News Kannada
Friday, December 02 2022

ಮೈಸೂರು

ರಸ್ತೆ ಅಪಘಾತ: ಅಣ್ಣ- ತಂಗಿ ಸಾವು

Photo Credit :

ರಸ್ತೆ ಅಪಘಾತ: ಅಣ್ಣ- ತಂಗಿ ಸಾವು

ಮೈಸೂರು: ರಸ್ತೆ ಅಫಘಾತದಲ್ಲಿ ಅಣ್ಣ, ತಂಗಿ ದಾರುಣವಾಗಿ ಸಾವ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದಲ್ಲಿ ನಡೆದಿದೆ.

ಘಟನೆ ವಿವರ: ಅಮೋಘ ವರ್ಷ(18), ಅಮೃತ ವರ್ಷಿಣಿ(14) ಮೃತಪಟ್ಟ ಅಣ್ಣತಂಗಿ. ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದ ಪುರದ ಬಳಿ ನಿನ್ನೆ ರಾತ್ರಿ ಇಬ್ಬರು ಬೈಕ್ ನಲ್ಲಿ ತಮ್ಮ ಗ್ರಾಮ ಗೊರಳ್ಳಿಗೆ ಹೊರಟ್ಟಿದ್ದ ವೇಳೆ ಈ ಅವಘಡ ಸಂಭವಿಸಿದೆ. ಲಾರಿಯೊಂದು ಏಕಾಏಕಿ ರಸ್ತೆಗೆ ತಿರುಗಿದಾಗ ವೇಗದಲ್ಲಿ ಬೈಕ್ ನಲ್ಲಿ ಬರುತ್ತಿದ್ದ ಅಣ್ಣಾ, ತಂಗಿ ಲಾರಿಗೆ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದ ಜನರು: ರಸ್ತೆ ಅಫಫಾತದಲ್ಲಿ ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದರು ಜನರು ಈ ಇಬ್ಬರನ್ನು ರಕ್ಷಣೆ ಮಾಡದೆ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿರುವುದು ಎಲ್ಲರ ಆಕ್ರೋಶ ಕಾರಣವಾಗಿದೆ. ನಂತರ ಈ ಇಬ್ಬರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಮೃತಪಟ್ಟಿದ್ದಾರೆ. ಈ ಸಂಬಂಧ ಬೆಟ್ಟದ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

See also  ಮಂಡ್ಯದಲ್ಲಿ ಕರುಣಾನಿಧಿಗೆ ಏಕಾಂಗಿ ಶ್ರದ್ಧಾಂಜಲಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು