ಮಂಡ್ಯ: ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ನಿಧನದಿಂದ ತಮಿಳುನಾಡಿನಲ್ಲಿ ಅಭಿಮಾನಿಗಳು ದುಃಖದಿಂದ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದರೆ, ಇತ್ತ ಕರ್ನಾಟಕದ ಮಂಡ್ಯ ನಗರದಲ್ಲಿ ಅವರ ಅಭಿಮಾನಿಯೊಬ್ಬ ಏಕಾಂಗಿಯಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾನೆ.
ಮೂಲತಃ ತಮಿಳುನಾಡಿನ ಪಣತ್ತೂರಿನ ರಾಮು ಎಂಬ ಅಭಿಮಾನಿ ಎಂ.ಕರುಣಾನಿಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದವನು. ಈತ ಕಳೆದ ಐದು ವರ್ಷಗಳಿಂದ ಮಂಡ್ಯ ನಗರದಲ್ಲಿ ವಾಸವಿದ್ದು, ಬಣ್ಣ ಬಳಿಯುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾನೆ.
ಕರುಣಾನಿಧಿ ಅವರು ಬಡವರಿಗಾಗಿ ಒಳ್ಳೆಯ ಕೆಲಸ ಮಾಡಿದ್ದು, ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಬೆಂಗಳೂರು-ಮೈಸೂರು ಹೆದ್ದಾರಿಯ ನಂದಾ ಚಿತ್ರಮಂದಿರದ ಸಮೀಪ ಏಕಾಂಗಿಯಾಗಿ ಕರುಣಾನಿಧಿ ಅವರ ಭಾವಚಿತ್ರ ಹಿಡಿದು ಶ್ರದ್ಧಾಂಜಲಿ ಕೋರಿದ್ದಾನೆ.