ರಕ್ಕೆ ಸಾಗುತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂದಿತು.

ಸದ್ಯ ಬಾಹು ಬಲಿಗೆ ನಡೆಯುತ್ತಿರುವ ಮಹಾಮಜ್ಜನ ಇಂದು ತೆರೆಕಾಣಲಿದ್ದು ಮತ್ತೆ ಈ ಆನಂದದ ಸಮಯಕ್ಕಾಗಿ ಮುಂದಿನ ಹನ್ನೆರಡು ವರ್ಷಗಳವರೆಗೆ ಕಾಯಬೇಕಾಗಿರುವುದರಿಂದ ಈಗಲೇ ಆ ಶುಭ ಸಂದರ್ಭವನ್ನು ಕಣ್ತುಂಬಿಕೊಳ್ಳಲು ಜನರು ಉತ್ಸುಕರಾಗಿ ಸಾಗುತ್ತಿದ್ದರು, ಏನಾದರೂ ಒಂದು ಪ್ರಯತ್ನ ಮಾಡಿ ಬಾಹುಬಲಿಯ ದರ್ಶನ ಮಾಡಲೇಬೇಕೆಂಬ ಪಣತೊಟ್ಟು ಬಂದಿರುವಂತೆ ಭಕ್ತರಲ್ಲಿ ಕಾತುರ ಹಾಗೂ ಹಂಬಲ ಕಂಡು ಬಂದಿತು.

ಒಟ್ಟಾರೆ 9 ನೇ ದಿನವಾದ ಭಾನುವಾರ ನೂಕುನುಗ್ಗಲಿನಲ್ಲಿಯೇ ಬೆಟ್ಟ ಹತ್ತಿದ ಭಕ್ತರು ಬಾಹುಬಲಿಯ ದರ್ಶನ ಪಡೆದು ಮಜ್ಜನ ಕಣ್ತುಂಬಿಕೊಂಡು ಧನ್ಯತಾ ಭಾವನೆ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡು ಬಂದಿತು

See also  ಶ್ರೀರಂಗಪಟ್ಟಣದಲ್ಲಿ ಸ್ನೇಹಿತೆಯೊಂದಿಗೆ ಗೃಹಿಣಿ ನಾಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು