News Kannada
Tuesday, November 29 2022

ಮೈಸೂರು

ವಿಧಾನಸಭಾ ಚುನಾವಣೆ: ಮಂಡ್ಯ ಜಿಲ್ಲೆಯಲ್ಲಿ 50 ನಾಮಪತ್ರ ಸಲ್ಲಿಕೆ - 1 min read

Photo Credit :

ವಿಧಾನಸಭಾ ಚುನಾವಣೆ: ಮಂಡ್ಯ ಜಿಲ್ಲೆಯಲ್ಲಿ 50 ನಾಮಪತ್ರ ಸಲ್ಲಿಕೆ

ಮಂಡ್ಯ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಬಯಸಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 33 ಅಭ್ಯರ್ಥಿಗಳಿಂದ 50 ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಜನತಾ ದಳದಿಂದ (ಜಾತ್ಯಾತೀತ) ಎಂ.ಶ್ರೀನಿವಾಸ್ ಅವರು 4 ನಾಮಪತ್ರ, ಎಂಇಪಿ ಪಕ್ಷದ ಕಾವೇರಿ ಶ್ರೇಯಾ ಅವರು 3 ನಾಮಪತ್ರ, ಮಂಜುನಾಥ ಎಸ್.ಜೆ. ಅವರು ಪಕ್ಷೇತರ ಅಭ್ಯರ್ಥಿಯಾಗಿ 2 ನಾಮಪತ್ರ, ಡಾ. ಎಸ್.ಸಿ.ಶಂಕರೇಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ 2 ನಾಮಪತ್ರ ಹಾಗೂ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದಿಂದ ಬಿ.ಎಸ್.ಶಿವಕುಮಾರ್ ಅವರು 2 ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಂಸದ ಸಿ.ಎಸ್.ಪುಟ್ಟರಾಜು ಅವರು ಜನತಾ ದಳದಿಂದ ಒಂದು ನಾಮಪತ್ರ, ಅರುಣ್ ಕುಮಾರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ 1, ಸಿ.ಸುಬ್ರಮಣ್ಯ ಅವರು ಪಕ್ಷೇತರ ಅಭ್ಯರ್ಥಿಯಾಗಿ 1, ಮಹೇಶ ಅವರು ಜನಸಾಮಾನ್ಯರ ಪಾರ್ಟಿ(ಕರ್ನಾಟಕ) ಪಕ್ಷದಿಂದ 1, ಬಿ.ಕೆ.ಪುಟ್ಟರಾಜು ಅವರು ಪಕ್ಷೇತರ ಅಭ್ಯರ್ಥಿಯಾಗಿ 1 ಹಾಗೂ ಮಹೇಶ ಅವರು ಎ.ಐ.ಎಂ.ಇ.ಪಿ ಪಕ್ಷದಿಂದ 1 ನಾಮಪತ್ರ ಸಲ್ಲಿಸಿದ್ದಾರೆ.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಾರಾಯಣ ಗೌಡ ಅವರು ಜನತಾ ದಳ ಪಕ್ಷದಿಂದ 1 ನಾಮಪತ್ರ, ಕುಮಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ 1, ಮಂಜುಳ ಅವರು ಪಕ್ಷೇತರ ಅಭ್ಯರ್ಥಿಯಾಗಿ 1 ಹಾಗೂ ಭಾರತೀಯ ಜನತಾ ಪಕ್ಷದಿಂದ ಬಿ.ಸಿ.ಮಂಜು ಅವರು 1 ನಾಮಪತ್ರವನ್ನು ಸಲ್ಲಿಸಿದ್ದಾರೆ.

ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸುರೇಶ್ಗೌಡ ಅವರು ಜನತಾದಳ ಪಕ್ಷದಿಂದ 1 ನಾಮಪತ್ರ, ಡಾ.ಪಾರ್ಥಸಾರಥಿ ವಿ. ಅವರು ಭಾರತೀಯ ಜನತಾ ಪಕ್ಷದಿಂದ 4, ಎನ್.ಎಸ್.ಅಶೋಕ ಅವರು ಪಕ್ಷೇತರ ಅಭ್ಯರ್ಥಿಯಾಗಿ 1, ವಸೀಂ ಉಲ್ಲಾ ಖಾನ್ ಅವರು ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಕ್ಷದಿಂದ 1 ಹಾಗೂ ರುಕ್ಮಿಣಿ ಅವರು ಪಕ್ಷೇತರ ಅಭ್ಯರ್ಥಿಯಾಗಿ 1 ನಾಮಪತ್ರವನ್ನು ಸಲ್ಲಿಸಿದ್ದಾರೆ.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕೆ.ಎಸ್.ನಂಜುಂಡೇಗೌಡ ಅವರು ಭಾರತೀಯ ಜನತಾ ಪಕ್ಷದಿಂದ 2, ಕೆಂಪೇಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ 1, ಸಿ.ಎಸ್.ವೆಂಕಟೇಶ್ ಅವರು ಆಮ್ ಆದ್ಮಿ ಪಾರ್ಟಿಯಿಂದ 1 ನಾಮಪತ್ರ ಸಲ್ಲಿಸಿದ್ದಾರೆ.

ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಜಿ.ಎಂ.ಮಧು ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದಿಂದ 4 ನಾಮಪತ್ರ, ಎಂ.ಪಿ.ಮುನವರ್ ಷರೀಫ್ ಅವರು ಹಿಂದೂಸ್ತಾನ್ ಜನತಾ ಪಾರ್ಟಿಯಿಂದ 1, ಹೀನಾ ಕೌಸರ್ ಅವರು ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಕ್ಷದಿಂದ 1, ಹಾಗೂ ಜಾವೀದ್ ಖಾನ್ ಅವರು ಪಕ್ಷೇತರ ಅಭ್ಯರ್ಥಿಯಾಗಿ 1 ನಾಮಪತ್ರ ಸಲ್ಲಿಸಿದ್ದಾರೆ.

ಮಳವಳ್ಳಿ ವಿಧಾನಸಭಾ ಕ್ಷೇತ್ರದಿಂದ ಎಂ.ಪಿ.ನರೇಂದ್ರಸ್ವಾಮಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ 1 ನಾಮಪತ್ರ, ಡಾ.ಕೆ. ಅನ್ನದಾನಿ ಅವರು ಜನತಾದಳ (ಜಾತ್ಯಾತೀತ) ಪಕ್ಷದಿಂದ 2, ಮಂಟೆಲಿಂಗು ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದಿಂದ 1, ಎಂ.ಎಸ್.ಶಶಿಕುಮಾರ್ ಅವರು ಇಂಡಿಯನ್ ನ್ಯೂ ಕಾಂಗ್ರೇಸ್ ಪಾರ್ಟಿಯಿಂದ 1, ವಿಶ್ವನಾಥ್ ಜಿ.ಎಸ್. ಅವರು ಆಲ್ ಇಂಡಿಯಾ ಮಹಿಳಾ ಎಂಪವರ್ಮೆಂಟ್ ಪಾರ್ಟಿಯಿಂದ 2, ಹಾಗೂ ಟಿ.ಸಿ.ವೆಂಕಟೇಶ್ ಅವರು ರಾಷ್ಟ್ರೀಯ ಮಾನವ ವಿಕಾಸ ಪಾರ್ಟಿಯಿಂದ 1 ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ.

See also  ಚಾಮುಂಡಿ ದೇಗುಲದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ:ವಿಶೇಷ ಪೂಜೆ ಸ್ಥಗಿತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು