News Kannada
Tuesday, November 29 2022

ಮೈಸೂರು

ಬಿಜೆಪಿ ಅಭ್ಯರ್ಥಿ ಸೋಲಿಸಲು ವಾಮಾಚಾರ? - 1 min read

Photo Credit :

ಬಿಜೆಪಿ ಅಭ್ಯರ್ಥಿ ಸೋಲಿಸಲು ವಾಮಾಚಾರ?

ಗುಂಡ್ಲುಪೇಟೆ: ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಸ್. ನಿರಂಜನ್ ಕುಮಾರ್ ಸೋಲಿಸಲು ವಾಮಾಚಾರ ನಡೆದಿದೆ ಎಂಬ ಸುದ್ದಿ ಹರಡಿ ಕೆಲ ಕಾಲ ಬಿಜೆಪಿ ಕಾರ್ಯಕರ್ತರಲ್ಲಿ ಆತಂಕವುಂಟು ಮಾಡಿರುವ ಘಟನೆ ತಾಲೂಕಿನ ರಾಘವಾಪುರ ಗ್ರಾಮದಲ್ಲಿ ನಡೆದಿದೆ.

ರಾಘವಾಪುರ ಗ್ರಾಮದ ಜಗಲಿ ಕಟ್ಟೆಯ ಬಳಿ ನಿರಂಜನ ಕುಮಾರ್ ಭಾವಚಿತ್ರವಿರುವ ಕರಪತ್ರಕ್ಕೆ ಲಿಂಬೆಹಣ್ಣು, ಮೊಳೆ, ಕಣಗಿಲೆ ಹೂವು ಅರಿಶಿನ ಕುಂಕುಮಗಳಿಂದ ವಾಮಾಚಾರ ನಡೆಸಲಾಗಿದೆ ಎಂದು ಸುದ್ದಿ ಹರಡಿದ್ದು, ಇದನ್ನು ನೋಡಲು ಜನ ತಂಡೋಪತಂಡವಾಗಿ ಆಗಮಿಸಿದ್ದಾರೆ.

ಕ್ಷೇತ್ರದಲ್ಲಿ ಮತಕ್ಕಾಗಿ ವಾಮಾಚಾರವೂ ನಡೆಯುತ್ತಾ ಎಂದು ಪ್ರಶ್ನಿಸುತ್ತಿರುವ ಗ್ರಾಮಸ್ಥರು ಚರ್ಚೆಯಲ್ಲಿ ತೊಡಗಿದ್ದರೆ, ಬಿಜೆಪಿ ಕಾರ್ಯಕರ್ತರು ಆತಂಕಗೊಂಡಿದ್ದಾರೆ.

ವಿಷಯ ತಿಳಿಸಿದ ಬಳಿಕ ಸ್ಥಳಕ್ಕೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಕೃಷ್ಣಪ್ಪ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಅದನ್ನು ತೆರವುಗೊಳಿಸಿದ್ದಾರೆ.

See also  ಬಕ್ರೀದ್ ಹಬ್ಬ: ಮೌಲಾನಾ ಅಹ್ಮದ್ ರಷಾದಿಯ ಮಹತ್ವದ ನಿರ್ದೇಶನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು