News Kannada
Sunday, September 25 2022

ಮೈಸೂರು

ಬಂಡೀಪುರದ ದುಬಾರಿ ಕ್ಯಾಂಟೀನ್ ಗೆ ಬಿತ್ತು ಬೀಗ! - 1 min read

Photo Credit :

ಬಂಡೀಪುರದ ದುಬಾರಿ ಕ್ಯಾಂಟೀನ್ ಗೆ ಬಿತ್ತು ಬೀಗ!

ಗುಂಡ್ಲುಪೇಟೆ: ದುಬಾರಿ ಬೆಲೆ ಮತ್ತು ಕಳಪೆ ಗುಣಮಟ್ಟದ ಪದಾರ್ಥಗಳನ್ನು ವಿತರಿಸಲಾಗುತ್ತಿದ್ದ ಬಂಡೀಪುರದಲ್ಲಿದ್ದ ಕ್ಯಾಂಟೀನ್ ಗೆ ಶಾಶ್ವತವಾಗಿ ಬೀಗ ಬಿದ್ದಿದೆ.

ಕಳಪೆ ಗುಣಮಟ್ಟದ ಮತ್ತು ಶುಚಿ, ರುಚಿಯಿಲ್ಲದ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಸುತ್ತಿದ್ದ ನಿಸರ್ಗ ಕ್ಯಾಂಟೀನ್ ನ್ನು ಕೂಡಲೇ ಮುಚ್ಚುವಂತೆ ಅರಣ್ಯ ಇಲಾಖೆ ನೋಟಿಸ್ ನೀಡಿರುವುದು ಬೆಳಕಿಗೆ ಬಂದಿದೆ.

2016ರಲ್ಲಿ ಕ್ಯಾಂಪಸ್ ನಲ್ಲಿ ಕ್ಯಾಂಟೀನ್ ನಡೆಸುವ ಗುತ್ತಿಗೆ ಪಡೆದ ವ್ಯಕ್ತಿಯು ಕಳಪೆ ಗುಣಮಟ್ಟದ ಊಟ, ತಿಂಡಿ ವಿತರಿಸುತ್ತಾ ಶೋಷಿಸುತ್ತಿರುವುದಾಗಿ ಪ್ರವಾಸಿಗರು ದೂರು ನೀಡಿದ್ದರು. ಅಲ್ಲದೆ, ಇಲಾಖೆಯ ಗಮನಕ್ಕೆ ತರದೆ ಕ್ಯಾಂಟಿನ್ ಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದಲ್ಲದೆ, ಅನುಮತಿಯಿಲ್ಲದೆ ತಂಪು ಪಾನೀಯ, ತಿಂಡಿ ತಿನಿಸು ಮಾರಾಟ, ಜನರೇಟರ್ ಬಳಕೆ ಮಾಡುತ್ತಿರುವ ಬಗ್ಗೆಯೂ ದೂರುಗಳು ಕೇಳಿಬಂದಿದ್ದವು.

ಈ ಕುರಿತಂತೆ ಅರಣ್ಯ ಇಲಾಖೆಯು ಗುತ್ತಿಗೆದಾರನಿಗೆ ಕಾರಣ ಕೇಳಿ ನೋಟಿಸ್ ನೀಡಿ ನಿಯಮಮೀರಿ ವರ್ತಿಸಿದರೆ ಕ್ಯಾಂಟೀನ್ ತೆರವುಗೊಳಿಸುವ ಎಚ್ಚರಿಕೆ ನೀಡಿತ್ತು. ಈ ನೋಟಿಸ್ ವಿರುದ್ದ ಗುತ್ತಿಗೆದಾರನು ಪಟ್ಟಣದ ನ್ಯಾಯಾಲಯದ ಮೊರೆಹೋಗಿದ್ದು, ವಿಚಾರಣೆ ನಂತರ ಅರಣ್ಯ ಇಲಾಖೆಯ ಪರವಾಗಿ ತೀರ್ಪು ಬಂದಿದ್ದು, ಕ್ಯಾಂಟೀನ್ ಮುಚ್ಚಲು ಆದೇಶ ನೀಡಲಾಗಿದೆ. ಮಾ.31ರ ಸಂಜೆ 6 ಗಂಟೆಯೊಳಗೆ ಎಲ್ಲ ಸರಕು ಸಾಮಗ್ರಿಗಳನ್ನು ತೆರವುಗೊಳಿಸಿ ಆರ್ ಎಫ್ಓ ಅವರಿಗೆ ವರದಿ ಮಾಡುವಂತೆ ಸೂಚನೆ ನೀಡಲಾಗಿದೆ.

ಈ ಕ್ಯಾಂಟೀನ್ ನಲ್ಲಿ ಊಟವೊಂದಕ್ಕೆ 100 ರೂಪಾಯಿ, ಕಾಫಿಗೆ 20 ರೂಪಾಯಿ, ಪಾನಿಪೂರಿ, ಬಜ್ಜಿ, ಮುಂತಾದ ಲಘು ತಿನಿಸುಗಳಿಗೆ 50 ರೂಪಾಯಿಯನ್ನು ವಸೂಲಿ ಮಾಡುತ್ತಾ ಪ್ರವಾಸಿಗರನ್ನು ಸುಲಿಗೆ ಮಾಡಲಾಗುತ್ತಿತ್ತು. ಇದರಿಂದ ದೂರದಿಂದ ಬಂದ ಪ್ರವಾಸಿಗರು ಹಿಡಿಶಾಪ ಹಾಕಿಕೊಂಡು ಹೋಗುವಂತಾಗಿತ್ತು.

See also  ಸಂಬಳವಿಲ್ಲದೆ ಆತ್ಮಹತ್ಯೆಗೆ 300 ಅಡಿ ಚಿಮಣಿ ಏರಿದ ಫಾಲ್ಕಾನ್ ನೌಕರ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು