News Kannada
Monday, October 03 2022

ಮೈಸೂರು

ಮೋದಿ ಗೆಲ್ಲದಿದ್ದರೆ ದೇಶ ಉದ್ಧಾರವಾಗಲ್ಲ: ಸಾಹಿತಿ ಎಸ್.ಎಲ್. ಭೈರಪ್ಪ - 1 min read

Photo Credit :

ಮೋದಿ ಗೆಲ್ಲದಿದ್ದರೆ ದೇಶ ಉದ್ಧಾರವಾಗಲ್ಲ: ಸಾಹಿತಿ ಎಸ್.ಎಲ್. ಭೈರಪ್ಪ

ಮೈಸೂರು: 2019ರಲ್ಲಿ ಮಾತ್ರವಲ್ಲ, 2024 ಮತ್ತು 2029ರಲ್ಲೂ ಮೋದಿ ಗೆಲ್ಲಲೇಬೇಕು. ಇಲ್ಲವಾದರೆ ಈ ದೇಶ ಉದ್ಧಾರವಾಗುವುದಿಲ್ಲ ಎಂದು ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.

ಹಿರಿಯ ಸಾಹಿತಿ ಎಸ್.ಎಲ್ ಭೈರಪ್ಪ ಅವರ ಮನೆಗೆ ತೆರಳಿ ಭೇಟಿಯಾದ ಸಂಸದ ಪ್ರತಾಪ್ ಸಿಂಹ ಅವರು, ಕೇಂದ್ರ ಸರ್ಕಾರದ ನಾಲ್ಕು ವರ್ಷದ ಸಾಧನೆಯ ಪುಸ್ತಕವನ್ನು ನೀಡಿ ಮೈಸೂರಿಗೆ ಕೇಂದ್ರ ಸರ್ಕಾರ ನೀಡಿರುವ ಪ್ರತಿಯೊಂದು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಹಿತಿ ಎಸ್.ಎಲ್ ಭೈರಪ್ಪ, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಒಂದು ಬಾರಿಗಲ್ಲ, ಮೂರು ಬಾರಿಗೆ ಮೋದಿ ಅವರನ್ನು ಗೆಲ್ಲಿಸದಿದ್ದರೆ ದೊಡ್ಡ ಅವಿವೇಕವಾಗುತ್ತದೆ. ಸದ್ಯ ನಾಲ್ಕೈದು ಗುಂಪುಗಳು ಒಂದಾಗಿವೆ. ಮೋದಿಯನ್ನು ಸೋಲಿಸುವುದು ಅವರ ಉದ್ದೇಶವಾಗಿದೆ. ಆದರೆ ಮೋದಿಯನ್ನು ಸೋಲಿಸಿ ಮುಂದೇನು ಮಾಡುತ್ತಾರೆ? ಯಾರು ಸಹ ಅವರ ಮಟ್ಟದಲ್ಲಿ ಕೆಲಸ ಮಾಡುವ ವಿಶ್ವಾಸ ಹೊಂದಿಲ್ಲ. ದೇಶದ ಸ್ಥಿತಿ ಏನಾಗುತ್ತದೆ ಎಂಬುದನ್ನು ನಾವು ಯೋಚನೆ ಮಾಡಲು ಆಗುವುದಿಲ್ಲ. ಆದ್ದರಿಂದ ಮೋದಿ ಅವರು ಗೆಲ್ಲಲೇಬೇಕು. ಮೋದಿ ಅವರು ಗೆಲ್ಲಬೇಕಾದರೆ ಸಾಕಷ್ಟು ಬಹುಮತ ಅವರಿಗೆ ಬರಲೇಬೇಕು. ಮತ್ತೆ ಅವರು ಕೆಲಸ ಮಾಡಬೇಕು. ಮೋದಿ ಅವರು ಎಲ್ಲ ಕೆಲಸಗಳನ್ನು ಚೆನ್ನಾಗಿ ಮಾಡಿದ್ದಾರೆ. ಇನ್ನಷ್ಟು ಕೆಲಸಗಳಾಗಬೇಕಾದರೆ ಮೋದಿ ಗೆಲ್ಲಲೇಬೇಕು. 2019ರಲ್ಲಿ ಮಾತ್ರವಲ್ಲ, 2024 ಮತ್ತು 2029ರಲ್ಲೂ ಮೋದಿ ಗೆಲ್ಲಲೇಬೇಕು. ಇಲ್ಲವಾದರೆ ಈ ದೇಶ ಉದ್ಧಾರವಾಗುವುದಿಲ್ಲ. ಬಹಳ ಅವಿವೇಕದ ಕೆಲಸವನ್ನು ನಮ್ಮ ವಿರೋಧ ಪಕ್ಷಗಳು ಮಾಡುತ್ತಿವೆ. ಜನರು ಎಚ್ಚೆತ್ತುಕೊಳ್ಳಬೇಕು, ಜನರನ್ನು ಎಚ್ಚರಿಸುವ ಕೆಲಸವನ್ನು ಪ್ರತಿಯೊಬ್ಬ ವಿದ್ಯಾವಂತರು ಮಾಡಬೇಕು. ಪ್ರತಿ ಹಳ್ಳಿಗಳಿಗೆ ಹೋಗಿ ಯಾರಿಗೆ ಓಟ್ ಕೊಡಬೇಕು. ಯಾಕೆ ಓಟ್ ಕೊಡಬೇಕೆಂಬುದನ್ನು ತಿಳಿಸಬೇಕು ಎಂದರು.

ಮೋದಿಯಂಥ ಪ್ರಧಾನಿಯನ್ನು ದೇಶ ಕಂಡಿಲ್ಲ
ಮೋದಿಯಂಥ ಪ್ರಧಾನ ಮಂತ್ರಿ ಭಾರತ ದೇಶ ಕಂಡಿಲ್ಲ. ಬೇರೆಯವರು ಬುದ್ಧಿವಂತರಿರಬಹುದು, ಆದರೆ ಈ ರೀತಿಯ ಕೆಲಸ ಮಾಡುವವರು, ಒಂದೇ ಸಮನೇ ತಮ್ಮನ ತಾವು ದೇಶದ ಹಿತದೃಷ್ಟಿಯ ಬಗ್ಗೆ ಆಲೋಚನೆ ಮಾಡುವವರು ಯಾರು ನಮ್ಮ ದೇಶಕ್ಕೆ ಬಂದಿಲ್ಲ. ಮೋದಿ ಅಧಿಕಾರಕ್ಕೆ ಬಂದ ನಾಲ್ಕು ವರ್ಷದಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ವಿದೇಶಗಳಲ್ಲಿ ಭಾರತ ದೇಶದ ಬಗ್ಗೆ ಇದ್ದ ಮನೋಭಾವನೆ ಬದಲಾವಣೆ ಮಾಡಿದ್ದಾರೆ. ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಭಾರತದ ಭವಿಷ್ಯ ನೋಡಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದರು.

See also  ಮುಖ್ಯ ಮಂತ್ರಿ ಭೇಟಿ ಹಿನ್ನೆಲೆ ; ಚಾಮುಂಡಿ ಬೆಟ್ಟದಲ್ಲಿ ಬಿಗಿ ಬಂದೋಬಸ್ತ್‌
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು