News Kannada
Thursday, October 06 2022

ಮೈಸೂರು

ಮೈಸೂರಲ್ಲಿ ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ - 1 min read

Photo Credit :

ಮೈಸೂರಲ್ಲಿ ವಿಷ್ಣು ಪ್ರತಿಮೆ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ

ಮೈಸೂರು: ಮೂಲತಃ ಮೈಸೂರಿನವರಾಗಿ ಕನ್ನಡ ಸಿನಿಮಾ ರಂಗದಲ್ಲಿ ಸಾಹಸಸಿಂಹನಾಗಿ ಮೆರೆದ ನಾಯಕ ನಟ ದಿ. ಡಾ. ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ನಗರದ ಚಾಮುಂಡಿಪುರಂನಲ್ಲಿ ನಿರ್ಮಿಸಲು ಅಭಿಮಾನಿಗಳು ಮುಂದಾಗಿದ್ದು, ಈ ಬಗ್ಗೆ ಸರ್ಕಾರದ ಗಮನಸೆಳೆದರೂ ಯಾವುದೇ ಪ್ರಯೋಜನವಾಗದ ಕಾರಣದಿಂದ ತಾವೇ ದೇಣಿಗೆ ಸಂಗ್ರಹಿಸಿ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಈ ಸಂಬಂಧ ಶುಕ್ರವಾರದಂದು ಅಭಿಮಾನಿಗಳು ಚಾಮುಂಡಿಪುರಂ, ವಿದ್ಯಾರಣ್ಯಪುರಂ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಪರಿವರ್ತನಂ ಟ್ರಸ್ಟ್ ಮೂಲಕ ಹಣಸಂಗ್ರಹ ಕಾರ್ಯವನ್ನು ನಡೆಸಿದರು. ಇವರ ಕಾರ್ಯಕ್ಕೆ ಜನ ಉತ್ತಮವಾಗಿ ಸ್ಪಂದಿಸಿದ್ದು ಕಂಡುಬಂತು.

ದೇಣಿಗೆ ಸಂಗ್ರಹಣಾ ಕಾರ್ಯಕ್ಕೆ ಕನ್ನಡ ಕಿರುತೆರೆ ಧಾರಾವಾಹಿಗಳಲ್ಲಿ ಜನಪ್ರಿಯರಾಗಿರುವ ನಟ ಹರೀಶ್ ಲಕ್ಕಣ್ಣ, ಅಲಕಾನಂದ, ಮೈಕೋ ಶಿವು, ಶ್ರೀಕಾಂತ್ ಹೆಬ್ಳೀಕರ್ ಅವರು ಚಾಲನೆ ನೀಡಿ ಶುಭ ಹಾರೈಸಿದ್ದಾರೆ. ಈ ವೇಳೆ ಮಾತನಾಡಿದ ಹಿರಿಯ ಕಲಾವಿದ ಮೈಕ್ ಚಂದ್ರು, ನಟ ವಿಷ್ಣುವರ್ಧನ್ ಅವರು ಮೂಲತಃ ಮೈಸೂರಿನವರಾಗಿದ್ದು ಸಿನಿಮಾರಂಗದ ಮೂಲಕ ವಿಶ್ವದೆಲ್ಲ್ಲಡೆ ತಮ್ಮ ಛಾಪು ಮೂಡಿಸಿದವರು. ವಿಷ್ಣುರವರು ಬಾಲ್ಯದಲ್ಲಿ ಚಾಮುಂಡಿಪುರಂ ಬಡಾವಣೆಗಳನ್ನು ಇಷ್ಟಪಡುತ್ತಿದ್ದರಂತೆ. ಹೀಗಾಗಿ ಇಲ್ಲಿ ಅವರ ಪ್ರತಿಮೆ ಮಾಡಿದರೆ ನೆನಪು ಶಾಶ್ವತವಾಗಿ ಉಳಿಯಲಿದೆ ಎಂಬ ಕಾರಣಕ್ಕೆ ಪ್ರತಿಮೆ ನಿರ್ಮಾಣಕ್ಕೆ ಮುಂದಾಗಿದ್ದೇವೆ.

ಕಳೆದ ಆರೇಳು ವರ್ಷಗಳಿಂದ ವಿಷ್ಣು ಸ್ಮಾರಕ ಸ್ಥಾಪಿಸುವಲ್ಲಿ ಮತ್ತು ಅರಮನೆಯ ಪಕ್ಕದಲ್ಲಿ ವಿಷ್ಣು ಉದ್ಯಾನವನ ಎಂದು ನಾಮಕರಿಸುವಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಇದರಿಂದ ವಿಷ್ಣು ಅಭಿಮಾನಿಗಳಿಗೆ ಮಾತ್ರವಲ್ಲ ಕನ್ನಡಿಗ ಕಲಾಭಿಮಾನಿಗಳಿಗೆ ಬಹಳ ನೋವುಂಟಾಗಿದ್ದು, ವಿಷ್ಣು ಅಭಿಮಾನಿಗಳು ವಿಶ್ವದೆಲ್ಲೆಡೆಯಿದ್ದು ಕೇವಲ 1ರೂ ಒಬ್ಬ ವ್ಯಕ್ತಿ ನೀಡಿದರೆ ಒಂದೇ ದಿನದಲ್ಲಿ ಪ್ರತಿಮೆ ನಿರ್ಮಾಣ ಮಾಡುವುದು ಕಷ್ಟವೇನಲ್ಲ ಎಂದು ಹೇಳಿದರು.

ಈ ಸಂದರ್ಭ ಯುವ ಮುಖಂಡ ಸಿ.ಎಸ್ ರಘು, ಪರಿವರ್ತನಂ ಟ್ರಸ್ಟ್ ಅಧ್ಯಕ್ಷ ವಿನಯ್ ಕಣಗಾಲ್, ಶಿವು, ರಂಗನಾಥ್, ಪ್ರಸಾದ್, ಅಪೂರ್ವ ಸುರೇಶ್ ಮುಂತಾದವರು ಇದ್ದರು.

See also  ಶ್ರೀ ಸಂಜೀವಾಂಜನೇಯ ಸ್ವಾಮಿ ಮಂದಿರದಲ್ಲಿ ಹನುಮ ಜಯಂತಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು