News Kannada
Thursday, September 29 2022

ಮೈಸೂರು

ದೇಗುಲಕ್ಕೆ ಕನ್ನ ಹಾಕಿದ ಕಳ್ಳರಿಗೆ ದಕ್ಕಿದ್ದು ನಕಲಿ ಒಡವೆ! - 1 min read

Photo Credit :

ದೇಗುಲಕ್ಕೆ ಕನ್ನ ಹಾಕಿದ ಕಳ್ಳರಿಗೆ ದಕ್ಕಿದ್ದು ನಕಲಿ ಒಡವೆ!

ಮಾಗಡಿ: ಪಟ್ಟಣದ ಕೆಂಪೇಗೌಡರು ಕಟ್ಟಿಸಿರುವ ಐತಿಹಾಸಿಕ ಸೋಮೇಶ್ವರ ದೇವಸ್ಥಾನದಲ್ಲಿ 2ನೇ ಬಾರಿಗೆ ಕಳ್ಳರು ಕೈ ಚಳಕ ತೋರಿದ್ದು 3 ಜನ ಮುಸುಕುಧಾರಿಗಳು ಅಮ್ಮನವರ ಮೈಮೇಲಿದ್ದ ತಾಳಿ ಮತ್ತು ಆಭರಣವನ್ನು ದರೋಡೆ ಮಾಡಿರುವ ಘಟನೆ ನಡೆದಿದೆ.

ಮಂಗಳವಾರ ರಾತ್ರಿ 9.30ರ ಸಮಯದಲ್ಲಿ 3 ಜನ ಮುಸುಕುಧಾರಿಗಳು ದೇವಸ್ಥಾನಕ್ಕೆ ನುಗ್ಗಿ ಅಮ್ಮನವರ ದೇವಸ್ಥಾನದ ಬೀಗ ಮುರಿದು ಒಳ ನುಗ್ಗಿ ತಾಳಿ ಮತ್ತು ಒಡವೆಯನ್ನು ಕಳ್ಳತನ ಮಾಡಿದ್ದು ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದ್ದು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಸಾಕಷ್ಟು ಸುರಕ್ಷತೆ ಇಲ್ಲದ ಕಾರಣ ಹಾಗೂ 2ನೇ ಬಾರಿಗೆ ಕಳ್ಳತನವಾಗಿದ್ದರಿಂದ ದೇವಸ್ಥಾನದ ಅರ್ಚಕರು ಇರುವ ಸಮಯದಲ್ಲಿ ಮಾತ್ರ ಅಮ್ಮನವರಿಗೆ ಚಿನ್ನದ ಒಡವೆಯನ್ನು ಹಾಕಿದ್ದಾರೆ, ಉಳಿದ ಸಮಯದಲ್ಲಿ ನಕಲಿ ಚಿನ್ನವನ್ನೇ ಹಾಕಿದ್ದು ಕಳ್ಳರು ನಕಲಿ ತಾಳಿ, ಆಭರಣವನ್ನು ಕದ್ದಿದ್ದಾರೆ. ಇತ್ತೀಚೆಗಷ್ಟೆ ಸಿಸಿ ಕ್ಯಾಮರಾವನ್ನು ಹಾಕಲಾಗಿತ್ತು, ಸಿಸಿ ಕ್ಯಾಮರಾದಲ್ಲಿ ಕಳ್ಳರು ಬಂದಿರುವ ದೃಶ್ಯ ಸೆರೆಯಾಗಿದ್ದು ಮಾಗಡಿ ಪಿಎಸ್‍ಐ ರವಿರವರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮಾಗಡಿ ಪಟ್ಟಣದಲ್ಲಿ ಯಾವುದೇ ಪ್ರಮುಖ ವೃತ್ತದಲ್ಲೂ ಸಿಸಿ ಕ್ಯಾಮರಾ ಇಲ್ಲದಿರುವುದರಿಂದ ಕಳ್ಳರ ಚಹರೆ ಸಿಗದಂತಾಗಿದೆ, ಕೂಡಲೇ ಪೊಲೀಸ್ ಇಲಾಖೆ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಳ್ಳರನ್ನು ಸೆರೆಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

See also  ಭಾರತ್ ಬಂದ್: ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು