News Kannada
Friday, December 02 2022

ಮೈಸೂರು

ಬಿಜೆಪಿ ಪ್ರಣಾಳಿಕೆ 5 ಸ್ಟಾರ್ ಸಂಸ್ಕೃತಿಯಾಗಿದೆ: ರಾಜ್ ಬಬ್ಬರ್

Photo Credit :

ಬಿಜೆಪಿ ಪ್ರಣಾಳಿಕೆ 5 ಸ್ಟಾರ್ ಸಂಸ್ಕೃತಿಯಾಗಿದೆ: ರಾಜ್ ಬಬ್ಬರ್

ಮೈಸೂರು: ಸಿದ್ದರಾಮಯ್ಯ ಸರ್ಕಾರದ ಪ್ರಣಾಳಿಕೆ ಬಡವರ ಪರವಾಗಿದ್ದು, ಬಿಜೆಪಿ ಪಕ್ಷದ ಪ್ರಣಾಳಿಕೆ 5 ಸ್ಟಾರ್ ಹೋಟೆಲ್ ಸಂಸ್ಕೃತಿಯ ಪ್ರಣಾಳಿಕೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಬಾಲಿವುಡ್ ಹಿಡಿಯ ನಟ ರಾಜ್ ಬಬ್ಬರ್ ಮೈಸೂರಿನಲ್ಲಿ ವ್ಯಂಗ್ಯವಾಡಿದ್ದಾರೆ.

ಇಂದು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಪರ ಚುನಾವಣಾ ಪ್ರಚಾರ ನಡೆಸಿದ ಬಾಲಿವುಡ್ ಹಿರಿಯ ನಟ ಹಾಗೂ ರಾಜ್ಯಸಭಾ ಸದಸ್ಯ ರಾಜ್ ಬಬ್ಬರ್ ಮಾಧ್ಯಮಗಳೊಂದಿಗೆ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಕ್ಷೇತ್ರವಲ್ಲ. ಈ ಕ್ಷೇತ್ರ ಅವರ ಕುಟುಂಬ ಇದ್ದ ಹಾಗೆ. ಇಲ್ಲಿಯ ಜನರು ಸಿದ್ದರಾಮಯ್ಯ ಕುಟುಂಬಸ್ಥರು ಇದ್ದ ಹಾಗೆ. ಸಿದ್ದರಾಮಯ್ಯ ಸರ್ಕಾರ ಬಡವರ ಹಾಗೂ ಅಲ್ಪಸಂಖ್ಯಾತರ ಪರವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯೂ ಸಹ ಬಡವರ ಪರವಾಗಿದೆ. ಆದರೆ ಬಿಜೆಪಿ ಪಕ್ಷದ ಪ್ರಣಾಳಿಕೆ 5 ಸ್ಟಾರ್ ಹೋಟೆಲ್ ಸಂಸ್ಕೃತಿಯ ಪ್ರಣಾಳಿಕೆಯಾಗಿದೆ. ಇವರ ಹೇಳಿಕೆಗೂ, ಪ್ರಣಾಳಿಕೆಗೂ ಯಾವುದೇ ಸಾಮ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ ನಟ ರಾಜ್ ಬಬರ್ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲುವು ಖಚಿತ ಎಂದರು.

ಬಿಜೆಪಿ ಪರವಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕರ್ನಾಟಕದಲ್ಲಿ ಸ್ಟಾರ್ ಕ್ಯಾಂಪೇನರ್ ಆಗಿ ಪ್ರಚಾರ ನಡೆಸುತ್ತಿದ್ದು, ಉತ್ತರ ಪ್ರದೇಶದಲ್ಲಿ ಮಳೆ ಬಿರುಗಾಳಿಗೆ ಜನಸಮಾನ್ಯರು ಸಾಯುತ್ತಿದ್ದಾರೆ. ಆದರೂ ಯೋಗಿ ಇಲ್ಲಿಗೆ ಬಂದು ಪ್ರಚಾರ ಮಾಡುತ್ತಾರೆ. ಅವರು ಉಡುಗೆಗೂ ಅವರ ನಡವಳಿಕೆಗೂ ಸಂಬಂಧವಿಲ್ಲ. ಅವರನ್ನು ನೋಡಿ ಯಾರು ಮತ ಹಾಕುವುದಿಲ್ಲ ಎಂದು ವಾಗ್ದಾಳಿ ನಡೆಸಿದ ರಾಜ್ ಬಬ್ಬರ್, ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಟೀಕಿಸಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತಮ್ಮ ತಮ್ಮ ಕಾಲುಗಳನ್ನು ತಾವೇ ಎಳೆದುಕೊಳ್ಳುತ್ತಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಇವರ ಜತೆ ಪ್ರಚಾರಕ್ಕೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ನಟಿ ರಿಷಿಕಾ ಸಿಂಗ್ ಭಾಗವಹಿಸಿದರು.

See also  ಮೃಗಾಲಯದ ಆನೆ ಮರಿಗೆ ಪಾರ್ವತಿ ಎಂದು ಹೆಂಡತಿಯ ಹೆಸರನ್ನ ನಾಮಕರಣ ಮಾಡಿದ ಸಿಎಂ ಸಿದ್ದರಾಮಯ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು