News Kannada
Saturday, December 03 2022

ಮೈಸೂರು

ಸಂವಿಧಾನದ ಬದಲಿಸಲು ಕೈ ಹಾಕಿದರೆ ರಕ್ತಕ್ರಾಂತಿ: ಸಿದ್ದರಾಮಯ್ಯ

Photo Credit :

ಸಂವಿಧಾನದ ಬದಲಿಸಲು ಕೈ ಹಾಕಿದರೆ ರಕ್ತಕ್ರಾಂತಿ: ಸಿದ್ದರಾಮಯ್ಯ

ನಂಜನಗೂಡು: ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಪ್ರಪಂಚದಲ್ಲಿಯೇ ಶ್ರೇಷ್ಠವಾದ ಸಂವಿಧಾನವಾಗಿದ್ದು, ಸಂವಿಧಾನ ಬದಲಿಸಲು ಕೈ ಹಾಕಿದರೆ ದೇಶದಲ್ಲಿ ರಕ್ತ ಕ್ರಾಂತಿಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ವರುಣಾ ಕ್ಷೇತ್ರದ ಹೊಸಹೋಟೆ, ಆಲತ್ತೂರು, ಹದಿನಾರು, ಹದಿನಾರು ಮೊಳೆ, ಕೆಂಪಿಸಿದ್ದನಹುಂಡಿ, ತಾಂಡವಪುರ, ಹಳ್ಳಿದಿಡ್ಡಿ, ಗೊದ್ದನಪುರ, ರಾಂಪುರಗಳಲ್ಲಿ ನಡೆದ ಚುನಾವಣಾ ಪ್ರಚಾರದ ರೋಡ್ ಶೋ, ಪಾದಯಾತ್ರೆ ನಡೆಸಿ ಮಾತನಾಡಿದ ಅವರು, ಈ ಚುನಾವಣೆ ಕೋಮುವಾದಿ ಪಕ್ಷ ಮತ್ತು ಬಡವರ ಪಕ್ಷ ಕಾಂಗ್ರೆಸ್ ನಡುವೆ ನಡೆಯುತ್ತಿರುವ ಚುನಾವಣೆಯಾಗಿದ್ದು, 5 ವರ್ಷ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ, ಹಗರಣ, ಲೂಟಿ ಮಾಡಿ ಜೈಲಿಗೆ ಹೋದವರು ಮತ್ತೆ ಅಧಿಕಾರಕ್ಕೆ ಬರಬಾರದು ಸಂವಿಧಾನ ಬದಲಿಸಲು ಹುನ್ನಾರ ನಡೆಸುವವರಿಗೆ ತಕ್ಕಪಾಠ ಕಲಿಸಬೇಕು ಎಂದು ಕರೆ ನೀಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರ ಮತ್ತು ವರುಣಾ ಕ್ಷೇತ್ರ ನನಗೆ ರಾಜಕೀಯ ಶಕ್ತಿ ಕೊಟ್ಟಂತಹ ಕ್ಷೇತ್ರಗಳಾಗಿದ್ದು, ಈ ಎರಡು ಕ್ಷೇತ್ರಗಳನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರ ಮಾಡುವುದು ನನ್ನ ಉದ್ದೇಶವಾಗಿದೆ. ಕಳೆದ 5 ವರ್ಷಗಳಲ್ಲಿ ಕ್ಷೇತ್ರದಲ್ಲಿ ಮತ್ತು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ಇನ್ನೂ ಮಾಡಬೇಕಾದ ಕೆಲಸಗಳು ಇವೆ. ಬಿಜೆಪಿ ಅಧಿಕಾರದಲ್ಲಿದ್ದಾಗ 5 ವರ್ಷದಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡದವರಿಗೆ ಖರ್ಚು ಮಾಡಿದ ಹಣ 22 ಸಾವಿರ ಕೋಟಿ ಕಾಂಗ್ರೆಸ್ ಸರ್ಕಾರ ಕಳೆದ 5 ವರ್ಷದಲ್ಲಿ ಖರ್ಚು ಮಾಡಿದ ಹಣ 89 ಸಾವಿರ ಕೋಟಿ ರೂಪಾಯಿ ಆದ್ದರಿಂದಲೇ ರಾಜ್ಯಾದಾದ್ಯಂತ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದವರ ರಸ್ತೆಗಳು ಕಾಂಕ್ರಿಟ್ ರಸ್ತೆಗಳಾಗಿವೆ. ಆರ್ಥಿಕವಾಗಿ ಸಬಲರಾಗಲು ಗುತ್ತಿಗೆಯಲ್ಲಿ ಒಂದು ಕೋಟಿವರೆಗೆ ಮೀಸಲಾತಿ ಕೊಟ್ಟಿದ್ದೇವೆ. ಹಸಿವು ಮುಕ್ತ, ಗುಡಿಸಲು ಮುಕ್ತ, ಬಯಲು ಶೌಚಮುಕ್ತ, ಶುದ್ಧನೀರು, ಕೆರೆ ತುಂಬಿಸುವ ಯೋಜನೆ, ನೀರಾವರಿ ಯೋಜನೆಗಳು, ಸಾಲಮನ್ನಾ, ಹೆಣ್ಣುಮಕ್ಕಳಿಗೆ ಉಚಿತ ಶಿಕ್ಷಣ, ಶಾಲಾಮಕ್ಕಳಿಗೆ ಉಚಿತ ಬಸ್ ಪಾಸ್ ನೀಡಿದ್ದೇವೆ ಎಂದರು.

ಉಪ್ಪಾರ ಜನಾಂಗದ ಅಭಿವೃದ್ಧಿಗಾಗಿ ಉಪ್ಪಾರ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಭಗೀರಥ ಜಯಂತಿ ಮಾಡಿದ್ದೇವೆ. ಪುಟ್ಟರಂಗಶೆಟ್ಟಿಯವರನ್ನು ಶಾಸಕರನ್ನಾಗಿ ಮಾಡಿದ್ದೇವೆ ಮತ್ತು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಪುಟ್ಟರಂಗಶೆಟ್ಟಿ ಮಂತ್ರಿಯಾಗುವ ಸಾಧ್ಯತೆ ಇದೆ ಎಂದರು.

ಈ ಸಂದರ್ಭದಲ್ಲಿ ಡಾ. ಯತೀಂದ್ರ ಸಿದ್ದರಾಮಯ್ಯ, ಎಸ್.ಸಿ.ಬಸವರಾಜು, ಬಿ.ಎಂ.ರಾಮು, ಹೊಸಕೋಟೆಕುಮಾರ್, ಬಸವಣ್ಣ, ಧರ್ಮೇಂದ್ರರಾಜು, ಗೋವಿಂದರಾಜು, ಮಾಲೇಗೌಡ, ಕುಪ್ಪರವಳ್ಳಿ ಬಸವರಾಜು, ಬುಲೆಟ್ಮಹಾದೇವ, ರಂಗಸ್ವಾಮಿ, ಬಾಬು ಮರಳೂರು ಮಹೇಶ ಹಾಜರಿದ್ದರು.

See also  ನಿವೇಶನಕ್ಕಾಗಿ ವೃದ್ದನನ್ನ ಸಿನಿಮೀಯಾ ರೀತಿಯಲ್ಲಿ ಅಪಹರಣ: ಬಿಜೆಪಿ ಮುಖಂಡನ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು