News Kannada
Sunday, November 27 2022

ಮೈಸೂರು

ಜೆಡಿಎಸ್ ಮತ್ತು ಬಿಜೆಪಿ ದಲಿತ ವಿರೋಧಿಗಳು: ಸಿಎಂ ಸಿದ್ಧರಾಮಯ್ಯ - 1 min read

Photo Credit :

ಜೆಡಿಎಸ್ ಮತ್ತು ಬಿಜೆಪಿ ದಲಿತ ವಿರೋಧಿಗಳು: ಸಿಎಂ ಸಿದ್ಧರಾಮಯ್ಯ

ಮೈಸೂರು: ದಲಿತ ವಿರೋಧಿ ನಾನಲ್ಲ ಹಾಗಂತ ಹೇಳುವ ಬಿಜೆಪಿ, ಜೆಡಿಎಸ್ ಪಕ್ಷದವರೇ ದಲಿತ ವಿರೋಧಿಗಳು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹರಿ ಹಾಯ್ದಿದ್ದಾರೆ.

ವರುಣಾ ಕ್ಷೇತ್ರಕ್ಕೆ ಸೇರುವ ಪಟ್ಟೆಹುಂಡಿ, ಮಾದೇಗೌಡನ ಹುಂಡಿ, ಹಿಟ್ಟನಹಳ್ಳಿ, ಹನುಮನ ಹಳ್ಳಿ, ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ತಮ್ಮ ಪುತ್ರ ವರುಣಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ. ಎಸ್.ಯತೀಂದ್ರ ಸಿದ್ಧರಾಮಯ್ಯರವರ ಪರ ರೋಡ್ ಷೋ ಮೂಲಕ ಮತಯಾಚಿಸಿ ಮಾತನಾಡಿದರು.

ನಾನು ದಲಿತ ವಿರೋಧಿಯಾಗಿದ್ದರೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಡಾ.ಬಿ.ಆರ್.ಅಂಬೇಡ್ಕರ್ ನಿಗಮ, ಹಾಗೂ ದೇವರಾಜ ಅರಸು ನಿಗಮದಿಂದ ಪಡೆದಂತಹ ಸಾಲವನ್ನು ಮನ್ನಾ ಮಾಡುತ್ತಿರಲಿಲ್ಲ, ಆದರೆ ತಲೆ ತಲಾಂತರದಿಂದ ತುಳಿತಕ್ಕೊಳಗಾಗಿರುವ ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತ ಸಮಾಜದವರು ರಾಜಕೀಯವಾಗಿ, ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ಬರಬೇಕೆಂಬ ಉದ್ದೇಶದಿಂದ ಅವರ ಅಭಿವೃದ್ದಿಗೆ ಶ್ರಮಿಸುತ್ತಿದ್ದೇವೆ.

ಆದರೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದವರು ನನ್ನನ್ನು ದಲಿತ ವಿರೋಧಿ ಎಂದು ಹೋದ ಕಡೆಯಲ್ಲೆಲ್ಲಾ ಅಪಪ್ರಚಾರ ಮಾಡುತ್ತಾ ಜನರನ್ನು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಅಂತಹವರಿಗೆ ರಾಜ್ಯದ ಜನತೆಯೇ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಕೊಡುವ ಮೂಲಕ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

See also  ವಾಹನ ಹರಿದು ಅಪರಿಚಿತ ವ್ಯಕ್ತಿ ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು