News Kannada
Friday, December 02 2022

ಮೈಸೂರು

ದೇವರ ಹುಂಡಿಗೆ ಕನ್ನ ಹಾಕಿ ಹಣ, ಚಿನ್ನಾಭರಣ ಲೂಟಿ

Photo Credit :

ದೇವರ ಹುಂಡಿಗೆ ಕನ್ನ ಹಾಕಿ ಹಣ, ಚಿನ್ನಾಭರಣ ಲೂಟಿ

ಕೆ.ಆರ್.ಪೇಟೆ: ಜಾತ್ರೆಯಲ್ಲಿ ಸಂಗ್ರಹವಾಗಿದ್ದ ಹುಂಡಿ ಹಣ ಹಾಗೂ ಹರಕೆಯಾಗಿ ಬಂದಿದ್ದ ದೇವರ ಚಿನ್ನ ಮತ್ತು ಬೆಳ್ಳಿಯ ಆಭರಣವನ್ನು ಕಳ್ಳರು ಹೊತ್ತೊಯ್ದಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಗ್ರಾಮದ ಶ್ರೀ ಪಟ್ಟಲದಮ್ಮ ದೇವಸ್ಥಾನದಲ್ಲಿ ನಡೆದಿದೆ.

ಈ ದೇವಾಲಯದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಜಾತ್ರೆ ನಡೆದಿತ್ತು. ಹೀಗಾಗಿ ಹುಂಡಿಯಲ್ಲಿ ಹರಕೆಯಾಗಿ ಬಳಸಿ ಒಳ್ಳನುಗ್ಗಿ ದೇವರ ಹುಂಡಿಯನ್ನು ಒಡೆದು ಹಣವನ್ನು ಅಲ್ಲದೆ ದೇವರ ವಿಗ್ರಹದ ಮೇಲಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಹೊತ್ತೊಯ್ದಿದ್ದಾರೆ.

ಎಂದಿನಂತೆ ದೇವಾಲಯಕ್ಕೆ ಪೂಜೆ ಮಾಡಲು ತೆರಳಿದ ಅರ್ಚಕ ಶ್ರೀಪತಿ ಅವರಿಗೆ ಕಳ್ಳರು ದೇವಾಲಯಕ್ಕೆ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ಕಳ್ಳರು ಹೊರ ಬಾಗಿಲ ಬೀಗವನ್ನು ನಕಲಿ ಕೀನಿಂದ ತೆಗೆದು ಒಳ ಪ್ರವೇಶ ಮಾಡಿ ನಂತರ ಒಳ ಬಾಗಿಲುಗಳ ಬೀಗವನ್ನು ತೆಗೆದು ದೇವಾಲಯದ ಮಧ್ಯಭಾಗಕ್ಕೆ ಹೋಗಿ ಅಲ್ಲಿದ್ದ ಹುಂಡಿಯನ್ನು ಮಚ್ಚಿನಿಂದ ಒಡೆದು ಹಣವನ್ನು ದೋಚಿರುವುದಲ್ಲದೆ ಗರ್ಭಗುಡಿಯಲ್ಲಿದ್ದ ದೇವರ ವಿಗ್ರಹದ ಮೇಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ವಿವಿಧ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ಸಬ್ಇನ್ಸ್ ಪೆಕ್ಟರ್ ವೆಂಕಟೇಶ್ ಅವರು ಸ್ಥಳ ಪರಿಶೀಲನೆ ನಡೆಸಿ ದೇವಾಲಯದೊಳಗಿದ್ದ ಬೀಗವನ್ನು ಒಡೆಯಲು ತಂದಿದ್ದ ಮಚ್ಚು ಮತ್ತು ಲಾಂಗುಗಳನ್ನು ವಶಕ್ಕೆ ಪಡೆದುಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

See also  ಪಡಿತರದಾರರಿಗೆ ಕಳಪೆ ರಾಗಿ: ದಂಗಾದ್ರು ಶಾಸಕರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು