News Kannada
Sunday, December 04 2022

ಮೈಸೂರು

ತಪ್ಪಾದ ಸಂದೇಶ ನೋಡಿ ಬೇಸ್ತು ಬಿದ್ದ ಪಾಲಕರು!

Photo Credit :

ತಪ್ಪಾದ ಸಂದೇಶ ನೋಡಿ ಬೇಸ್ತು ಬಿದ್ದ ಪಾಲಕರು!

ಗುಂಡ್ಲುಪೇಟೆ: ತಾಲೂಕಿನ ಚಿಕ್ಕತುಪ್ಪೂರು ಬಳಿಯಿರುವ ಸರ್ಕಾರಿ ಆದರ್ಶ ಶಾಲೆಗೆ ದಾಖಲಾಗಲು ಇಂದೇ(ಶುಕ್ರವಾರ) ಕೊನೆಯ ದಿನವಾಗಿದ್ದು, ಮೂಲ ದಾಖಲಾತಿಗಳೊಂದಿಗೆ ಬರುವಂತೆ ಶಾಲೆಯಿಂದ ಕಳುಹಿಸಿದ ಸಂದೇಶದಿಂದ ಎಲ್ಲ ಅರ್ಜಿದಾರರೂ ಆಗಮಿಸಿ ಬೇಸ್ತುಬಿದ್ದ ಘಟನೆ ನಡೆದಿದೆ.

ಸರ್ಕಾರಿ ಆದರ್ಶ ಶಾಲೆಯಲ್ಲಿ ಆರನೇ ತರಗತಿಯಿಂದ ಎಸ್‍ಎಸ್‍ಎಲ್‍ಸಿವರೆಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. 80 ಸ್ಥಾನಗಳಿಗೆ ಪ್ರವೇಶ ಪಡೆಯಲು ತಾಲೂಕಿನ ಎಲ್ಲ್ಲ ಶಾಲೆಗಳ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ಸುಮಾರು 1000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರು ಪ್ರವೇಶ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಆನ್‍ಲೈನ್ ಮೂಲಕವೇ ಆಯ್ಕೆಯಾದವರ ಹೆಸರು ಪ್ರಕಟವಾಗುತ್ತದೆ. ಇವರಲ್ಲಿ ಎಸ್‍ಸಿ, ಎಸ್ಟಿ ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಇಂತಿಷ್ಟು ಎಂದು ಸೀಟುಗಳು ನಿಗದಿ ಮಾಡಲಾಗಿದ್ದು ಸದ್ಯ ಒಬಿಸಿ ವರ್ಗಕ್ಕೆ ಸೇರಿದ 76 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಉಳಿದ ಎಸ್‍ಸಿ, ಎಸ್ಟಿ ವರ್ಗದ 4 ಸೀಟುಗಳಿಗೆ ಭರ್ತಿ ಮಾಡಲು ಆಯಾ ವರ್ಗದ ವಿದ್ಯಾರ್ಥಿಗಳಿಗೆ ಶಾಲೆಯಿಂದ ಎಸ್‍ಎಂಎಸ್ ಕಳಿಸುವ ಬದಲು ಪ್ರವೇಶ ಪಡೆಯಲು ಇಂದೇ ಕೊನೆಯ ದಿನವಾಗಿದ್ದು 11 ಗಂಟೆಯ ಒಳಗೆ ಮೂಲ ದಾಖಲಾತಿಗಳನ್ನು ತರುವಂತೆ ಅರ್ಜಿ ಸಲ್ಲಿಸಿದ್ದ ಎಲ್ಲರಿಗೂ ಸಂದೇಶ ಕಳುಹಿಸಲಾಗಿದೆ. ಇದರಿಂದ ಸುಮಾರು 100ಕ್ಕೂ ಹೆಚ್ಚಿನ ಪಾಲಕರೂ ತಮ್ಮ ಮಕ್ಕಳನ್ನು ತರಗತಿಗಳಿಗೆ ಕಳಿಸದೆ ಆದರ್ಶ ಶಾಲೆಗೆ ಆಗಮಿಸಿದರು. ತಮ್ಮ ಮೊಬೈಲ್‍ಗಳಿಗೆ ಬಂದಿರುವ ಸಂದೇಶವನ್ನು ತೋರಿಸಿ ತಮ್ಮ ಮಕ್ಕಳಿಗೆ ಪ್ರವೇಶ ನೀಡುವಂತೆ ಒತ್ತಾಯಿಸಿದರು. ಇದು ಎಸ್‍ಸಿ, ಎಸ್‍ಟಿ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸಲಿದ್ದು ನಿಮಗಲ್ಲ ಎಂದು ಪಾಲಕರಿಗೆ ಮನವರಿಕೆ ಮಾಡುವಲ್ಲಿ ಶಿಕ್ಷಕರು ಹೈರಾಣಾದರು. ಶಾಲೆಯಿಂದ ಬಂದ ಸಂದೇಶವನ್ನು ನಂಬಿ ತಮ್ಮ ಮಕ್ಕಳನ್ನು ಒಂದು ದಿನ ತರಗತಿಗಳಿಗೆ ಕಳುಹಿಸದೆ ತಮ್ಮ ಕೆಲಸಕಾರ್ಯಗಳನ್ನು ಬಿಟ್ಟು ಬಂದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದದ್ದು ಸ್ಥಳದಲ್ಲಿ ಕಂಡುಬಂದಿತ್ತು.

See also  ದಸರಾ ಹಬ್ಬದ ಗಜಪಡೆಗೆ ವಿಮೆ ಭಾಗ್ಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು