News Kannada
Sunday, September 25 2022

ಮೈಸೂರು

ರೈತರ ಉಪಯೋಗಕ್ಕೆ ಬಾರದ ಚೆಕ್ ಡ್ಯಾಂಗಳು! - 1 min read

Photo Credit :

ರೈತರ ಉಪಯೋಗಕ್ಕೆ ಬಾರದ ಚೆಕ್ ಡ್ಯಾಂಗಳು!

ಮಾಗಡಿ: ಅಂತರ್ಜಲ ಹೆಚ್ಚಿಸಲು, ಅನಗತ್ಯವಾಗಿ ಮಳೆ ನೀರು ಹರಿದು ಹೋಗುವುದನ್ನು ತಡೆದು ರೈತರಿಗೆ ಅನುಕೂಲ ಮಾಡಿಕೊಡುವ ಸದುದ್ದೇಶದಿಂದ ನಿರ್ಮಿಸಿದ ಚೆಕ್ ಡ್ಯಾಂಗಳು ಕಳಪೆ ಕಾಮಗಾರಿಯಿಂದಾಗಿ ನೆಲಕಚ್ಚುತ್ತಿದೆ ಎಂಬ ಆರೋಪ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೇಳಿಬರುತ್ತಿದೆ.

ರೈತರ ಜಮೀನುಗಳ ಬಳಿ ಸಣ್ಣ ನೀರಾವರಿ ಇಲಾಖೆ ಸುಮಾರು ನಾಲ್ಕೈದು ಲಕ್ಷ ರೂ.ಗಳನ್ನು ಖರ್ಚು ಮಾಡಿ ಚೆಕ್ ಡ್ಯಾಂಗಳನ್ನು ನಿರ್ಮಿಸಿದೆ. ಆದರೆ ಈಗ ಈ ಡ್ಯಾಂಗಳಲ್ಲಿ ನೀರೇ ಇಲ್ಲ. ನೀರು ಬೇಸಿಗೆ ಕಾಲವಾಗಿದ್ದರಿಂದ ಬತ್ತಿ ಹೋಗಿರಬಹುದು ಎಂದು ಯೋಚಿಸಿದರೆ ಅದು ತಪ್ಪು ಕಲ್ಪನೆಯಾಗುತ್ತದೆ.

ರೈತರು ಹೇಳುವ ಪ್ರಕಾರ ಕೃಷಿ ಇಲಾಖೆಯ ಜಲಾನಯನ ವಿಭಾಗ ಹಾಗೂ ನರೇಗಾ ಯೋಜನೆಯಡಿಯಲ್ಲಿ ಕೆಲ ವರ್ಷಗಳ ಹಿಂದೆ ನಿರ್ಮಿಸಿದ ಚೆಕ್ ಡ್ಯಾಂ ಕಳಪೆಯಾಗಿದ್ದು, ನೀರು ಪೋಲಾಗುತ್ತಿದೆಯಂತೆ. ಜಲಾನಯನ ಇಲಾಖೆಯಲ್ಲಿ ಸಮಿತಿಗಳನ್ನು ರಚಿಸಿ ಸಮಿತಿಯ ಮೂಲಕ ಚೆಕ್ ಡ್ಯಾಂಗಳನ್ನು ನಿರ್ಮಿಸುತ್ತಿದ್ದು, ಇದಕ್ಕೆ ಅಗತ್ಯವಿರುವರ ಮರಳನ್ನು ಹೊರಗಡೆಯಿಂದ ತರದೆ ನಾಲೆಯಲ್ಲಿಯೇ ಸಿಗುವ ಮಣ್ಣು ಮಿಶ್ರಿತ ಮರಳು ಹಾಗೂ ಕಳಪೆ ಸಾಮಗ್ರಿಗಳನ್ನು ಬಳಿಸಿ ಚೆಕ್ ಡ್ಯಾಂಗಳನ್ನು ನಿರ್ಮಿಸುತ್ತಿರುವುದರಿಂದ ಕಾಮಗಾರಿ ಕಳಪೆಯಾಗುತ್ತಿದೆಯಂತೆ. ಅಲ್ಲದೇ ಜಮೀನುಗಳ ಒಳಭಾಗದಲ್ಲಿ ಅರಣ್ಯದಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುವ ಸಮಯದಲ್ಲಿ ಸರಿಯಾಗಿ ಕ್ಯೂರಿಂಗ್ ಮಾಡಿದಿರುವುದರಿಂದ ಜೋರಾಗಿ ಮಳೆ ಬಂದರೆ ಚೆಕ್ ಡ್ಯಾಂಗಳು ಒಡೆದು ಹೋಗುವುದರಿಂದ ಇದರಲ್ಲಿ ನೀರು ನಿಲ್ಲುತ್ತಿಲ್ಲ ಎನ್ನುವುದು ಸ್ಥಳೀಯ ರೈತರ ಆರೋಪವಾಗಿದೆ.

ಇದರಿಂದ ಚೆಕ್ ಡ್ಯಾಂ ನಿರ್ಮಿಸಿದರೂ ಯಾವುದೇ ಪ್ರಯೋಜನವಿಲ್ಲ. ಚೆಕ್ ಡ್ಯಾಂ ಹೆಸರಿನಲ್ಲಿ ಹಣವನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಜಲಾನಯನ ಸಮಿತಿ ವತಿಯವರು ಜಮೀನಿನ ಮಾಲೀಕರ ಒಪ್ಪಿಗೆ ಪಡೆಯದೇ ತಮಗೆ ಬೇಕಾದ ಕಡೆ ತೋಚಿದ ರೀತಿಯಲ್ಲಿ ಚೆಕ್ ಡ್ಯಾಂಗಳನ್ನು ನಿರ್ಮಿಸುತ್ತಾರೆ. ಚೆಕ್ ಡ್ಯಾಂ ನಿರ್ಮಿಸಿದ ನಂತರ ಅದಕ್ಕೆ ನೀರು ಹಾಕಿ ಕ್ಯೂರಿಂಗ್ ಮಾಡದ ಕಾರಣ ಮಳೆಗೆ ಚೆಕ್ಡ್ಯಾಂನಿಂದ ನೀರು ಸೋರಿಕೆಯಾಗಿ ಬರಿದಾಗುತ್ತದೆ ಎಂಬುದು ಇಲ್ಲಿನ ರೈತರ ನುಡಿಯಾಗಿದೆ.

ಇನ್ನು ಮುಂದೆಯಾದರೂ ಚೆಕ್ ಡ್ಯಾಂಗಳ ನಿರ್ಮಾಣದ ಬಗ್ಗೆ ಗಮನಹರಿಸಿ ಕಳಪೆ ಕಾಮಗಾರಿಯಾಗದಂತೆ ನೋಡಿಕೊಂಡಿದ್ದೇ ಆದರೆ ಸರ್ಕಾರದ ಯೋಜನೆ ರೈತರಿಗೆ ತಲುಪಲು ಸಾಧ್ಯವಾಗಲಿದೆ. ಇಲ್ಲದೆ ಹೋದರೆ ಚೆಕ್ ಡ್ಯಾಂ ನಿರ್ಮಾವಾದರೂ ಅದರಿಂದ ರೈತರಿಗೆ ಯಾವುದೇ ಪ್ರಯೋಜನವಾಗಲಾರದು.

See also  ಶಾಲೆ ಶಿಕ್ಷಕಿ ವರ್ಗಾವಣೆ ವಿರೋಧಿಸಿ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು