News Kannada
Friday, December 02 2022

ಮೈಸೂರು

ಬಂಡೀಪುರದಲ್ಲಿ ಯಂತ್ರಬಳಸಿ ಲಾಂಟನಾ ತೆರವಿಗೆ ವಿರೋಧ

Photo Credit :

ಬಂಡೀಪುರದಲ್ಲಿ ಯಂತ್ರಬಳಸಿ ಲಾಂಟನಾ ತೆರವಿಗೆ ವಿರೋಧ

ಚಾಮರಾಜನಗರ: ಬಂಡೀಪುರ ಹುಲಿಯೋಜನೆ ಅರಣ್ಯದೊಳಗೆ ಇಟಾಚಿ ಯಂತ್ರಗಳನ್ನು ಬಳಸಿ ಲಾಂಟನಾ ಸಸ್ಯವನ್ನು ತೆರವುಗೊಳಿಸುವ ಕಾರ್ಯ ಆರಂಭಿಸಲಾಗಿದೆ.

ಬಂಡೀಪುರದ ಅರಣ್ಯದ ವ್ಯಾಪ್ತಿಯ ವಿವಿಧ ವಲಯಗಳಲ್ಲಿ ಕೂಲಿಕಾರ್ಮಿಕರ ಬದಲು ಯಂತ್ರೋಪಕರಣಗಳನ್ನು ಬಳಕೆ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಾಯ್ದೆಯನ್ನು ಅರಣ್ಯದ ಅಧಿಕಾರಿಗಳೇ ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನು ಪರಿಸರ ಪ್ರೇಮಿಗಳು ಮಾಡುತ್ತಿದ್ದಾರೆ.

ಕೆಲವು ವರ್ಷಗಳ ಹಿಂದೆ ಕದ್ದುಮುಚ್ಚಿ ಇಟಾಚಿ ಬಳಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿಗೆ ಬಹುತೇಕ ಎಲ್ಲಾ ವಲಯಗಳಲ್ಲಿ ರಾಜಾರೋಷವಾಗಿ ಇಟಾಚಿ ಹಾಗೂ ಜೆಸಿಬಿಗಳಂತಹ ಭಾರೀ ಯಂತ್ರಗಳನ್ನು ಬಳಕೆ ಮಾಡಿಕೊಂಡು ಕಾಮಗಾರಿ ನಡೆಸಲಾಗುತ್ತಿರುವುದು ಕಂಡು ಬರುತ್ತಿದೆ.

ಮೇಲುಕಾಮನಹಳ್ಳಿ ಬಳಿಯಿಂದ ಕೆಕ್ಕನಹಳ್ಳ ಹಾಗೂ ಪ್ರವಾಸಿ ವಲಯದ ಹಲವು ಹುಲಿಯೋಜನೆ ಪ್ರದೇಶಗಳಲ್ಲಿ ಲಾಂಟನಾ ಸಸ್ಯವನ್ನು ತೆರವುಗೊಳಿಸಲು ಇಟಾಚಿ ಯಂತ್ರ ಬಳಸಲಾಗುತ್ತಿದೆ. ಕಳೆದ ಒಂದು ತಿಂಗಳಿಂದ ಬಂಡೀಫುರ ಹುಲಿಯೋಜನೆಯ ಕೆಕ್ಕನಹಳ್ಳ, ಬಂಡೀಪುರ, ಗೋಪಾಲಸ್ವಾಮಿಬೆಟ್ಟ ಅರಣ್ಯ ವಲಯಗಳಲ್ಲಿ ಈಗಾಗಲೇ ಇಟಾಚಿ ಹಾಗೂ ಜೆಸಿಬಿಗಳು ಲಾಂಟನಾ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತಂತೆ ವನ್ಯ ಜೀವಿ ಮಾಜಿ ಪರಿಪಾಲಕ ನವೀನ್‍ಕುಮಾರ್ ಮಾತನಾಡಿ, ಬಂಡೀಪುರವು ಹುಲಿಯೋಜನೆಗೆ ಸೇರಿದ್ದರಿಂದ ಅರಣ್ಯ ಇಲಾಖೆಯ ನಿಯಮಾನುಸಾರ ರಾಷ್ಟ್ರೀಯ ಉದ್ಯಾನ, ಹುಲಿಸಂರಕ್ಷಿತ ಅರಣ್ಯ ಪ್ರದೇಶ, ಪರಿಸರ ಸೂಕ್ಷ್ಮ ಅರಣ್ಯ ಪ್ರದೇಶಗಳಲ್ಲಿ ಭಾರೀ ಯಂತ್ರೋಪಕರಣಗಳನ್ನು ಬಳಕೆ ಮಾಡಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಅಗತ್ಯ. ಅರಣ್ಯದಲ್ಲಿ ಲಾಂಟನಾ ತೆರವುಗೊಳಿಸುವುದು ಸ್ವಾಗತಾರ್ಹ ಕೆಲಸ. ಆದರೆ ಕಾಮಗಾರಿಯನ್ನು ಇಟಾಚಿ ಅಥವಾ ಜೆಸಿಬಿಯಲ್ಲಿ ಮಾಡಿ ಕಾರ್ಮಿಕರ ಹೆಸರಲ್ಲಿ ಬಿಲ್ ಮಾಡುತ್ತಿರುವುದು ಕೂಡ ಅಕ್ಷಮ್ಯ ಅಪರಾಧ ಎಂದು ಹೇಳಿದ್ದಾರೆ.

See also  ಗ್ರಂಥಾಲಯದ ನೂತನ ಕಟ್ಟಡ ಉದ್ಘಾಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು