News Kannada
Friday, December 09 2022

ಮೈಸೂರು

ಹೊರಗಿನಿಂದ ಬಂದವರಿಗೆ ಮಣೆ ಹಾಕಬೇಡಿ: ಯತೀಂದ್ರ

Photo Credit :

ಹೊರಗಿನಿಂದ ಬಂದವರಿಗೆ ಮಣೆ ಹಾಕಬೇಡಿ: ಯತೀಂದ್ರ

ಮೈಸೂರು: ಶಿವಮೊಗ್ಗದಿಂದ ಬಂದವರಿಗೆ ಮಣೆಹಾಕಬೇಡಿ. ಚುನಾವಣೆ ನಂತರ ನಿಮ್ಮ ಕೈಗೆ ಅವರು ಸಿಗುವುದಿಲ್ಲ, ನಾನು ಸಿದ್ದರಾಮನ ಹುಂಡಿಯವನು ನಿಮ್ಮ ಕಷ್ಟ ಸುಖಗಳಿಗೆ ಸ್ಪಂದಿಸುತ್ತೇನೆ. ನನ್ನನ್ನು ಆಶೀರ್ವದಿಸಿ ಗೆಲ್ಲಿಸಬೇಕೆಂದು ವರುಣಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದರು.

ವರುಣಾ ಕ್ಷೇತ್ರದ ವರಕೋಡು, ಮೂಡಲಹುಂಡಿ, ಬಡಗಲಹುಂಡಿ, ಕೆಂಪೇಗೌಡನಹುಂಡಿ, ಹೊಸಹುಂಡಿಗಳಲ್ಲಿ ಪಾದಯಾತ್ರೆ ನಡೆಸಿ, ಮತ ಯಾಚಿಸುವ ಸಂದರ್ಭದಲ್ಲಿ ಗ್ರಾಮಸ್ಥರು ಆರತಿ ಬೆಳಗಿ, ಮೈಸೂರು ಪೇಟ ತೊಡಿಸಿ, ಹಾರಹಾಕಿ ಮಂಗಳವಾದ್ಯಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದರು.
ನಂತರ ಮಾತನಾಡಿದ ಅವರು ಬಿಜೆಪಿ ಪಕ್ಷ ಶ್ರೀಮಂತರ ಪರವಿರುವ ಪಕ್ಷ. ಕಾಂಗ್ರೆಸ್ ಪಕ್ಷ ಎಲ್ಲ ವರ್ಗದವರನ್ನು ಸಮನಾಗಿ ಕಾಣುವ ಪಕ್ಷವಾಗಿದೆ. ಈ ಕ್ಷೇತ್ರದ ಸಂಪರ್ಕವೇ ಇಲ್ಲದವರು, ಸಮಸ್ಯೆಗಳ ಅರಿವಿಲ್ಲದವರು 30 ದಿನದಲ್ಲಿ ಆಕಾಶವನ್ನೇ ಭೂಮಿಗಿಳಿಸುತ್ತೇವೆ ಎಂದು ಬರುತ್ತಾರೆ ಅವರನ್ನು ನಂಬಬೇಡಿ.

ಕಾಂಗ್ರೆಸ್ ಪಕ್ಷ ಬಡವರ ಪರ ಅಭಿವೃದ್ಧಿಯ ಪರ ಇರುವ ಪಕ್ಷವಾಗಿದ್ದು ಕಳೆದ 5 ವರ್ಷಗಳಲ್ಲಿ 17 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿ ಅಭಿವೃದ್ಧಿ ಪಡಿಸಲಾಗಿದೆ. ಪ್ರತಿ ಗ್ರಾಮಕ್ಕೂ ಮೂಲಭೂತ ಸೌಲಭ್ಯ ಒದಗಿಸಲು ಪ್ರಮಾಣ ಪ್ರಯತ್ನ ಮಾಡಿದ್ದೇವೆ. ಬಿಜೆಪಿ ಸರ್ಕಾರ 5 ವರ್ಷದಲ್ಲಿ 3 ಮುಖ್ಯಮಂತ್ರಿಗಳನ್ನು ಮಾಡಿ ಯಾವುದೇ ಅಭಿವೃದ್ಧಿಯನ್ನು ಮಾಡಲಿಲ್ಲ. ದೇವರಾಜ ಅರಸು ನಂತರ 5 ವರ್ಷ ಅಧಿಕಾರ ಪೂರೈಸಿದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ಥಿರ ಮತ್ತು ಸುಭದ್ರ ಸರ್ಕಾರ ನೀಡುವ ಮೂಲಕ ರಾಜ್ಯದ ಜನರಿಗೆ ಹತ್ತಾರು ಭಾಗ್ಯಗಳನ್ನು ನೀಡಿ ರಾಜ್ಯವನ್ನು ದೇಶದಲ್ಲಿಯೇ ಮಾದರಿ ರಾಜ್ಯ ಮಾಡಿದ್ದಾರೆ. ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ಮುಂದುವರಿಯಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಈ ಹಿಂದೆ ನಮ್ಮ ತಂದೆಯನ್ನು ಬೆಂಬಲಿಸಿದಂತೆ ನನಗೂ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಪಾದಯಾತ್ರೆಯಲ್ಲಿ ಜಿ.ಪಂ. ಸದಸ್ಯೆ ಕೆ.ವೈ.ಭಾಗ್ಯ, ಎಪಿಎಂಸಿ ಸದಸ್ಯ ಬಸವರಾಜು, ತಾ.ಪಂ. ಸದಸ್ಯ ಮುದ್ದುರಾಮೇಗೌಡ, ಮಾಜಿ ಸದಸ್ಯ ಎಂ.ಟಿ. ರವಿಕುಮಾರ್, ಗ್ರಾ.ಪಂ. ಅಧ್ಯಕ್ಷೆ ಭವಾನಿ ರವಿ, ಮರಳೂರು ಮಹೇಶ, ನಗರಪಾಲಿಕೆ ಸದಸ್ಯ ಚೌಹಳ್ಳಿ ಪುಟ್ಟಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ಮುಖಂಡರಾದ ಕುಪ್ಪೇಗಾಲ ಸತೀಶ, ದೊಡ್ಡೇಗೌಡ, ನಾಡನಹಳ್ಳಿ ರವಿ, ಗಂಗನ ತಿಮ್ಮಯ್ಯ ಹಾಜರಿದ್ದರು.

See also  ಕೃಷಿ ಜೀವನ ಕ್ರಮವೇ ಹೊರತು ಉದ್ಯಮವಲ್ಲ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು