News Kannada
Monday, December 05 2022

ಮೈಸೂರು

ಸಿದ್ದರಾಮಯ್ಯನವ್ರೇ ರೈತನಿಗೆ ಕೊಟ್ಟ ಕೊಡುಗೆಯೇನು: ಹೆಚ್. ವಿಶ್ವನಾಥ್

Photo Credit :

ಸಿದ್ದರಾಮಯ್ಯನವ್ರೇ ರೈತನಿಗೆ ಕೊಟ್ಟ ಕೊಡುಗೆಯೇನು: ಹೆಚ್. ವಿಶ್ವನಾಥ್

ಮಳವಳ್ಳಿ: ಹಗಲಿರುಳು ಜಮೀನಿನಲ್ಲಿ ದುಡಿದು ಬೆವರು ಸುರಿಸಿ ಅದನ್ನೇ ಅನ್ನವಾಗಿಸುವ ರೈತನಿಗೆ ನೀವು ಕೊಟ್ಟ ಕೊಡುಗೆಯೇನು ಸಿದ್ಧರಾಮಯ್ಯನವ್ರೇ, ರಾಜ್ಯದಲ್ಲಿ ನಾಲ್ಕು ಸಾವಿರ ರೈತರ ಆತ್ಮಹತ್ಯೆಯೇ? ಎಂದು ಜೆಡಿಎಸ್ ಮುಖಂಡ ಹೆಚ್. ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಹಲಗೂರಿನಲ್ಲಿ ಮಳವಳ್ಳಿ ಕ್ಷೇತ್ರದ ಜೆ.ಡಿ.ಎಸ್ ಅಭ್ಯರ್ಥಿ ಡಾ.ಕೆ. ಅನ್ನಧಾನಿಯವರ ಪರ ಚುನಾವಣಾ ಪ್ರಚಾರ ನಡೆಸಿ, ಮತದಾರರಲ್ಲಿ ಮತಯಾಚಿಸಿ ಮಾತನಾಡುತ್ತಾ, ಯಡಿಯೂರಪ್ಪ ಅಧಿಕಾರಕ್ಕೆ ಬಂದರೆ 24 ಗಂಟೆಯಲ್ಲಿ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದರೆ, ಸಿದ್ಧರಾಮಯ್ಯನವರು ಯಡಿಯೂರಪ್ಪ ನೀನು ಈಗಾಗಲೇ ಜೈಲಿಗೆ ಹೋಗಿ ಬಂದಿದ್ದೀಯಾ ಎಂದು ಹಾಲಿ ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಒಬ್ಬರಿಗೊಬ್ಬರು ದೋಷಾರೋಪಣೆಯಲ್ಲಿ ತೊಡಗಿದ್ದಾರೆ.

ನಮ್ಮ ಕುಮಾರಣ್ಣ ನಾನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಜ್ಯದಲ್ಲಿ ರೈತರು ಮತ್ತು ಸ್ವ-ಸಹಾಯ ಸಂಘಗಳ ಮಹಿಳೆಯರು, ಮೀನುಗಾರರು ಮಾಡಿರುವ 58,000 ಕೋಟಿ ಸಾಲವನ್ನು ಪೂರ್ತಿ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.

ದೇಶವನ್ನಾಳುವ ಶಕ್ತಿ, ಬುದ್ಧಿವಂತಿಕೆ ರಾಹುಲ್ ಗಾಂಧಿಗಿಲ್ಲ, ಮಕ್ಕಳಂತೆ ಮೊಬೈಲಲ್ಲಿ ಗೇಮ್ ಆಡುತ್ತಾ ಕಾಲ ಕಳೆಯುವ ವ್ಯಕ್ತಿಗೆ ಭಾಷಣ ಬರೆದುಕೊಟ್ಟು ಓದಿಸುತ್ತೀರಿ ಇದು ಸರಿಯೇ? ಜನತಾ ದಳ ಎಂದರೆ ಸಂಘದ ಪರಿವಾರ ಎಂದು ಹೇಳಿಸಿದ್ದಾರೆ. ನಮ್ಮ ಪಕ್ಷ ಜಾತ್ಯತೀತ ಪಕ್ಷ, ನೀವು ಕೆಲವು ಯೋಜನೆಗಳಾದ ಅನ್ನಭಾಗ್ಯ, ಕ್ಷೀರ ಭಾಗ್ಯ ನೀಡಿದ್ದೀರಿ ಸಂತೋಷ. ಆದರೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು ದುಡಿಯುವ ಜನತೆ ಅವರಿಗಾಗಿ ಯಾವ ಶಾಶ್ವತ ಭಾಗ್ಯ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದ ಅವರು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಕ್ಷಾತೀತವಾದ ಜಾತ್ಯತೀತವಾದ ಕಾರ್ಯಕ್ರಮಗಳನ್ನು ಮಾಡುವ ಗುರಿಯಿದೆ. ಅದಕ್ಕೆ ಸಹಕರಿಸಿ. ಈ ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಡಾ.ಕೆ. ಅನ್ನಧಾನಿ ಮಾತನಾಡಿ, ಕಳೆದ ಎರಡು ಬಾರಿ ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರ ಕೊಟ್ಟಿದ್ದೀರಿ. ಈ ಬಾರಿ ನನ್ನನ್ನು ಗೆಲ್ಲಿಸಿ, ನಿಮ್ಮ ಸೇವೆ ಮಾಡಲು ಅವಕಾಶ ನೀಡಿ ಎಂದು ಮತ ಯಾಚಿಸಿದರು.

See also  ಮಸಾಜ್ ನೆಪದಲ್ಲಿ ಗ್ರಾಹಕರ ಚಿನ್ನಾಭರಣ ಲೂಟಿ: ಕೇರಳ ಮೂಲದ ವ್ಯಕ್ತಿ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು