News Kannada
Wednesday, October 05 2022

ಮೈಸೂರು

ಸುಗಮ ಯುಗಾದಿ ಆಚರಣೆಗೆ ಪೊಲೀಸ್ ಕಮೀಷನರ್ ಸೂಚನೆ - 1 min read

Photo Credit :

ಸುಗಮ ಯುಗಾದಿ ಆಚರಣೆಗೆ ಪೊಲೀಸ್ ಕಮೀಷನರ್ ಸೂಚನೆ

ಮೈಸೂರು: ಚಾಂದ್ರಮಾನ ಯುಗಾದಿ ಹಬ್ಬವನ್ನು ಹೊಸ ವರ್ಷಾಚರಣೆಯಾಗಿ ನಗರದಾದ್ಯಂತ ಸಂಭ್ರಮ, ಸಡಗರ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ನಗರದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತೆ ನಗರ ಪೊಲೀಸ್ ಆಯುಕ್ತರಾದ ಡಾ. ಎ. ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

ಯುಗಾದಿ ಹಬ್ಬದ ದಿನ ಸಾರ್ವಜನಿಕ ಸ್ಥಳಗಳಲ್ಲಿ ಜೂಜಾಟ, ಇಸ್ಪೀಟ್ ಆಟ ಆಡುವುದನ್ನು ನಿಷೇಧಿಸಲಾಗಿದೆ. ಹೆಣ್ಣು ಮಕ್ಕಳು, ಹೆಂಗಸರನ್ನು ಚುಡಾಯಿಸಬಾರದು ಮತ್ತು ಮದ್ಯಪಾನ ಮಾಡಿ ಅವರೊಂದಿಗೆ ಅವಿಧೇಯತೆಯಿಂದ ವರ್ತಿಸಬಾರದು, ಹೆಂಗಸರು ಮತ್ತು ಹೆಣ್ಣು ಮಕ್ಕಳು ಆಭರಣ, ಒಡವೆಗಳನ್ನು ಸಾರ್ವಜನಿಕರಿಗೆ ಪ್ರದರ್ಶನವಾಗದಂತೆ ಸುರಕ್ಷಿತವಾಗಿ ಧರಿಸಬೇಕು. ಸಾರ್ವಜನಿಕರು ಮಾರುಕಟ್ಟೆ ಮತ್ತು ದೇವಾಲಯಗಳಲ್ಲಿ ಸರಗಳ್ಳತನ ಮತ್ತು ಜೇಬುಗಳ್ಳರ ಬಗ್ಗೆ ಎಚ್ಚರದಿಂದ ಇರಬೇಕು. ಸಾಂಸ್ಕೃತಿಕ ಕಾರ್ಯಕ್ರಮದ ಸ್ಥಳದಲ್ಲಿ ವಿದ್ಯುಚ್ಚಕ್ತಿ ಅಳವಡಿಸುವ ಬಗ್ಗೆ ಚೆಸ್ಕಾಂನಿಂದ ಅನುಮತಿ ಪಡೆದಿರಬೇಕು ಹಾಗೂ ಯಾವುದೇ ಕಾರಣಕ್ಕೂ ಅನಧಿಕೃತವಾಗಿ ನೇರವಾಗಿ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕ ಪಡೆಯಬಾರದು.

ಯುಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆಗಳು ನಡೆಯುವ ಬಗ್ಗೆ ಮುಂಚಿತವಾಗಿ ಪ್ರಾಯೋಜಕರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಕಾರ್ಯಕ್ರಮಗಳು ನಡೆಯುವ ಸ್ಥಳ ಮತ್ತು ಮೆರವಣಿಗೆ ಮಾರ್ಗದಲ್ಲಿ ರಕ್ಷಣೆಗಾಗಿ ಪ್ರಾಯೋಜಕರು, ವ್ಯವಸ್ಥಾಪಕರು ತಮ್ಮ ಸಂಘದ ಜನರನ್ನು ನೇಮಿಸಿ ಸೂಕ್ತ ಉಸ್ತುವಾರಿಯನ್ನು ನೋಡಿಕೊಳ್ಳುವುದಲ್ಲದೆ, ಸೂಕ್ತ ಮುನ್ನೆಚ್ಚರಿಕೆ ವಹಿಸಿ, ಯಾವುದೇ ಬೆಂಕಿ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳುವುದು ವ್ಯವಸ್ಥಾಪಕರ ಜವಾಬ್ದಾರಿಯಾಗಿರುತ್ತದೆ. ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಹತ್ತಿರದ ಪೊಲೀಸ್ ಠಾಣೆಯೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳುವುದು ಅವಶ್ಯವಾಗಿದೆ.

ಮೆರವಣಿಗೆಗಳು ಪ್ರಾರ್ಥನಾ ಸ್ಥಳ, ಚರ್ಚ್, ಮಸೀದಿಗಳ ಬಳಿ ಬಂದಾಗ ಇನ್ನೊಂದು ಧರ್ಮೀಯರಿಗೆ ನೋವುಂಟು ಮಾಡುವ ಘೋಷಣೆಗಳನ್ನು ಕೂಗಬಾರದು ಮತ್ತು ಕೃತ್ಯಗಳನ್ನು ಎಸಗಬಾರದು. ಯಾವುದೇ ಅಪರಿಚಿತ ವ್ಯಕ್ತಿ, ಸಂಶಯಾಸ್ಪದ ವಸ್ತುಗಳು ಕಂಡ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗಾಗಲಿ, ಸ್ಥಳೀಯ ಪೊಲೀಸ್ ಠಾಣೆಗಾಗಲಿ, ಸ್ಥಳದಲ್ಲಿರುವ ಪೊಲೀಸರಿಗಾಗಲಿ ಅಥವಾ ಗರುಡ, ಪಿಸಿಆರ್, ಕೋಬ್ರಾ ವಾಹನಗಳಿಗಾಗಲಿ ತಿಳಿಸಬೇಕು.

ಇದನ್ನು ಉಲ್ಲಂಘಿಸಿರುವುದು ಹಾಗೂ ವಿಶೇಷಗಳು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣಿಗಳಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಸಂಖ್ಯೆ. 100, 2418139, 2418339 ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

See also  ಮನೆಯ ಮಾಲೀಕನನ್ನೇ ಹತ್ಯೆ ಮಾಡಿದ ದುಷ್ಕರ್ಮಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು