News Kannada
Thursday, September 29 2022

ಮೈಸೂರು

ದಸರಾ ಬನ್ನಿಮಂಟಪ ಧ್ವಂಸ: ವರದಿ ನೀಡಲು ಸೂಚನೆ - 1 min read

Photo Credit :

ದಸರಾ ಬನ್ನಿಮಂಟಪ ಧ್ವಂಸ: ವರದಿ ನೀಡಲು ಸೂಚನೆ

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಐತಿಹಾಸಿಕ ದಸರಾ ಮಂಟಪ ಧ್ವಂಸ ಹಾಗೂ ತಾಲೂಕು ಕಚೇರಿಯ ತಹಸೀಲ್ದಾರ್‍ ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ, ಬೇಜವಾಬ್ದಾರಿತನ ತೋರುತ್ತಿರುವ ಕುರಿತು ಬೆಂಗಳೂರು ಮುಖ್ಯಕಾರ್ಯದರ್ಶಿ ಅವರು ಖುದ್ದು ಪರಿಶೀಲನೆ ನಡೆಸುವಂತೆ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ನಿರ್ದೇಶನ ನೀಡಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಭ್ರಷ್ಟಾಚಾರ, ಲಂಚಗುಳಿತನ, ಲಂಗುಲಗಾಮಿಲ್ಲದೆ ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ರೈತರ, ಜನಸಾಮಾನ್ಯರ ಶೋಷಣೆ ಮಾಡುತ್ತಿದ್ದಾರೆ. ಇದಕ್ಕೆ ಕೂಡಲೇ ಕಡಿವಾಣ ಹಾಕಬೇಕೆಂದು ಹಾಗೂ ದಸರಾ ಮಂಟಪ ಪುನರ್ ನಿರ್ಮಾಣ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ ಮುಖಂಡ ಕಿರಂಗೂರು ಪಾಪು (ಮೋಹನ್‍ಕುಮಾರ್) ಈ ಹಿಂದೆಯೇ ಮುಖ್ಯಕಾರ್ಯದರ್ಶಿ ಹಾಗೂ ಮೈಸೂರಿನ ಪ್ರಾಚೀನ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆಯ ಇಲಾಖೆಯ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಐತಿಹಾಸಿಕ ದಸರಾ ಆಚರಣೆಯ ಬನ್ನಿಮಂಟಪವನ್ನು ಪಟ್ಟಭದ್ರ ಹಿತಾಸಕ್ತಿಗಳು ಏಕಾಏಕಿ ಧ್ವಂಸ ಮಾಡಿರುವವರ ವಿರುದ್ಧ ಹಾಗೂ ಕಾವೇರಿ ನದಿಯ ಖರಾಬು ಜಮೀನಿನ ಮಧ್ಯ ಮಂಟಪವನ್ನು ಸೇರಿ ಆರ್‍ಟಿಸಿ ಮಾಡಿ ಕೋಟ್ಯಂತರ ರೂ.ಗಳಿಗೆ ಮಾರಾಟ ಮಾಡಿ ರೆಸಾರ್ಟ್, ಕಮರ್ಷಿಯಲ್ ಕಟ್ಟಡ ನಿರ್ಮಾಣ ಮಾಡಲು ಹೊರಟಿರುವವರ ವಿರುದ್ಧ ಹಾಗೂ ತಹಸೀಲ್ದಾರ್ ವಿರುದ್ಧ ಸಮಗ್ರ ತನಿಖೆ ಮಾಡುವಂತೆ ಮುಖ್ಯಕಾರ್ಯದರ್ಶಿಯವರ ಗಮನ ಸೆಳೆಯಲಾಗಿತ್ತು.

ತಾಲೂಕು ಕಚೇರಿಯಲ್ಲಿ ದಿನನಿತ್ಯ ಜನಸಾಮಾನ್ಯರು, ವೃದ್ಧರು, ರೈತರನ್ನು ಅಲೆದಾಡಿಸುವುದೇ ಕಾಯಕವಾಗಿದೆ. ಕಚೇರಿಯ ನಾನಾ ಶಾಖೆಗಳಲ್ಲಿ ಅರ್ಜಿ ನೀಡಿದರೆ ವರ್ಷಗಟ್ಟಲೆಯಾದರೂ ಅರ್ಜಿ ಅರ್ಜಿಯಾಗೇ ಉಳಿದಿರುತ್ತದೆ. ಅರ್ಜಿಗೆ ಸಮರ್ಪಕವಾಗಿ ಉತ್ತರವನ್ನೂ ನೀಡದೆ ಸಬೂಬು ಹೇಳಿ ಜನರನ್ನು ಸಾಗ ಹಾಕುತ್ತಿದ್ದಾರೆ. ಬನ್ನಿಮಂಟಪ ಧ್ವಂಸ ಹಾಗೂ ಶ್ರೀರಂಗಪಟ್ಟಣ ತಹಸೀಲ್ದಾರ್ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸಂಬಂಧ ಜಿಲ್ಲಾಧಿಕಾರಿಗಳು ಪಾಂಡವಪುರ ಉಪವಿಭಾಗಾಧಿಕಾರಿ ಶೈಲಜಾ ಅವರಿಗೆ ಕೂಡಲೇ ಈ ಬಗ್ಗೆ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಹಾಗೂ ಶ್ರೀರಂಗಪಟ್ಟಣ ತಹಸೀಲ್ದಾರ್ ಅವರ ವರ್ತನೆ ಕುರಿತಂತೆ ವರದಿ ನೀಡುವಂತೆ ತಾಕೀತು ಮಾಡಿದ್ದಾರೆ.

See also  ಸಿಎಂ ಮಗ ಬೆಲ್ಜಿಯಂಗೆ ಹೋಗಿದ್ದು ಕುಡಿದು ಡ್ರಗ್ಸ್ ತಗೊಂಡು ಮಜಾ ಮಾಡೋಕೆ: ಶ್ರೀನಿವಾಸ್ ಪ್ರಸಾದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು