News Kannada
Saturday, October 01 2022

ಮೈಸೂರು

ಮಹಾನಗರ ಪಾಲಿಕೆಯ ನೌಕರರೆಂದು ಹೇಳಿ ಕಳವು! - 1 min read

Photo Credit :

ಮಹಾನಗರ ಪಾಲಿಕೆಯ ನೌಕರರೆಂದು ಹೇಳಿ ಕಳವು!

ಮೈಸೂರು: ಮಹಾನಗರ ಪಾಲಿಕೆಯ ನೌಕರರೆಂದು ಮನೆ ಅಳತೆ ಮಾಡುವ ನೆಪದಲ್ಲಿ ಬಂದ ಮನೆಗಳ್ಳರು ಮನೆಯಲ್ಲಿದ್ದ ಸುಮಾರು 280 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ನಗರದ ಕುವೆಂಪುನಗರದ ಡಿಪೋ ರಸ್ತೆ ಬಳಿ ನಡೆದಿದೆ.

ನಗರದ ಕುವೆಂಪುನಗರದ ಡಿಪೋ ರಸ್ತೆ ಬಳಿಯಿರುವ ಕೆ.ಜೆ ಲೀಲಾದೇವಿ ಎಂಬುವವರ ಮನೆಗೆ ಮಹಾನಗರ ಪಾಲಿಕೆಯ ನೌಕರರು, ಮನೆ ಅಳತೆ ಮಾಡಲು ಬಂದಿದ್ದೇವೆ ಎಂದು ಬಂದವರು ಪರಿಚಯ ಮಾಡಿಕೊಂಡಿದ್ದಾರೆ. ಇದನ್ನು ನಂಬಿದ ಮನೆಯವರು ಮನೆ ಅಳತೆ ಮಾಡಲು ಅನುಮತಿ ನೀಡಿದ್ದಾರೆ. ಮನೆ ಅಳತೆ ಮಾಡುವ ನೆಪದಲ್ಲಿ ಮನೆಯೊಳಗೆ ಪ್ರವೇಶ ಮಾಡಿದ ಕಳ್ಳರು ರೂಂನಲ್ಲಿದ್ದು ಸುಮಾರು 280 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ರೂಂನಲ್ಲಿದ್ದ ಬೀರು ತೆರೆದಿದ್ದನ್ನು ಗಮನಿಸಿದ ಮನೆಯವರು ಅನುಮಾನಗೊಂಡು ಪರೀಶಿಲನೆ ನಡೆಸಿದಾಗ ಚಿನ್ನಾಭರಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕುವೆಂಪುನಗರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

See also  ಮೋರಿಯಲ್ಲಿ ಏಳು ತಿಂಗಳ ಭ್ರೂಣ ಬಿಸಾಕಿದ ಪಾಪಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು