News Kannada
Friday, October 07 2022

ಮೈಸೂರು

ಕಾಲಾ ಸಿನಿಮಾ ನಾನಂತೂ ನೋಡಲ್ಲ: ನಟ ಜಗ್ಗೇಶ್ - 1 min read

Photo Credit :

ಕಾಲಾ ಸಿನಿಮಾ ನಾನಂತೂ ನೋಡಲ್ಲ: ನಟ ಜಗ್ಗೇಶ್

ಮೈಸೂರು: ಕಾಲಾ ಚಿತ್ರವನ್ನು ನಾನಂತೂ ನೋಡಲ್ಲ. ರಜನಿಕಾಂತ್ ರಾಜಕೀಯಕ್ಕಾಗಿ ಕಾವೇರಿ ಬಗ್ಗೆ ಮಾತನಾಡೋದು ಸರಿಯಲ್ಲ. ರಜನಿಕಾಂತ್ ಅವರನ್ನು ಟ್ವೀಟರ್ ನಲ್ಲಿ ಅನ್ ಫಾಲೋ ಮಾಡಿದ್ದೇನೆ ಎಂದು ನಟ ಜಗ್ಗೇಶ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಇಂದು ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ನಟ ಜಗ್ಗೇಶ್, ನಾನು ರಜನಿಕಾಂತ್ ಅವರನ್ನು ರಾಜ್ ಕುಮಾರ್ ರಂತೆ ಗೌರವಿಸಿದ್ದೆ. ಕಾವೇರಿ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಂಡಿರುವುದು ನನಗೆ ವೈಯಕ್ತಿಕವಾಗಿ ನೋವಾಗಿದೆ. ಕರ್ನಾಟಕದಲ್ಲಿ ಕಾಲ ಚಿತ್ರ ಬಿಡುಗಡೆ ವಿಚಾರವಾಗಿ ಕನ್ನಡಿಗರು ಎರಡು ರೀತಿಯಲ್ಲಿ ಪ್ರತಿಭಟನೆ ಮಾಡಬಹುದು. ಒಂದು ಮೌನವಾಗಿ ಪ್ರತಿಭಟನೆ ನಡೆಸಬೇಕು. ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಬಾರದು. ಮತ್ತೊಂದು ಕಾಲ ಚಿತ್ರವನ್ನು ನೋಡದೆ ಪ್ರತಿಭಟನೆ ನಡೆಸಬಹುದು. ನಾನಂತೂ ಕಾಲ ಚಿತ್ರವನ್ನು ನೋಡುವುದಿಲ್ಲ. ನನ್ನ ಅಭಿಮಾನಿಗಳು ಸಹ ನನ್ನ ಗುಣವನ್ನೇ ಹೊಂದಿರುತ್ತಾರೆ. ಅವರು ಸಹ ಚಿತ್ರವನ್ನು ನೋಡುವುದಿಲ್ಲ ಅಂದುಕೊಂಡಿದ್ದೇನೆ ಎಂದರು.

ಇನ್ನೂ ನಾನು ಅವರ ಈ ಹೇಳಿಕೆಯ ನಂತರ ಕಳೆದ ಮೂರು ತಿಂಗಳ ಹಿಂದೆಯೇ ಟ್ವಿಟರ್ ನಲ್ಲೂ ಅವರನ್ನು ಅನ್ ಫಾಲೋ ಮಾಡಿದ್ದೇನೆ. ಒಂದು ಮನೆಯಲ್ಲಿರುವ 5 ಮಂದಿಯೇ ಒಂದೇ ರೀತಿ ಇರೋಲ್ಲ. ಅಂದ ಮೇಲೆ ಎಲ್ಲರು ನಮ್ಮಂತೆಯೇ ಯೋಚನೆ ಮಾಡಬೇಕು ಅನ್ನೋದು ಸರಿಯಲ್ಲ ಎಂದರು.

See also  ತರಕಾರಿ ಮಾರುವ ಮಹಿಳೆ ಮೇಲೆ ಕುದುರೆ ದಾಳಿ: ಸಾವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು