News Kannada
Thursday, December 08 2022

ಮೈಸೂರು

ಮಂಡ್ಯದ ಬ್ಯಾಂಕ್‍ನಿಂದ 15 ಲಕ್ಷ ಎಗರಿಸಿದರು!

Photo Credit :

ಮಂಡ್ಯದ ಬ್ಯಾಂಕ್‍ನಿಂದ 15 ಲಕ್ಷ ಎಗರಿಸಿದರು!

ಮಂಡ್ಯ: ಹಾಡಹಗಲೇ ಬ್ಯಾಂಕ್ ಸಿಬ್ಬಂದಿಯ ಗಮನ ಬೇರೆಡೆ ಸೆಳೆದ ಖದೀಮರು 15 ಲಕ್ಷ ರೂ. ಎಗರಿಸಿರುವ ಘಟನೆ ನಗರದ ಬಂದೀಗೌಡ ಬಡಾವಣೆಯಲ್ಲಿರುವ ಎಸ್‍ಬಿಐ ಬ್ಯಾಂಕ್‍ನಲ್ಲಿ ಸೋಮವಾರ ನಡೆದಿದೆ.

ಬೆಳಗ್ಗೆ 10.30ರ ಸಮಯದಲ್ಲಿ ಬ್ಯಾಂಕ್ ತೆರೆಯುತ್ತಿದ್ದಂತೆ ಗುಂಪು ಕಟ್ಟಿಕೊಂಡು ಬಂದ 7 ರಿಂದ 10 ಮಂದಿಯ ಗುಂಪು ಬಂದಿದೆ. ಅಲ್ಲದೆ ಸಿಬ್ಬಂದಿಯ ಗಮನವನ್ನು ಬೇರೆಡೆ ಸೆಳೆದು ಹಣ ಎಗರಿಸಿದ್ದಾರೆ.

ಹಣ ಎಗರಿಸಿರುವುದು 15 ನಿಮಿಷಗಳ ಬಳಿಕ ಬ್ಯಾಂಕ್ ಸಿಬ್ಬಂದಿಯ ಗಮನಕ್ಕೆ ಬಂದಿದೆ. ಆದರೆ, ಅಷ್ಟರಲ್ಲಾಗಲೇ ಖದೀಮರು ಅಲ್ಲಿಂದ ಪರಾರಿಯಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದೊಂದಿಗೆ ಸ್ಥಳಕ್ಕೆ ಆಗಮಿಸಿದ ಸೆಂಟ್ರಲ್ ಪೊಲೀಸರು, ಪರಿಶೀಲಿಸಿದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಕಳ್ಳತನ ನಡೆಸಿರುವುದು ಬ್ಯಾಂಕ್‍ನ ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸೆಂಟ್ರಲ್ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

See also  ಪ್ರೋ ಕಡ್ಡಾಯ ನಿವೃತ್ತಿ: ವಿವಿಯ ಸಿಂಡಿಕೇಟ್ ಸಭೆ ತೀರ್ಮಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು