ಮೈಸೂರು: ಸ್ಪಿರಿಟ್ ಇವೆಂಟ್ಸ್ ಸಂಸ್ಥೆಯ ವತಿಯಿಂದ ವಿಶ್ವ ಸ್ನೇಹಿತರ ದಿನಾಚರಣೆಯ ಅಂಗವಾಗಿ ಅಗ್ರಹಾರ ವೃತ್ತದಲ್ಲಿ ಹಿಂದೂ ಕ್ರೈಸ್ತ ಮುಸಲ್ಮಾನ ಬಾಂಧವರಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಮೂಲಕ ಶಾಂತಿ ಸೌಹಾರ್ದತೆ ಸಹೋರತ್ವದ ಸಂದೇಶವನ್ನು ಸಾರಲಾಯಿತು.
ಹಿಂದೂ ಕ್ರೈಸ್ತ ಮುಸಲ್ಮಾನ ಬಾಂಧವರು ಹಸ್ತಲಾಘವ ಮಾಡಿ ಬಲೂನ್ ಗಳನ್ನು ಗಗನಕ್ಕೆ ಹಾರಿಬಿಡಲಾಯಿತು. ಈ ವೇಳೆ ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ ಅವರು ಸಾರ್ವಜನಿಕರಿಗೆ ಮತ್ತು ಜನಸ್ನೇಹಿ ಆರಕ್ಷಕ ಸಿಬ್ಬಂದಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಅಭಿಯಾನ ನಡೆಸಿದರು.
ಈ ವೇಳೆ ಮಾತನಾಡಿದ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ, ಆಗಸ್ಟ್ ಮೊದಲ ಭಾನುವಾರ ವಿಶ್ವ ಸ್ನೇಹಿತರ ದಿನಾಚರಣೆಯನ್ನಾಗಿ ವಿಶ್ವದೆಲ್ಲಡೆ ಆಚರಿಸಲಾಗುತ್ತದೆ ಆದರೆ ಕಳೆದ 8 ವರ್ಷಗಳಿಂದ ಸ್ಪಿರಿಟ್ ಇವೆಂಟ್ಸ್ ಸಂಸ್ಥೆಯು ಸ್ನೇಹಿತರ ದಿನಾಚರಣೆಯನ್ನು ಒಂದು ದಿವಸದ ಮುನ್ನ ವಿಶಿಷ್ಟವಾಗಿ ಸಮಾಜಕ್ಕೆ ಜಾಗೃತಿಯ ಸಂದೇಶ ನೀಡಲು ಅರ್ಥಪೂರ್ಣವಾಗಿ ಆಚರಿಸುತ್ತಿರುವ ಕಾರಣ ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ, ವಿದ್ಯಾಭ್ಯಾಸ, ವೃತ್ತಿಪರ ದಿನಗಳಲ್ಲಿ ಒಬ್ಬೊರಿಗೊಬ್ಬರು ಸ್ಪಂದಿಸಿರುತ್ತೇವೆ ಒಡನಾಟದಲ್ಲಿರುತ್ತೇವೆ. ಉತ್ತಮ ಬಾಂಧವ್ಯವಿರುತ್ತದೆ. ಆದರೆ ಕೆಲವು ನಿಷ್ಠೂರಕ ಹಾಗೂ ವ್ಯವಹಾರಿಕ ನಡೆನುಡಿಗಳಿಂದ ಬಾಂಧವ್ಯ ಮುರಿದುಹೋಗಿರುತ್ತದೆ. ಹಾಗಾಗಿ ಈ ಆಚರಣೆಯನ್ನು ಪ್ರತಿಯೊಬ್ಬರೂ ಆಚರಿಸುವ ಮೂಲಕ 100ರಲ್ಲಿ ಕನಿಷ್ಠ 10ಮಂದಿ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಶುಭ ಕೋರಲಿ ಮತ್ತೆ ಒಂದಾಗಲಿ ಎಂಬ ಜಾಗೃತಿಯೊಂದಿಗೆ ಅವರ ಗೆಳತನ ಶ್ರಾವಣವಾಗಲಿ ಎಂಬುವುದು ಸ್ಪಿರಿಟ್ ಇವೆಂಟ್ಸ್ ಸಂಸ್ಥೆಯ ಸದುದ್ದೇಶವಾಗಿದೆ ಅರ್ಥಪೂರ್ಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ, ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್, ಬಿಜೆಪಿ ಮುಖಂಡ ಎನ್.ಎಂ.ನವೀನ್ಕುಮಾರ್, ಚರಣ್ರಾಜ್, ನಗರಪಾಲಿಕೆ ಸದಸ್ಯ ಮಾವಿ.ರಾಂಪ್ರಸಾದ್, ಎಂ.ಡಿ ಪಾರ್ಥಸಾರಥಿ, ಜಿ. ಶ್ರೀನಾಥ್ ಬಾಬು, ಸ್ಪಿರಿಟ್ ಇವೆಂಟ್ಸಿನ ಅಜಯ್ ಶಾಸ್ತ್ರಿ, ಅಲ್ಪಸಂಖ್ಯಾತ ಮುಖಂಡ ನವಾಜ್ ಷರೀಫ್, ಜಮೀರ್ ಪಾಷ, ಶಯುಕ್, ಸಾಬೀರ್, ಸಾಧಿಕ್, ಸೈಯದ್ ಮೊಹಮ್ಮದ್, ಫರಾಜ್, ಪ್ರದೀಪ್ಗೌಡ, ಚರಣ್ರಾಜ್, ಹೆಚ್.ಎನ್ ಶ್ರೀಧರಮೂತರ್ಿ, ಹೆಚ್.ವಿ.ಭಾಸ್ಕರ್, ಪಂಚಾಕ್ಷರಿ, ಬಸವರಾಜು, ಗೋಲ್ಡ್ ಮಂಜು, ಗಿರೀಶ್ಗೌಡ, ತೇಜಸ್, ಅಭಿ, ಗುರುದತ್ತ, ರಾಕೇಶ್ಭಟ್, ಜಿ.ರಾಘವೇಂದ್ರ, ಎಸ್.ಎನ್.ರಾಜೇಶ್, ಶ್ರೀಕಾಂತ್ ಕಶ್ಯಪ್, ವಿನಯ್ ಕಣಗಾಲ್, ಯೋಗೀಶ್ ಮುಂತಾದವರು ಇದ್ದರು.