ಮೈಸೂರು: ಯೋಧನ ತಂದೆಯ ಮೇಲೆ ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪಿರಿಯಾಪಟ್ಟಣ ಪೊಲೀಸರು ತಡವಾಗಿ ಬಂಧಿಸಿದ್ದಾರೆ.
ಘಟನೆಯ ಹಿನ್ನಲ್ಲೆ:
ಮೈಸೂರು ಜಿಲ್ಲೆಯ ಪಿರಿಯಾಟ್ಟಣ ತಾಲೂಕಿನ ಮೂತ್ತೂರು ಕಾಲೋನಿಯ ಯೋಧ ಮಂಜುನಾಥ್ ಸದ್ಯ
ಜಾರ್ಖಂಡ್ ನಲ್ಲಿ ಭದ್ರತಾ ಕರ್ತವ್ಯದಲ್ಲಿದ್ದಾರೆ. ಇವರ ತಂದೆಗೆ ಕಳೆದ ಕೆಲ ದಿನಗಳ ಹಿಂದೆ ಊರಿನಲ್ಲೇ ಅಪಘಾತವಾಗಿದ್ದು, ಈ ವೇಳೆ ಸ್ಥಳೀಯರು ಇವರ ಮೇಲೆ ಹಲ್ಲೆ ಮಾಡಿದ ಪರಿಣಾಮ ಮಂಜುನಾಥ್ ತಂದೆ ರಾಜಣ್ಣ ತೀರ್ವವಾಗಿ ಅಸ್ವಸ್ಥಗೊಂಡು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಘಟನೆ ನಡೆದರೂ ಪೊಲೀಸರು ಆರೋಪಿಗಳ ವಿರುದ್ದ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಇದರಿಂದ ಬೇಸರಗೊಂಡ ಯೋಧ ಮಂಜುನಾಥ್ ನಮ್ಮ ತಂದೆಗೆ ಅನ್ಯಾಯವಾಗಿದ್ದರೂ ಪಿರಿಯಾಪಟ್ಟಣ ಪೊಲೀಸರು ಸ್ಪಂದಿಸಿಲಲ್. ಅಪಘಾತದ ಬಳಿಕ ಪ್ರಕರಣ ದಾಖಲಿಸದೆ ನಿರ್ಲಕ್ಷ್ಯತೋರುತ್ತಿದ್ದಾರೆ ಎಂದು ವಾಟ್ಸಪ್ ಹಾಗೂ ಫೇಸ್ ಬುಕ್ ನಲ್ಲಿ ವಿಡಿಯೋ ಮಾಡಿ ಅಳಲು ತೋಡಿಕೊಂಡಿದರು.
ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರಗೊಂಡ ಬಳಿಕ ಎಚ್ಚೆತ್ತ ಪಿರಿಯಾಪಟ್ಟಣ ಪೊಲೀಸರು ಸತೀಶ(30) ದುಶ್ಯಂತ(30) ಎಂಬುವವರನ್ನ ಬಂಧಿಸಿದ್ದಾರೆ. ಈ ಸಂಬಂದ ಆರೋಪಿಗಳ ವಿರುದ್ದ 379,337,304,323 ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.