ಮೈಸೂರು: ಕೇರಳದಲ್ಲಿ ಬಹಳ ದೊಡ್ಡ ಅನಾಹುತವಾಗಿದ್ದು, ಸುಮಾರು 30ಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ. ಕಬಿನಿ ಜಲಶಾಯದ ನದಿ ಪಾತ್ರದಲ್ಲಿರುವ ಜನರಿಗೆ ಮುನ್ನಚ್ಚರಿಕೆ ಕ್ರಮವಾಗಿ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಎಚ್ಚರಿಕೆ ಕೊಟ್ಟಿದ್ದೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಇಂದು ಆಶಾಡ ಮಾಸಾದ ಕೊನೆಯ ಶುಕ್ರವಾರದಂದು ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸಚಿವ ಡಿ.ಕೆ ಶಿವಕುಮಾರ್ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಕಬಿನಿ ಜಲಾಶಯದ ನದಿ ಪಾತ್ರದಲ್ಲಿರುವ ಜನರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸುರಕ್ಷಿತಪ್ರದೇಶಗಳಿಗೆ ತೆರಳುವಂತೆ ಎಚ್ಚರಿಕೆ ಕೊಟ್ಟಿದ್ದೇವೆ.
ಲೋಕಸಭೆಗೆ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ನಾನು ಇಲ್ಲಿ ರಾಜಕೀಯ ಮಾಡುವುದಕ್ಕೆ ಬಂದಿಲ್ಲ. ಭಕ್ತನಿಗೂ ಭಗವಂತನಿಗೂ ಇರುವ ವ್ಯವಹಾರ ಮಾಡುವ ಸ್ಥಳ. ತಾಯಿ ಮೇಲಿರುವ ಪ್ರೀತಿ ವಾತ್ಸಲ್ಯ ಮತ್ತು ಆಶೀರ್ವಾದವಿರುವ ಕಾರಣ ನಾನು ಚಾಮುಂಡಿ ಬೆಟ್ಟಕ್ಕೆ ಬಂದಿದ್ದೇನೆ. ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ ಎಂದರು.
ಇನ್ನೂ ಇಂದು ಪವಿತ್ರವಾದ ದಿನ. ಇಡೀ ನಾಡಿಗೆ ಬಹಳ ಸಮೃದ್ಧಿಯಿಂದ ವರುಣಾನ ಕೃಪೆ ಸಿಕ್ಕಿದೆ. ಇಡೀ ರಾಜ್ಯ, ಭೂಮಿ ತಂಪಾಗಿದೆ. ಅನೇಕ ಸಮಸ್ಯಗಳು ಬಗೆ ಹರಿಯುತ್ತದೆ. ದುಖವನ್ನ ದೂರ ಮಾಡುವಂತಹ ದೇವಿ ಚಾಮುಂಡಿ ತಾಯಿ ಎಂದರು.