News Kannada
Sunday, September 25 2022

ಮೈಸೂರು

ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ: ಗಬ್ಬೆದು ನಾರುತ್ತಿರುವ ದಕ್ಷಿಣ ಕಾಶಿ - 1 min read

Photo Credit :

ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆ: ಗಬ್ಬೆದು ನಾರುತ್ತಿರುವ ದಕ್ಷಿಣ ಕಾಶಿ

ಮೈಸೂರು:  ಗುತ್ತಿಗೆ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮಷ್ಕರದಿಂದ ದಕ್ಷಿಣ ಕಾಶಿ ನಂಜನಗೂಡು ಕಸದ ರಾಶಿಯಿಂದ ತುಂಬಿದ್ದು, ಸಾರ್ವಜನಿಕರೇ ಕಸದ ರಾಶಿಯನ್ನ ತುಂಬಿಕೊಂಡು ಬಂದು ನಗರಸಭೆ ಮುಂದೆ ಸುರಿದು ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.

ಘಟನೆಯ ವಿವರ: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ನಂಜನಗೂಡು ಕಸದ ರಾಶಿಯಿಂದ ತುಂದಿದ್ದು, ಗಬ್ಬೆದು ನಾರುತ್ತಿದೆ. ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕಳೆದ 7 ತಿಂಗಳಿನಿಂದ ಸಂಬಳ ನೀಡಲ್ಲವೆಂದು 25 ಮಂದಿ ಗುತ್ತಿಗೆ ಪೌರಕಾರ್ಮಿಕರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ನಂಜನಗೂಡಿನ ಪ್ರಮುಖ ಬೀದಿಗಳಾದ ದೇವಸ್ಥಾನದ ರಸ್ತೆ, ರಾಷ್ಟ್ರಪತಿ ರಸ್ತೆ, ಬಜಾರ್ ರಸ್ತೆಗಳಲ್ಲಿ ಕಸದ ರಾಶಿಗಳು ಕಂಡು ಬಂದಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಗುತ್ತಿಗೆ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಬೇಟಿ ನೀಡಿದ ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್ ಪ್ರತಿಭಟನೆ ಹಿಂತೆಗೆದುಕೊಂಡು ಕೆಲಸಕ್ಕೆ ಹಾಜರಾಗಿ, 15 ದಿನಗಳಲ್ಲಿ ನಿಮ್ಮ ಸಮಸ್ಯೆಗಳನ್ನ ಬಗೆ ಹರಿಸುವುದಾಗಿ ತಿಳಿಸಿದರು ಪ್ರತಿಭಟನೆಯನ್ನ ಹಿಂಪಡೆಯದೆ ಪ್ರತಿಭಟನೆಯನ್ನ ಮುಂದುವರೆಸಿದ್ದಾರೆ.

ಕಸದ ರಾಶಿಯನ್ನ ಕ್ಲೀನ್ ಮಾಡಿದ ಸಾರ್ವಜನಿಕರು.

ನಂಜನಗೂಡಿನ 27 ವಾರ್ಡ್ ಗಳಲ್ಲಿ ಸ್ವಚ್ಚತೆಯ ಸಮಸ್ಯೆ ಎದುರಾಗಿರುವ ಪರಿಣಾಮ ಸಾರ್ವಜನಿಕರೇ ಕಸದ ರಾಶಿಯನ್ನ ಓಮ್ನಿ ವಾಹನದಲ್ಲಿ ತುಂಬಿಕೊಂಡು ನಗರದ ಸಭೆ ಮುಂದೆ ಸುರಿದು, ನಗರಸಭೆ ಆಡಳಿತದ ವಿರುದ್ದ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಸಮಸ್ಯೆ ನಿವಾರಣೆಗೆ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿದ್ದಾರೆ. ನಗರದಲ್ಲಿ ಸಂಗ್ರಹಗೊಂಡಿರುವ ಕಸವನ್ನ ಸಾಗಿಸಲು ಪರ್ಯಾಯ ಕ್ರಮ ಕೈ ಗೊಳ್ಳಲು ಅಗತ್ಯ ನಿರ್ಧೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದ್ದು, ಗುತ್ತಿಗೆ ಪೌರ ಕಾರ್ಮಿಕರಿಗೆ ತಾಂತ್ರಕ ತೊಂದರೆಯಿಂದಾಗಿ ವೇತನ ಪಾವತಿಸಲು ಸಾಧ್ಯವಾಗಿಲ್ಲ. ನಾಳೆಯೂ ಧರಣಿ ಮುಂದುವರಿದಲ್ಲಿ ಕಸ ಸಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಂಜನಗೂಡು ನಗರಸಭೆಯ ಪೌರಾಯುಕ್ತ ವಿಜಯ್ ಮಾಹಿತಿ ನೀಡಿದರು.

See also  ಸಾಕ್ಷಿಗಳನ್ನು ಪತ್ತೆಮಾಡಲು ಕೊಳದ ನೀರನ್ನೇ ಖಾಲಿ ಮಾಡಿದ ಪೋಲಿಸರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು