News Kannada
Monday, October 03 2022

ಮೈಸೂರು

ಸಾಲಕ್ಕೆ ಹೆದರಿ ವೃದ್ದ ದಂಪತಿ ಕೊರಗಿ ಸಾವು - 1 min read

Photo Credit :

ಸಾಲಕ್ಕೆ ಹೆದರಿ ವೃದ್ದ ದಂಪತಿ ಕೊರಗಿ ಸಾವು

ಮೈಸೂರು: ಬ್ಯಾಂಕ್ ನೀಡಿದ ನೋಟೀಸ್‍ಗೆ ಹೆದರಿ ವೃದ್ಧ ದಂಪತಿ ಕೊರಗಿ ಹಾಸಿಗೆ ಹಿಡಿದು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಹಾಡ್ಯ ಗ್ರಾಮದಲ್ಲಿ ನಡೆದಿದೆ.

ಹಾಡ್ಯ ಗ್ರಾಮದ ನಿವಾಸಿ ಚಿಕ್ಕನಾಯಕ ಹಾಗೂ ಸಿದ್ದಮ್ಮ ಮೃತಪಟ್ಟ ದುರ್ದೈವಿಗಳು. ಟ್ರ್ಯ್ರಾಕ್ಟರ್ ಖರೀದಿಗಾಗಿ ಚಿಕ್ಕನಾಯಕ ಹಾಗೂ ಪುತ್ರ ಶಿವಣ್ಣ ಎಸ್.ಬಿ.ಎಂ.ಬ್ಯಾಂಕ್ ನಲ್ಲಿ ಜಂಟಿ ಸಾಲ ಪಡೆದಿದ್ದರು. ಅಲ್ಲದೆ 7 ಲಕ್ಷ ಸಾಲಕ್ಕಾಗಿ ಮನೆ ಹಾಗೂ ಜಮೀನು ಪತ್ರ ಅಡವಿಟ್ಟಿದ್ದರು. ಮಳೆಯಿಲ್ಲದೆ ಬೆಳೆ ಕೈಕೊಟ್ಟ ಹಿನ್ನಲೆ ಸಾಲ ತೀರಿಸುವುದು ವಿಳಂಬವಾಗಿತ್ತು. 7 ಲಕ್ಷ ಸಾಲ ಬಡ್ಡಿ ಸೇರಿ 10 ಲಕ್ಷ ವಾಗಿತ್ತು. ಬ್ಯಾಂಕ್ ಅಧಿಕಾರಿಗಳು ಸಾಲ ಮರುಪಾವತಿಗಾಗಿ ಒತ್ತಡ ಹೇರಿದಾಗ ಹಂತ ಹಂತವಾಗಿ 5 ಲಕ್ಷ ತೀರಿಸಿದ್ದರು. ಪಾವತಿಸಿದ ಹಣವನ್ನ ಬಡ್ಡಿಗೆ ವಜಾ ಮಾಡಿಕೊಂಡ ಅಧಿಕಾರಿಗಳು ಮತ್ತೆ ಹಣಕ್ಕಾಗಿ ನೋಟೀಸ್ ಜಾರಿ ಮಾಡಿದ್ದರು.

ಈ ನಡುವೆ ಗ್ರಾಮಪಂಚಾಯ್ತಿ ಕಚೇರಿ ಹಾಗೂ ಗ್ರಾಮದ ಪ್ರಮುಖ ಸ್ಥಳಗಳ ಗೋಡೆಗಳ ಮೇಲೆ ನೋಟೀಸ್ ಅಂಟಿಸಿ ಟಾಮ್ ಟಾಮ್ ಹೊಡೆಸಿದ್ದರು. ಹಣ ಮರುಪಾವತಿಸದಿದ್ದಲ್ಲಿ ಹರಾಜು ಹಾಕುವುದಾಗಿ ಒತ್ತಡ ಹೇರುತ್ತಾ ಬಂದರು. ಇದರಿಂದ ಆಸ್ತಿ ಕಳೆದುಕೊಳ್ಳುವುದಲ್ಲದೆ ತಮ್ಮ ಗೌರವಕ್ಕೆ ಧಕ್ಕೆಯಾಗಲಿದೆ ಎಂದು ಅರಿತ ದಂಪತಿ ಕೊರಗಿದ್ದರು. ಇದೇ ಕೊರಗಿನಲ್ಲಿ ಮಗ ಶಿವಣ್ಣ ಕೆಲ ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದಿದ್ದರು. ತಮ್ಮ ದುಃಸ್ಥಿತಿಗೆ ಮರುಗಿದ ತಾಯಿ ಸಿದ್ದಮ್ಮ ಕೊರಗುತ್ತಲೇ ಹಾಸಿಗೆ ಹಿಡಿದ್ದರಲ್ಲದೆ, ಕಳೆದ ತಿಂಗಳು ಸಾವನ್ನಪ್ಪಿದರು. ತಾಯಿ ಸಾವನ್ನಪ್ಪಿದ ಕೆಲ ದಿನಗಳ ಅಂತರದಲ್ಲೇ ತಂದೆ ಚಿಕ್ಕನಾಯಕ ಸಹ ಪತ್ನಿಯ ಹಾದಿ ಹಿಡಿದಿದ್ದಾರೆ. ವೃದ್ಧ ದಂಪತಿ ಸಾವಿಗೆ ಬ್ಯಾಂಕ್ ಅಧಿಕಾರಿಗಳ ವರ್ತನೆಯೇ ಕಾರಣವೆಂದು ಕುಟುಂಬಸ್ಥರು ಇದೀಗ ದೂರುತ್ತಿದ್ದಾರೆ.

See also  ಶಾಸಕ ಚಿಕ್ಕಮಾದು ನಿಧನಕ್ಕೆ ಗಣ್ಯರಿಂದ ಅಂತಿಮ ನಮನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು