ಮೈಸೂರು: ತನ್ನ ವಿರುದ್ಧ ದೂರು ದಾಖಲಾಗುತ್ತಿದಂತೆ ಎಚ್ಚೆತ್ತ ನಿವೇದಿತಾ ಗೌಡ, ತಾನು ಅಪ್ ಲೋಡ್ ಮಾಡಿದ್ದ ಕಿಕಿ ಚಾಲೆಂಜ್ ವಿಡಿಯೋ ವನ್ನು ಇನ್ ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದು, ನಾನು ಗೊತ್ತಿಲ್ಲದೆ ಮಾಡಿದ್ದೇನೆ ಎಂದು ತಾಯಿಯ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ನಿಷೇಧಿತ ಕೀಕಿ ಚಾಲೆಂಜ್ ಸ್ವೀಕರಿಸಿ, ವಿಡಿಯೋ ಮಾಡಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದ ಬಿಗ್ ಬಾಸ್ ನ ಬಾರ್ಬಿ ಡಾಲ್ ಎಂದೇ ಪ್ರಸಿದ್ದಿ ಪಡೆದಿರುವ ನಿವೇದಿತಾ ಗೌಡ, ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದಂತೆ ಎಚ್ಚೆತ್ತು ತಾವು ಅಪ್ ಲೋಡ್ ಮಾಡಿದ್ದ ವಿಡಿಯೋವನ್ನು ಡೀಲಿಟ್ ಮಾಡಿದ್ದಾರೆ.
ನನಗೆ ಇದೊಂದು ನಿಷೇಧಿತ ಚಾಲೆಂಜ್ ಎಂದು ಗೊತ್ತಿರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಬಂದ ಹಿನ್ನೆಲೆಯಲ್ಲಿ ನಾನು ಈ ವಿಡಿಯೋ ಡಿಲೀಟ್ ಮಾಡಿದ್ದೇನೆಂದು ಮಗಳು ನನ್ನ ಬಳಿಯಲ್ಲಿ ಹೇಳಿದ್ದಾಳೆ ಎಂದು ನಿವೇದಿತಾ ಗೌಡ ತಾಯಿ ಹೇಮರಮೇಶ್ ದೂರವಾಣಿ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.