News Kannada
Sunday, October 02 2022

ಮೈಸೂರು

ಭಕ್ತ ಸಾಗರದ ನಡುವೆ ಜರುಗಿದ ಮಹಾರಥೋತ್ಸವ - 1 min read

Photo Credit :

ಭಕ್ತ ಸಾಗರದ ನಡುವೆ ಜರುಗಿದ ಮಹಾರಥೋತ್ಸವ

ಕೆ.ಆರ್.ಪೇಟೆ: ತಾಲೂಕಿನ ಅಗ್ರಹಾರಬಾಚಹಳ್ಳಿ ಗ್ರಾಮದೇವತೆ ಶ್ರೀ ಲಕ್ಷ್ಮಿದೇವಿ(ಬಾಚಳ್ಳಮ್ಮ) ಅಮ್ಮನವರ ಮಹಾರಥೋತ್ಸವು ಶನಿವಾರ ವಿಜೃಂಭಣೆಯಿಂದ ನಡೆಯಿತು.

ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಲಕ್ಷ್ಮೀದೇವಿಗೆ ಉಘೇ.. ಉಘೇ… ಬಾಚಳಮ್ಮನಿಗೆ ಉಘೇ…ಉಘೇ… ಎನ್ನುವ ಜಯಘೋಷಗಳೊಂದಿಗೆ ರಥವನ್ನು ಎಳೆದರಲ್ಲದೆ ರಥಕ್ಕೆ ಹಣ್ಣು ಜವನ ಎಸೆದು ತಮ್ಮ ಭಕ್ತಭಾವ ಸಮರ್ಪಿಸಿದರು.

ಮಧ್ಯಾಹ್ನ 3ಗಂಟೆಗೆ ಆರಂಭವಾದ ರಥೋತ್ಸವ ದೇವಾಲಯದ ಆವರಣದಿಂದ ಆರಂಭವಾಗಿ ಸುಮಾರು 1 ಗಂಟೆಗಳ ಕಾಲ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ, ಬ್ರಾಹ್ಮಣರ ಬೀದಿ ಮೂಲಕ ರಂಗಸ್ಥಳವನ್ನು ತಲುಪಿತು. ದೇವಿಯ ಮಹಾರಥೋತ್ಸವವು ಕಡಿದಾದ ಗದ್ದೆ ಬದುವಿನಂತಿರುವ ಏರಿಳಿತದ ಕ್ಲಿಷ್ಟಕರ ದಾರಿಯಲ್ಲಿ ಯಾವುದೇ ವಿಘ್ನವಿಲ್ಲದಂತೆ ನಡೆದಿದ್ದು, ನೆರೆದಿದ್ದ ಭಕ್ತರು ನಿಟ್ಟುಸಿರು ಬಿಡುವಂತೆ ಮಾಡಿತು.

ತಾಲೂಕಿನ ಮಡುವಿನಕೋಡಿ, ಹರಿರಾಯನಹಳ್ಳಿ, ಚಿಕ್ಕೋಸಹಳ್ಳಿ, ಕೆ.ಆರ್.ನಗರದ ದೇವಿತಂದ್ರಿ, ಚನ್ನರಾಯಪಟ್ಟಣದ ದಡಿಘಟ್ಟ, ನಾಗರಘಟ್ಟ, ಬೇಲದಕೆರೆ, ದೂರದ ಪಿರಿಯಾಪಟ್ಟಣ, ಮೈಸೂರು, ಬೆಂಗಳೂರು ಮುಂತಾದ ಕಡೆಗಳಿಂದ ಸಾವಿರಾರು ಭಕ್ತಾಧಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು. ರಥೋತ್ಸವದ ಅಂಗವಾಗಿ ರಂಗಕುಣಿತ, ಪಲ್ಲಕ್ಕಿ ಉತ್ಸವ, ಸಿಡಿ, ಬಾಯಿಬೀಗ, ಕೊಂಡೋತ್ಸವ, ಮಡೆ ಉತ್ಸವ, ಕನ್ನಂಕಾಡಿ ಉತ್ಸವಗಳು, ಕಳಸೋತ್ಸವ ಮತ್ತಿತರರ ಧಾರ್ಮಿಕ ಉತ್ಸವಗಳು ನಡೆದಿದ್ದು ವಿಶೇಷವಾಗಿತ್ತು.

See also  ಅ.2ರಂದು ದಸರಾ ಗಜಪಡೆಗೆ ಸುಸ್ವಾಗತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು