News Kannada
Friday, December 02 2022

ಮೈಸೂರು

ಸಿಎಂ ಮತ್ತು ಪುತ್ರ ಡಾ.ಯತೀಂದ್ರ ಕ್ಷೇತ್ರಗಳಿಗೆ ತಾರಾ ಮೆರಗು

Photo Credit :

ಸಿಎಂ ಮತ್ತು ಪುತ್ರ ಡಾ.ಯತೀಂದ್ರ ಕ್ಷೇತ್ರಗಳಿಗೆ ತಾರಾ ಮೆರಗು

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧಿಸಿರುವ ಚಾಮುಂಡೇಶ್ವರಿ ಕ್ಷೇತ್ರ ಮತ್ತು ಪುತ್ರ ಡಾ.ಯತೀಂದ್ರ ಸ್ಪರ್ಧಿಸಿರುವ ವರುಣಾ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಿಗೆ ತಾರಾ ಮೆರಗು ಬಂದಿದೆ. ಯಶ್, ದರ್ಶನ್, ಸುದೀಪ್, ಜಯಮಾಲಾ, ಹಿಂದಿ ನಟ ಬಬ್ಬರ್ ಸೇರಿದಂತೆ ಕನ್ನಡದ ನಟನಟಿಯರು ಪ್ರಚಾರಕ್ಕಿಳಿದಿದ್ದು, ಅವರನ್ನು ನೋಡಲು ಜನರ ದಂಡು ನೆರೆಯುತ್ತಿದ್ದು, ಚುನಾವಣಾ ಪ್ರಚಾರಕ್ಕೆ ಕಳೆಕಟ್ಟಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು, ಪುತ್ರಿ ಚಿತ್ರನಟಿ ರಿಷೀಕಾ ಸಿಂಗ್ ಮೊದಲಾದವರು ಪ್ರಚಾರಕ್ಕಿಳಿದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಟನಟಿಯರು ಪ್ರಚಾರದಲ್ಲಿ ಪಾಲೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಈ ಬಾರಿಯ ಚುನಾವಣೆಯಲ್ಲಿ ತಮಗೆ ಬೇಕಾದ ನಟರನ್ನು ಕರೆಯಿಸಿ ಅವರ ಮೂಲಕ ಪ್ರಚಾರ ಮಾಡಿಸುವ ಟ್ರೆಂಡ್ ಆರಂಭವಾಗಿದೆ. ಇದು ಜನ ಸೆಳೆಯುವ ತಂತ್ರವಾಗಿಯೂ ಗಮನಸೆಳೆಯುತ್ತಿದೆ.

ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯೃರ್ಥಿ ಡಾ. ಯತೀಂದ್ರ ಸಿದ್ದರಾಮಯ್ಯರವರ ಪರ ಪ್ರಚಾರ ಮಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ಪುತ್ರಿ ಚಿತ್ರನಟಿ ರಿಷೀಕಾ ಸಿಂಗ್ ಅವರು ವರುಣಾ ಕ್ಷೇತ್ರದ ಕುಪ್ಪರಹಳ್ಳಿ, ಕನಕನಗರ, ಬೆಳಗುಂದ, ಸೋನಹಳ್ಳಿ ಸೇರಿದಂತೆ 12 ಗ್ರಾಮಗಳಲ್ಲಿ ರೋಡ್ ಶೋ ಮತ್ತು ಪಾದಯಾತ್ರೆ ನಡೆಸಿ, ಮತಯಾಚಿಸಿದರು.

ಈ ವೇಳೆ ಮಾತನಾಡಿದ ಅವರು, ಪ್ರಪಂಚದಲ್ಲಿ ಹಸಿವಿಗಾಗಿ ಕ್ರಾಂತಿಯಾಗಿದೆ. ಈಗಲೂ ದೇಶದಲ್ಲಿ ಹಸಿವಿದೆ. ಅಂತಹ ಹಸಿವನ್ನು ನೀಗಿಸಿ ಹಸಿವು ಮುಕ್ತ ಕರ್ನಾಟಕ ಮಾಡಿದ ಸಿದ್ದರಾಮಯ್ಯನವರನ್ನು ಯಾರೂ ಮರೆಯುವುದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಪರ್ವವೇ ನಡೆದಿದ್ದು, ಮೈಸೂರಿನಲ್ಲಿ ಚಿತ್ರನಗರಿಯನ್ನು ಸ್ಥಾಪಿಸಲಾಗುತ್ತಿದೆ. ವಿಷ್ಣುವರ್ಧನ್ ಸ್ಮಾರಕಕ್ಕೆ 5 ಎಕರೆ ಭೂಮಿ ಮಂಜೂರಾಗಿದೆ. 10 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ. ಚುನಾವಣೆ ಮುಗಿದ ನಂತರ ಅದರ ಪ್ರಕ್ರಿಯೆಗಳು ಪ್ರಾರಂಭವಾಗುತ್ತವೆ. ಸಿದ್ದರಾಮಯ್ಯನವರು ಮಾಡಿರುವ ಜನಪರ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಹೋಗಲು ಡಾ. ಯತೀಂದ್ರ ಸಿದ್ದರಾಮಯ್ಯನವರಂತಹ ವಿದ್ಯಾವಂತರು ಆಯ್ಕೆಯಾಗಿ ಬಂದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ. ಆದ್ದರಿಂದ ಮತದಾರರು ಅವರನ್ನು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು, ರಂಜಿತಾ, ತಾರಾ ಅಯ್ಯಮ್ಮ, ಎಪಿಎಂಸಿ ಸದಸ್ಯ ಸಿದ್ದರಾಮನಹುಂಡಿ ಬಸವರಾಜು, ಕೆಂಪೀರಯ್ಯ, ಮರಳೂರು ಮಹೇಶ, ಶಿವನಾಗ, ಮಹಾದೇವ ಗಾಣಿಗ, ದೀಪಕ್ರಾಜ್, ಧರ್ಮೇಂದ್ರರಾಜು, ಒಬಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಂಜಯ್ಯ ಇದ್ದರು.

See also  ನಂಜನಗೂಡು ಬಳಿ ರೈತರಿಗೆ ಚಿರತೆ ಭಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು