News Kannada
Saturday, October 08 2022

ಮೈಸೂರು

ಮರಿಗಳಿಗೆ ಜನ್ಮ ನೀಡಿದ ನೀರು ಕುದುರೆ ಮತ್ತು ಜಿರಾಫೆ - 1 min read

Photo Credit :

ಮರಿಗಳಿಗೆ ಜನ್ಮ ನೀಡಿದ ನೀರು ಕುದುರೆ ಮತ್ತು ಜಿರಾಫೆ

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯಲ್ಲಿ ನೀರು ಕುದುರೆ ಮತ್ತು ಜಿರಾಫೆ ಮರಿಗಳಿಗೆ ಜನ್ಮ ನೀಡಿದ್ದು ಮೃಗಾಲಯದಲ್ಲಿ ಸಂಭ್ರಮ ಮನೆ ಮಾಡಿದೆ.

125 ವರ್ಷಗಳ ಇತಿಹಾಸವಿರುವ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಮೇ 26ರಂದು 5ನೇ ಬಾರಿಗೆ ಖುಷಿ ಜಿರಾಫೆ ಹೆಣ್ಣು ಮರಿಗೆ ಜನ್ಮ ನೀಡಿದ್ದು, ಖುಷಿ ಹಾಗೂ ಕೃಷ್ಣರಾಜ ಜೋಡಿಗೆ ಈ ಹೆಣ್ಣು ಮರಿ ಜನಿಸಿದೆ. ಮೇ 15ರಂದು ನೀರು ಕುದುರೆ ಜಲೇಶಿ ಮರಿಗೆ ಜನ್ಮ ನೀಡಿದ್ದು, ಕೃಷ್ಣ ಹಾಗೂ ಜಲೇಶಿ ಜೋಡಿಗೆ ಈ ಮರಿ ಜನಿಸಿರುವುದು ಮೃಗಾಲಯದಲ್ಲಿ ಸಂಭ್ರಮ ಮನೆ ಮಾಡಿದೆ.

ಈ ಎರಡು ಮರಿಗಳು ತಾಯಿಯೊಂದಿಗೆ ಆರೋಗ್ಯವಾಗಿದ್ದು, ವಿಶೇಷವಾಗಿ ಆರೈಕೆ ಮಾಡಲಾಗುತ್ತಿದೆ. ಜೊತೆಗೆ ಮೃಗಾಲಯದ ವೈದ್ಯರು ಈ ಎರಡು ಮರಿಗಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ. ಜಿರಾಫೆ ಮರಿ ಹಾಕುವಾಗ ಮೃಗಾಲಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಇದರಿಂದ ಗಾಬರಿಯಾಗಬಾರದು ಎಂದು ಎಲ್ಲಾ ಮುಂಜಾಗೃತ ಕ್ರಮಕೈಗೊಂಡಿದ್ದೆವು. ಯಾವುದೇ ಸಮಸ್ಯೆಯಾಗಿಲ್ಲ, ಈ ಜಿರಾಫೆ ಮೃಗಾಲಯದಲ್ಲಿ 5ನೇ ಬಾರಿ ಮರಿ ಹಾಕಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಸಿ.ರವಿಶಂಕರ್ ತಿಳಿಸಿದ್ದಾರೆ.

ಇಂದಿನಿಂದ ಶ್ರೀಲಂಕಾದ ಅನಕೊಂಡ ಪ್ರವಾಸಿಗರ ದರ್ಶನಕ್ಕೆ
ಪ್ರಾಣಿ ವಿನಿಮಯದಡಿ ಮೈಸೂರಿನ ಮೃಗಾಲಯಕ್ಕೆ ಕಳೆದ ತಿಂಗಳು ಮೂರು ಅನಕೊಂಡಗಳನ್ನು ಶ್ರೀಲಂಕಾಂದಿಂದ ತರಲಾಗಿತ್ತು. ಅನಕೊಂಡಗಳನ್ನು ಇಲ್ಲಿನ ಪರಿಸರಕ್ಕೆ ಹೊಂದಿಗಳ್ಳುವ ತನಕ, ಅವುಗಳ ಚಲವಲನಗಳ ಮೇಲೆ ಗಮನ ಹರಿಸಲು ಮೃಗಾಲಯದ ವೈದ್ಯರು ಪ್ರತ್ಯೇಕವಾಗಿ ಇರಿಸಿದ್ದರು. ಸದ್ಯ ಅನಕೊಂಡಗಳ ಆರೋಗ್ಯ ಇಲ್ಲಿನ ಪರಿಸರಕ್ಕೆ ಹೊಂದಿಕೊಂಡಿರುವ ಹಿನ್ನೆಲೆಯಲ್ಲಿ ಇಂದಿನಿಂದ ಪ್ರವಾಸಿಗರ ವೀಕ್ಷಣೆಗೆ ಅನುವು ಮಾಡಿಕೊಡಲಾಗಿದೆ.

See also  ಕೊರೋನಾ ಹತ್ತಿಕ್ಕುವುದು ಮೈಸೂರು ನೂತನ ಜಿಲ್ಲಾಧಿಕಾರಿಯ ಆದ್ಯತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು