News Kannada
Saturday, September 24 2022

ಮೈಸೂರು

ವಾಜಪೇಯಿ ಗುಣಮುಖರಾಗುವಂತೆ ಮೈಸೂರಲ್ಲಿ ವಿಶೇಷಪೂಜೆ - 1 min read

Photo Credit :

ವಾಜಪೇಯಿ ಗುಣಮುಖರಾಗುವಂತೆ ಮೈಸೂರಲ್ಲಿ ವಿಶೇಷಪೂಜೆ

ಮೈಸೂರು: ಅಜಾತಶತ್ರು ಮಾಜಿ ಪ್ರಧಾನಮಂತ್ರಿ. ಅಟಲ್ ಬಿಹಾರಿ ವಾಜಪೇಯಿ ಅವರು ಗುಣಮುಖರಾಗುವಂತೆ ಪ್ರಾರ್ಥಿಸಿ ಅಭಿಮಾನಿಗಳು ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ರಾಜ್ಯ ಪರಿಷತ್ ಸದಸ್ಯರಾದ ಬಿ.ಆನಂದ್ ಮಾತನಾಡಿ, ದೇಶದ ಅಜಾತ ಶತ್ರು ಅಟಲ್ ಜೀ ರವರು ಹದಿಹರೆಯದ ವಯಸ್ಸಿನಲ್ಲಿಯೇ ಬ್ರಿಟೀಷರ ವಿರುದ್ಧ ಹೋರಾಡಿ ಜೈಲು ಸೇರಿದ್ದರು. ಬ್ರಿಟೀಷರ ವಿರುದ್ಧ ಹೋರಾಟದ ಹೊತ್ತಿನಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಜನ ಸಂಘದಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು.

1942-1945ರ ಕ್ವಿಟ್ ಇಂಡಿಯಾ ಚಳವಳಿಯ ಹೊತ್ತಲ್ಲಿ ವಾಜಪೇಯಿ ರಾಜಕೀಯಕ್ಕೆ ಧುಮುಕಿದ್ದರು. ಮೊದಲಿಗೆ ಕಮ್ಯುನಿಸ್ಟ್ ಆಗಿದ್ದ ಅವರು ಆ ಮೇಲೆ ಆರ್‍ಎಸ್‍ಎಸ್ ಸೇರಿದ್ದರು. 1957 ರಿಂದ 2009ರ ವರೆಗೆ ಲೋಕಸಭೆ, ಸಂಸತ್ ನ ಕೆಳಮನೆಯಲ್ಲಿಯೂ ಅವರು ಸೇವೆ ಸಲ್ಲಿಸಿದರು. 1998ರಲ್ಲಿ 13 ತಿಂಗಳುಗಳ ಕಾಲ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ಎಐಎಡಿಎಂಕೆ ನೇತಾರೆ ಜೆ. ಜಯಲಲಿತಾ ಅವರ ಬೆಂಬಲ ವಾಪಸ್ ತೆಗೆದುಕೊಂಡಾಗ ಮತ್ತೆ ಬಿತ್ತು.

4 ದಶಕಗಳ ಕಾಲ ವಿಪಕ್ಷದಲ್ಲಿದ್ದ ಬಿಜೆಪಿ 1996ರಲ್ಲಿ ವಾಜಪೇಯಿ ನೇತೃತ್ವದಲ್ಲಿ ಅಧಿಕಾರಕ್ಕೇರಿತು. ಆದರೆ ಈ ಸರ್ಕಾರ 13 ದಿನಗಳ ಕಾಲವಷ್ಟೇ ಅಧಿಕಾರ ನಡೆಸಿತು. 1999ರಲ್ಲಿ ಮತ್ತೆ ವಾಜಪೇಯಿ ಸರ್ಕಾರ ಅಧಿಕಾರಕ್ಕೇರಿ 5 ವರ್ಷಗಳ ಅಧಿಕಾರಾವಧಿಯನ್ನು ಪೂರೈಸಿತು. ಪಕ್ಷಾತಿತವಾಗಿ ದೇಶದ ಅಭಿವೃದ್ಧಿಗೆ ಪಾತ್ರರಾದರು ಮತ್ತು ದೇಶದ ಹಳಿಗಳು ಹಾಗೂ ನಗರ ಪ್ರದೇಶಗಳನ್ನು ಮತ್ತು ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗಳ ನೇತಾರರು ಬಿಜೆಪಿ ಪಕ್ಷದ ಯುವ ಕಾರ್ಯಕರ್ತರಿಗೆ ಸ್ಪೂರ್ತಿ ನೀಡುತ್ತಿದ್ದ ಈ ಮಹಾಪುರುಷರು ಬೇಗ ಗುಣಮುಖರಾಗಲಿ ಎಂದು ಪಾರ್ಥಿಸಿದರು.

ಈ ವೇಳೆ ನಾಯಕರಾದ ಟಿ.ರಮೇಶ್, ರಾಜ್ಯ ಪರಿಷತ್ ಸದಸ್ಯ ಡಾ.ಅನಿಲ್ ಥಾಮಸ್, ನಾಗರಾಜು, ಟಿ.ಎನ್.ಶಾಂತ, ಸುರೇಶ, ರಾಜ್.ಕುಮಾರ್ ಗೌಡ. ಕಾರ್ತಿಕ್.ಜಯಪ್ಪ. ರುಕ್ಮಾಂಗದ. ನಾಗೇಶ .ಯೋಗೇಶ್, ಶಿವು, ಬಸವರಾಜ್, ಪಾಪು ಹಾಗೂ ಕಾರ್ಯ ಕರ್ತರು ಭಾಗವಹಿಸಿದ್ದರು

See also  ಮಕರಬ್ಬಿಯಲ್ಲಿ ಕಲುಷಿತ ನೀರು ಸೇವನೆ ಪ್ರಕರಣ: ಸಾವಿನ ಸಂಖ್ಯೆ 7ಕ್ಕೇರಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು