News Kannada
Tuesday, September 27 2022

ಮೈಸೂರು

ಪಿರಿಯಾಪಟ್ಟಣದಲ್ಲಿ ಶಾಲಾ ಶಿಕ್ಷಕಿಯ ವಿರುದ್ಧ ಪ್ರತಿಭಟನೆ - 1 min read

Photo Credit :

ಪಿರಿಯಾಪಟ್ಟಣದಲ್ಲಿ ಶಾಲಾ ಶಿಕ್ಷಕಿಯ ವಿರುದ್ಧ ಪ್ರತಿಭಟನೆ

ಪಿರಿಯಾಪಟ್ಟಣ: ಶಾಲೆಯಲ್ಲಿ ವಿದ್ಯಾರ್ಥಿಗಳು ಜಾತಿ ನಿಂದನೆ ಮಾಡಿದರೂ ಶಿಕ್ಷಕಿ ಕ್ರಮ ಕೈಗೊಳ್ಳದೆ ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂದು ಆರೋಪಿಸಿ ಶಾಲೆ ಮುಂಭಾಗ ಪೋಷಕರು ಮತ್ತು ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆದಿ ದ್ರಾವಿಡ ಪೌರಕಾರ್ಮಿಕ ಹಾಗೂ ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ಹೆಚ್.ಕೆ.ಮಹೇಶ್ ಮಾತನಾಡಿ, ಕಳೆದ ಶನಿವಾರದಂದು ಈ ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಪೂರ್ವಿಕ್ ಹಾಗೂ ತಿಲಕ್ ಎಂಬ ವಿದ್ಯಾರ್ಥಿಗಳನ್ನು ನಿಮ್ಮ ತಂದೆ ಚಪ್ಪಲಿ ಹೊಲೆಯುವ ವೃತ್ತಿ ಮಾಡುವುದಾಗಿ ಹೇಳಿ ನಿಂದಿಸಿ ಅವಮಾನಿಸಿದ್ದಾರೆ. ಇದರಿಂದ ಮನ ನೊಂದ ಈ ವಿದ್ಯಾರ್ಥಿಗಳು ಶಾಲಾ ಶಿಕ್ಷಕಿಯ ಗಮನಕ್ಕೆ ತಂದರೂ ತಾರತಮ್ಯ ತೋರಿಸಿದ್ದಾರೆ ಇದು ಖಂಡನೀಯ. ಕೂಡಲೇ ಶಿಕ್ಷಕಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಚಿಕ್ಕಸ್ವಾಮಿ, ಸಮಸ್ಯೆ ಆಲಿಸಿದರಾದರೂ ಶಿಕ್ಷಕಿಯು ಶಾಲೆಗೆ ಗೈರು ಹಾಜರಾದ ಕಾರಣ ಶಾಲೆಗೆ ಬಂದ ನಂತರ ಈ ಘಟನೆ ಬಗ್ಗೆ ಚರ್ಚಿಸಿ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಕ್ರಮವಹಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಮಹಾದೇವಪ್ಪ. ಮುಖೋಪಧ್ಯಾಯ ರವಿ, ಆದಿ ದ್ರಾವಿಡ ಪೌರಕಾರ್ಮಿಕ ಹಾಗೂ ಸಫಾಯಿ ಕರ್ಮಚಾರಿ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಟಿ.ಶ್ರೀನಿವಾಸ್, ಉಪಾಧ್ಯಕ್ಷ ನಾಗರಾಜು, ಆದಿಜಾಂಬವ ಸಂಘದ ಜಿಲ್ಲಾ ಉಪಾಧ್ಯಕ್ಷ ಸೀಗೂರು ವಿಜಯ್ ಕಮಾರ್, ರಘು, ಲವ, ಕಿರಣ್, ಶಶಿಕುಮಾರ್, ವಿನೋದ್, ಭರತ್, ರಾಜೀವ, ಭದ್ರಕುಮಾರ್, ವಿನಯ್, ಸುಶೀಲಾ, ಅನ್ನಪೂರ್ಣ, ಮಂಜುನಾಥ್, ರಾಮು, ಸತೀಶ್, ರವಿ, ಸುಬ್ರಹ್ಮಣ್ಯ ಇದ್ದರು.

See also  ಜೆಡಿಎಸ್ ಕಾರ್ಯಕರ್ತನ ಹತೈಗೈದ ಹಂತಕರು ಅರೆಸ್ಟ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು